Dhoni: ಐಪಿಎಲ್ ಗೆಲ್ಲುತ್ತಿದ್ದಂತೆ ಧೋನಿ ಮೊದಲು ಮಾಡಿದ್ದೆ ಈ ಕೆಲಸ. ಕಣ್ಣೀರಿನಲ್ಲಿ ಅಭಿಮಾನಿಗಳು.

Dhoni ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಇತ್ತೀಚಿಗಷ್ಟೇ ಐಪಿಎಲ್ ಫೈನಲ್ ಪಂದ್ಯದಲ್ಲಿ ತಮ್ಮ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದಾಳತ್ವವನ್ನು ವಹಿಸಿ ಬಲಿಷ್ಠ ಗುಜರಾತ್ ತಂಡದ ವಿರುದ್ಧ ಗೆಲುವನ್ನು ಸಾಧಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಐದನೇ ಬಾರಿಗೆ ಕಪ್ ಗೆಲ್ಲುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ.

ಈ ಮೂಲಕ ಕೇವಲ ವಿಶ್ವ ಕ್ರಿಕೆಟ್ ನಲ್ಲಿ ಮಾತ್ರವಲ್ಲದೆ ಐಪಿಎಲ್ ನಲ್ಲಿ ಕೂಡ ತಾನೊಬ್ಬ ಯಶಸ್ವಿ ಕಪ್ತಾನ ಎಂಬುದನ್ನು ಸಾಬೀತುಪಡಿಸಿದ್ದಾರೆ. ವಯಸ್ಸು 42 ಆಗಿದ್ದರೂ ಕೂಡ ವಿಶ್ವ ಕ್ರಿಕೆಟ್ ನಲ್ಲಿ ಇಂದಿಗೂ ಕೂಡ ಹಸಿದ ಸಿಂಹದಂತೆ ಎದುರಾಳಿಗಳನ್ನು ಭೇಟಿ ಆಡೋ ತಾಕತ್ತು ಧೋನಿ ಅವರಿಗಿದೆ.

ಇನ್ನು ನೀವು ಗಮನಿಸಿರಬಹುದು ಈ ಬಾರಿ ಐಪಿಎಲ್ ಟೂರ್ನಮೆಂಟ್ ಉದ್ದಕ್ಕೂ ಕೂಡ ಮಹೇಂದ್ರ ಸಿಂಗ್ ಧೋನಿ ರವರು ಸಂಪೂರ್ಣವಾಗಿ ಮೊಣಕಾಲಿನ ಇಂಜುರಿಯೊಂದಿಗೆ ಆಡಿದ್ದರು. ಈಗ ಅಷ್ಟೊಂದು ಕಷ್ಟಪಟ್ಟು ಆಡಿ ಕಪ್ ಗೆದ್ದಿರುವ ಧೋನಿ ಟೂರ್ನಮೆಂಟ್ ಮುಗಿದ ಕೂಡಲೇ ಮಾಡಿರುವ ಕೆಲಸ ನೋಡಿದರೆ ನೀವು ಕೂಡ ಆಶ್ಚರ್ಯಪಡುತ್ತೀರಾ.

ಹೌದು ಮಿತ್ರರೇ ಧೋನಿ(Dhoni) ಅವರು ಫೈನಲ್ ಅನ್ನು ಗೆದ್ದ ಮಾರನೇ ದಿನಾನೇ ಮುಂಬೈನಲ್ಲಿ ಪ್ರತ್ಯಕ್ಷವಾಗಿದ್ದು ಅಲ್ಲಿ ಮೊಣಕಾಲಿನ ಇಂಜುರಿಯನ್ನು ಮಾಡಿಕೊಂಡಿದ್ದಾರೆ ಎಂಬುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಅಂದರೆ ಈ ಮೂಲಕ ಮುಂದಿನ ಐಪಿಎಲ್ ಪ್ರಾರಂಭ ಆಗುವುದಕ್ಕೂ ಮುನ್ನ ದೈಹಿಕವಾಗಿ ಸಂಪೂರ್ಣವಾಗಿ ತಯಾರಾಗಿ ಮಹೇಂದ್ರ ಸಿಂಗ್ ಧೋನಿ ಮತ್ತೊಂದು ಐಪಿಎಲ್ ಅನ್ನು ಆಡಿದರೂ ಕೂಡ ಆಡಬಹುದು.

Leave a Comment