KL Rahul ಕರ್ನಾಟಕ ಮೂಲದ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವಂತಹ ಕೆ ಎಲ್ ರಾಹುಲ್(KL Rahul) ರವರು ಇಂಜುರಿಯಿಂದ ಭಾರತೀಯ ಕ್ರಿಕೆಟ್ ತಂಡದಿಂದ ಹೊರ ಬಿದ್ದಿರುವುದು ನಿಮಗೆಲ್ಲರಿಗೂ ತಿಳಿದಿದೆ. ಇನ್ನು ಇದೇ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ಏಕದಿನ ವಿಶ್ವ ಕಪ್ ಕೂಡ ಪ್ರಾರಂಭವಾಗಲಿದೆ.
ಈ ಬಾರಿ ನಡೆಯಲಿರುವಂತಹ ವಿಶ್ವಕಪ್(WC 2023) ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಯಾರಿಲ್ಲ ಆಡಲಿದ್ದಾರೆ ಎನ್ನುವ ರಹಸ್ಯ ಕೂಡ ಇನ್ನು ರಹಸ್ಯವಾಗಿಯೇ ಉಳಿದುಕೊಂಡಿದೆ. ಅದರಲ್ಲಿ ಕೆ ಎಲ್ ರಾಹುಲ್ ಅವರು ಆರಂಭಿಕನಾಗಿ ಆಟವಾಡುತ್ತಾರೋ ಇಲ್ಲವೋ ಎನ್ನುವುದು ಕೂಡ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿರುವಂತಹ ಪ್ರಶ್ನೆಯಾಗಿದೆ.
ಮೊದಲನೇದಾಗಿ ಕಾರಣವೆಂದರೆ ರಾಹುಲ್ ರವರು ತಮ್ಮ ಎಂಜಿನಿಯರಿಂಗ ಹೊರಬಂದು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿ ಫಾರ್ಮಗೆ ಮರಳಿ ಬರುವಂತಹ ಸರಣಿಯಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಕೂಡ ಕಾದು ನೋಡಬೇಕಾಗಿದ್ದು ಮತ್ತೊಂದು ಕಡೆಯಲ್ಲಿ ಅವರ ಸ್ಥಾನವನ್ನು ಕಸಿದುಕೊಳ್ಳಲು ಮತ್ತೊಬ್ಬ ಯುವ ಕ್ರಿಕೆಟಿಗ ಸಿದ್ಧನಾಗಿದ್ದಾರೆ. ಹಾಗಿದ್ದರೆ ಅದು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಹೌದು ನಾವು ಮಾತನಾಡುತ್ತಿರುವುದು ಶುಭಮನ್ ಗಿಲ್(Shubhman Gill) ಅವರ ಬಗ್ಗೆ. ಈಗಾಗಲೇ ಭಾರತೀಯ ಪಿಚ್ ನಲ್ಲಿ ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಅನ್ನು ಹೊಂದಿರುವ ಗಿಲ್ ಸದ್ಯದ ಮಟ್ಟಿಗೆ ಒಳ್ಳೆಯ ಫಾರ್ಮಿನಲ್ಲಿ ಇದ್ದಾರೆ ಹಾಗೂ ಐಪಿಎಲ್ ನಲ್ಲಿ ಕೂಡ ಚೆನ್ನಾಗಿ ಆಡಿದ್ದಾರೆ. ಹೀಗಾಗಿ ಅವರ ಆಯ್ಕೆ ವಿಶ್ವಕಪ್ ನಲ್ಲಿ ನಡೆದರೆ ಖಂಡಿತವಾಗಿ ಕೆಎಲ್ ರಾಹುಲ್ ರವರು ಸ್ಥಾನ ಕಳೆದುಕೊಂಡರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ.