ಕ್ರಿಕೆಟಿಗರನ್ನು ಮತ್ತು ಸಿನಿಮಾ ತಾರೆಯರನ್ನು ನಮ್ಮ ದೇಶದಲ್ಲಿ ದೇವರಾಗಿ ಕಾಣುತ್ತಾರೆ. ತಮ್ಮ ಹೆತ್ತ ತಂದೆ ತಾಯಿಗಿಂತ ಹೆಚ್ಚಾಗಿ ಸಿನಿಮಾ ನಟರನ್ನು ಮತ್ತು ಕ್ರಿಕೆಟ್ ಆಟಗಾರರನ್ನು ಜನರು ಪ್ರೀತಿಸುತ್ತಾರೆ. ಕೆಲವೊಂದು ಸಲ ಅಭಿಮಾನಿಗಳ ಅಂಧಾಭಿಮಾನಕ್ಕೆ ಏನು ಹೇಳಬೇಕೋ ಗೊತ್ತಾಗಲ್ಲ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಇಂಡಿಯಾ ಮತ್ತು ಶ್ರೀಲಂಕಾ ಟೆಸ್ಟ್ ಕ್ರಿಕೇಟ್ ಮ್ಯಾಚ್ ನಲ್ಲಿ ನಡೆದ ಘಟನೆ ನಿಜಕ್ಕೂ ಅಚ್ಚರಿಯಾಗಿತ್ತು.
ಭಾರತ ಮತ್ತು ಶ್ರೀಲಂಕಾ ತಂಡದ ನಡುವಿನ ಎರಡನೇ ಟೆಸ್ಟ್ ಮ್ಯಾಚ್ ನಡೆಯುತ್ತಿತ್ತು. ಸ್ಟೇಡಿಯಂ ನಲ್ಲಿ ಅಭಿಮಾನಿಗಳ ಸಾಗರವೇ ತುಂಬಿಕೊಂಡಿತ್ತು. ಹಲವಾರು ವರ್ಷಗಳ ಆದಮೇಲೆ ಸ್ಟೇಡಿಯಂಗೆ ಅಭಿಮಾನಿಗಳು ತುಂಬಿಕೊಂಡಿದ್ದು ಕಂಡುಬಂದಿತ್ತು. ಅದರಲ್ಲೂ ವಿಶೇಷವಾಗಿ ವಿರಾಟ್ ಕೊಹ್ಲಿ ಅವರನ್ನು ನೋಡಬೇಕೆಂದು ಸಾವಿರಾರು ಮಂದಿ ಸ್ಟೇಡಿಯಂನಲ್ಲಿ ಸೇರಿದ್ದರು. ಮೈದಾನದಲ್ಲಿದ್ದ ಅರ್ಧಕ್ಕೆ ಅರ್ಧ ಅಭಿಮಾನಿಗಳು ಆರ್ ಸಿಬಿ ಅಭಿಮಾನಿಗಳೇ ಆಗಿದ್ದರು.
ಇಂಡಿಯಾ ಮತ್ತು ಶ್ರೀಲಂಕಾ ಪಂದ್ಯ ಪ್ರಾರಂಭವಾದ ಹಂತದಿಂದಲೂ ಮೈದಾನದಲ್ಲಿದ್ದ ವೀಕ್ಷಕರಿಂದ ಆರ್ ಸಿಬಿ ಆರ್ ಸಿಬಿ ಎಂದು ಕೂಗುತ್ತಲೇ ಇದ್ದರು. ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಗೆ ಬಂದಾಗಲಂತೂ ಅಭಿಮಾನಿಗಳು ಕಿರುಚಾಟ ಮುಗಿಲು ಮುಟ್ಟಿತ್ತು. ಮ್ಯಾಚ್ ಇನ್ನೇನು ಕೆಲವು ನಿಮಿಷಗಳಲ್ಲಿ ಮುಗಿಯುವ ಹಂತದಲ್ಲಿತ್ತು. ಈ ಸಮಯದಲ್ಲಿ ಇಬ್ಬರು ವಿರಾಟ್ ಕೊಹ್ಲಿ ಅಭಿಮಾನಿಗಳು ಸ್ಟೇಡಿಯಂನ 15 ಅಡಿ ಉದ್ದದ ಗೇಟ್ ಅನ್ನು ಹತ್ತಿ ಅನಂತರ ಮೇಲಿಂದ ಜಿಗಿದು ಮೈದಾನಕ್ಕೆ ಇಳಿದಿದ್ದಾರೆ.
ಸ್ಟೇಡಿಯಂನ ಸೆಕ್ಯುರಿಟಿ ಕಣ್ಣೆದುರೇ ಮೈದಾನಕ್ಕೆ ಜಿಗಿದು ವಿರಾಟ್ ಕೊಹ್ಲಿ ಇದ್ದ ಜಾಗಕ್ಕೆ ಓಡಿ ಹೋಗಿದ್ದಾರೆ. ಅಷ್ಟೇ ಅಲ್ಲದೇ ವಿರಾಟ್ ಕೊಹ್ಲಿ ಅವರ ಬಳಿ ಸೆಲ್ಫಿ ಕೂಡ ತೆಗೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿಯವರು ಕೋಪಗೊಳ್ಳದೇ ತನ್ನ ಅಭಿಮಾನಿಗಳಿಗೆ ಹಸನ್ಮುಖಿಯಾಗಿ ಸೆಲ್ಫಿ ಕೊಟ್ಟಿದ್ದಾರೆ. ಆದರೆ ಇದೀಗ ಈ ಹುಡುಗರ ಪಾಡು ಏನಾಗಿದೆ ಗೊತ್ತಾ ಪಾಪ ಇದೀಗ ಈ ಹುಡುಗರ ಪರಿಸ್ಥಿತಿ ತುಂಬಾ ಕಠಿಣವಾಗಿದೆ. ಇದೀಗ ಈ ಅಭಿಮಾನಿಗಳು ಆ ರೋಪಿಗಳಾಗಿದ್ದಾರೆ. ಇವರ ಮೇಲೆ ಕ್ರಿ ಮಿನಲ್ ಕೇಸ್ ಹಾಕಿ ದ್ದಾರೆ.
ಪೊಲೀಸರು ಈ ಹುಡುಗರ ಮೇಲೆ ಕೇಸ್ ದಾಖಲು ಮಾಡಿದ್ದಾರೆ ಮತ್ತು ಇವರ ಮೇಲೆ ಈಗಾಗಲೇ ವಿಚಾರಣೆ ನಡೆಯುತ್ತಿದೆಯಂತೆ. ಒಟ್ಟು 4 ಹುಡುಗರನ್ನ ಈಗಾಗಲೇ ಬಂಧಿಸಲಾಗಿದ್ದು ಇವರಲ್ಲಿ 2 ಹುಡುಗರು ಅಪ್ರಾಪ್ತರಾಗಿದ್ದಾರೆ. ಅಭಿಮಾನ ಅತಿರೇಕಕ್ಕೆ ನೀಡಿದರೆ ಇಂತಹ ಪರಿಸ್ಥಿತಿಗಳನ್ನು ಅನುಭವಿಸಬೇಕಾಗುತ್ತದೆ. ಅಂಧಾಭಿಮಾನ ಯಾವತ್ತೂ ಒಳ್ಳೆಯದಲ್ಲ. ಕ್ರಿಕೆಟ್ ಆಟಗಾರರು ದೇವರಲ್ಲ ಅವರು ನಮ್ಮ ಹಾಗೆ ಮನುಷ್ಯರು ಎಂಬುದನ್ನು ತಲೆಯಲ್ಲಿಟ್ಟುಕೊಳ್ಳಬೇಕು.