ಲಕ್ನೋ ಜೊತೆ ಆಡಿದ ಒಂದೇ ಒಂದು ಪಂದ್ಯದಿಂದ ಆರ್ಸಿಬಿ ಆಟಗಾರ ರಜತ್ ಪಟಿದರ್ ಗೆ ಸಿಕ್ಕ ಒಟ್ಟೂ ಹಣ ಎಷ್ಟು ಗೊತ್ತಾ ನಿಜಕ್ಕೂ ನಂಬೋಕೆ ಸಾಧ್ಯವಿಲ್ಲ

ಇದೀಗ ಐಪಿಎಲ್ 2022 ಕೊನೆಯ 2 ಮೆಟ್ಟಿಲನ್ನು ತಲುಪಿದೆ. ಪ್ಲೇ ಆಫ್ ನ ಮೊದಲ 2ಹಂತ ಮುಗಿದಿದ್ದು ಇನ್ನೂ 2ಹಂತಗಳು ಬಾಕಿ ಇವೆ. ಐಪಿಎಲ್ ಪ್ಲೇ ಆಫ್ ಗೆ ಗುಜರಾತ್ ಟೈಟನ್ಸ್ , ರಾಜಸ್ಥಾನ್ ರಾಯಲ್ಸ್ ಲಕ್ನೋ ಮತ್ತು ಆರ್ ಸಿಬಿ ತಂಡಗಳು ತಲುಪಿದ್ದವು. ಈ 4ತಂಡಗಳಲ್ಲಿ ಆರ್ ಸಿಬಿ ತಂಡದ ಜೊತೆ ಸೋತು ಲಕ್ನೋ ತಂಡ ಇದೀಗ ಐಪಿಎಲ್ ನಿಂದ ಹೊರಬಿದ್ದಿದೆ. ಮೇ 25 ರಂದು ಆರ್ ಸಿಬಿ ಮತ್ತು ಲಖ್ನೋ ಪಂದ್ಯಗಳ ನಡುವೆ ಎಲಿಮಿನೇಟರ್ ಪಂದ್ಯ ನಡೆದಿತ್ತು.

ತುಂಬಾ ರೋಚಕವಾದ ಪಂದ್ಯದಲ್ಲಿ ಆರ್ ಸಿಬಿ ಲಖ್ನೋ ತಂಡವನ್ನು 14 ರನ್ ಗಳ ಅಂತರಗಳಿಂದ ಸೋಲುಣಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡವು 207 ರನ್ ಗಳ ಭರ್ಜರಿ ಮೊತ್ತ ಕಲೆಹಾಕಿತ್ತು ಆರ್ ಸಿಬಿ ತಂಡದಲ್ಲಿ ರಜತ್ ಪತಿದಾರ್ ಅಜೇಯ ಶತಕವನ್ನು(112) ಬಾರಿಸಿದ್ದರು . ಕೇವಲ 50 ಬಾಲ್ ಗಳಲ್ಲಿ ಶತಕವನ್ನು ಸಿಡಿಸಿದ್ದರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ರಜತ್ ಪ್ರತಿಯೊಬ್ಬರು ಊಹೆ ಮಾಡಿರದಂಥ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

ಸಂಕಷ್ಟದಲ್ಲಿ ಸಿಲುಕಿದ್ದ ಆರ್ ಸಿಬಿ ಯನ್ನು ಆಪತ್ಬಾಂಧವನಂತೆ ರಜತ್ ಬಂದು ರಕ್ಷಣೆ ಮಾಡಿದ್ದಾರೆ. ರಜತ್ ಪಟಿದರ್ ಇಲ್ಲವಾಗಿದ್ದರೆ ಇಂದು ಆರ್ ಸಿಬಿ ಮನೆಗೆ ಹೋಗಬೇಕಿತ್ತು. ಆರ್ ಸಿಬಿಯನ್ನು ಗೆಲುವಿನ ಹಾದಿಗೆ ಕೊಂಡೊಯ್ದ ಎಲ್ಲೆಡೆ ಪ್ರಶಂಸೆ ಸಿಗುತ್ತಿದೆ. ಹಾಗೆ ಆಡಿದ ಒಂದೇ ಒಂದು ಮ್ಯಾಚ್ ನಿಂದ ರಜತ್ ಪಟಿದರ್ ಗೆ ಲಕ್ಷ ಲಕ್ಷ ಹಣ ಸಿಕ್ಕಿದೆ.ಆಡಿದ ಒಂದೇ ಒಂದು ಪಂದ್ಯದಿಂದ ಹೊರಗೆ ಪಟಿಧರ್ ಗೆ ಸಿಕ್ಕ ಹಣವೆಷ್ಟು ಗೊತ್ತಾ ಮುಂದೆ ಇದೆ ನೋಡಿ ಮಾಹಿತಿ. ರಜತ್ ಪತಿದಾರ್ ಅವರು ಲಕ್ನೋ ಸೂಪರ್ ಜಯಂಟ್ಸ್ ತಂಡದ ವಿರುದ್ಧ ಆಡಿದ ಆಟದಿಂದ ಬರೋಬ್ಬರಿ ಐದು ವಿಶೇಷ ಸಾಧನೆ ಮಾಡಿದ್ದಾರೆ.

ಪ್ಲೇ ಆಫ್ ಎಲಿಮಿನೇಟರ್ ಪಂದ್ಯದಲ್ಲಿ ಶತಕ ಬಾರಿಸಿದ ಮೊಟ್ಟ ಮೊದಲ ಆಟಗಾರ ರಜತ್ ಪಟಿದಾರ್ ಎಂಬ ಹೆಗ್ಗಳಿಕೆ ಸಿಕ್ಕಿದೆ. ಹಾಗೆ ಐಪಿಎಲ್ ಪ್ಲೇ ಆಫ್ ನಲ್ಲಿ ಶತಕ ಸಿಡಿಸಿದ ಐದನೇ ಆಟಗಾರ ಎಂಬ ವಿಶೇಷ ಸಾಧನೆ ಮಾಡಿದ್ದಾರೆ. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಸೆಂಚುರಿ ಸಿಡಿಸಿದ 4ನೇ ಅನ್​ಕ್ಯಾಪ್ ಪ್ಲೇಯರ್ ರಜತ್ ಪಟಿದಾರ್ ಆಗಿದ್ದಾರೆ. ರಜತ್ ಪಟಿದರ್ ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ.
ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ್ದಕ್ಕೆ ಐದು ಲಕ್ಷ ರೂಪಾಯಿಗಳು ಸಿಕ್ಕಿವೆ.

ನಂತರ ಅನ್​ಅಕಾಡೆಮಿ ಕ್ರ್ಯಾಕಿಂಗ್ ಸಿಕ್ಸ್ ಸಿಡಿಸಿದ್ದಕ್ಕೆ ರಜತ್ ಪಟಿದರ್ ಗೆ ಒಂದು ಲಕ್ಷ ರೂಪಾಯಿಗಳು ಸಿಕ್ಕಿವೆ, ರೂಪೇ ಆನ್​ ದಿ ಗೋ ಫೋರ್ಸ್​ಗೆ ಒಂದು ಲಕ್ಷ ರುಪಾಯಿಗಳು,ಪಂಚ್ ಸೂಪರ್ ಸ್ಟ್ರೈಕರ್ ಆಫ್ ದ ಮ್ಯಾಚ್ ಅವಾರ್ಡ್ ಪಡೆದಿದ್ದಕ್ಕೆ ಒಂದು ಲಕ್ಷ ರೂಪಾಯಿಗಳನ್ನು, ಡ್ರೀಮ್ ಇಲೆವೆನ್ ಗೇಮ್ ಚೇಂಜರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದಕ್ಕೆ ಒಂದು ಲಕ್ಷ ರೂಪಾಯಿಗಳನ್ನು ಮತ್ತು ಅಪ್ ಸ್ಟಾಕ್ಸ್ ಮೋಸ್ಟ್ ಅಸೆಟ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಸಿಕ್ಕಿದ್ದಕ್ಕೆ ಒಂದು ಲಕ್ಷ ರೂಪಾಯಿಗಳನ್ನು. ಒಟ್ಟಾರೆ ಹತ್ತು ಲಕ್ಷ ರೂಪಾಯಿಗಳನ್ನು ರಜತ್ ಪಟಿದರ್ ಅವರು ಒಂದೇ ಒಂದು ಮ್ಯಾಚ್ ನಿಂದ ತಮ್ಮದಾಗಿಸಿ ಕೊಂಡಿದ್ದಾರೆ.

Leave a Comment