MS Dhoni: ಧೋನಿ ಹುಟ್ಟಿದ ಹಬ್ಬಕ್ಕೆ ಅಭಿಮಾನಿಗಳು ಮಾಡಿರೋದೇನು ಗೊತ್ತಾ? ಹುಚ್ಚು ಅಭಿಮಾನ.

MS Dhoni ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಭಾರತ ಕ್ರಿಕೆಟ್ ಕಂಡಂತಹ ಅತ್ಯಂತ ಶ್ರೇಷ್ಠ ನಾಯಕರಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ನಿಜಕ್ಕೂ ಕೂಡ ಅವರಂತಹ ಕ್ರಿಕೆಟಿಗ ಹಾಗೂ ಅದ್ಭುತ ನಾಯಕ ಮತ್ತೆ ಕ್ರಿಕೆಟ್ ಜಗತ್ತು ಕಾಣುವುದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಅವರ ವ್ಯಕ್ತಿತ್ವ ಕೂಡ ಅವರ ಕ್ರಿಕೆಟ್ ಮೈದಾನದಲ್ಲಿ ಇರುವಂತಹ ನಡವಳಿಕೆಯ ರೀತಿಯಲ್ಲೇ ಇದೆ.

ಮಹೇಂದ್ರ ಸಿಂಗ್ ಧೋನಿ ಅವರಿಗೆ ಇಂದು 42 ವರ್ಷ ವಯಸ್ಸಾಗಿದ್ದು ತಮ್ಮ ಜನ್ಮ ದಿನಾಚರಣೆಯನ್ನು ತಮ್ಮ ಕುಟುಂಬದವರ ಜೊತೆಗೆ ಆಚರಿಸಿಕೊಳ್ಳುತ್ತಿದ್ದಾರೆ. ಈ ವಯಸ್ಸಿನಲ್ಲಿ ಕೂಡ ಯುವ ಕ್ರಿಕೆಟಿಗರು ಕೂಡ ನಾಚುವಂತೆ ಅವರು ಆಡುವಂತಹ ರೀತಿ ಪ್ರತಿಯೊಬ್ಬರಿಗೂ ಕೂಡ ಸ್ಪೂರ್ತಿದಾಯಕವಾಗಿದೆ.

ಇನ್ನು ಅವರ 42ನೇ ವರ್ಷದ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಮಾಡಿರುವ ಕೆಲಸ ನೋಡಿದ ಖಂಡಿತವಾಗಿ ನೀವು ಕೂಡ ಆಶ್ಚರ್ಯಪಡುತ್ತೀರಾ. ಇಷ್ಟಕ್ಕೂ ಧೋನಿ(Dhoni) ಅವರ ಅಭಿಮಾನಿಗಳು ಮಾಡಿರುವುದಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ.

ಸಾಮಾನ್ಯವಾಗಿ ಸಿನಿಮಾ(Cinema) ಹಾಗೂ ರಾಜಕಾರಣಿ ವ್ಯಕ್ತಿಗಳ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕರಿಗೆ ಕಟೌಟ್ ಹಾಕುವುದನ್ನು ನೀವು ನೋಡಿರುತ್ತೀರಿ. ಆದರೆ ಹೈದ್ರಾಬಾದಿನಲ್ಲಿರುವಂತಹ ಮಹೇಂದ್ರ ಸಿಂಗ್ ಧೋನಿ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನ ಜನ್ಮದಿನಕ್ಕೆ 77 ಅಡಿಗೂ ಎತ್ತರದ ಕಟೌಟ್ ಅನ್ನು ಹಾಕಿದ್ದಾರೆ.

Leave a Comment