ಆರ್ ಸಿಬಿ ಮೇಲೆ ಅಸಮಾಧಾನ ಹೊರ ಹಾಕಿದ ಚಹಲ್. ಚಹಲ್ ಜೋತೆ ಆರ್ ಸಿ ಬಿ ಅವರು ನಡೆದುಕೊಂಡ ರೀತಿ ಎಷ್ಟು ಸರಿ

ಆರ್ ಸಿಬಿ ಆಟಗಾರರಿಗೂ ಕನ್ನಡಿಗರಿಗೂ ವಿಶೇಷವಾದ ನಂಟಿದೆ. ಅದರಲ್ಲೂ ಕೊಹ್ಲಿ, ಚಹಲ್ ,ಎಬಿ ಡಿವಿಲಿಯರ್ಸ್ ಅವರನ್ನು ನಾವು ನಮ್ಮ ಊರಿನವರಂತೆ ಅಭಿಮಾನಿ ಸುತ್ತವೆ. ಇವರೆಲ್ಲರೂ ಕರ್ನಾಟಕದ ದತ್ತು ಪುತ್ರರು ಎಂದು ನಾವು ಭಾವಿಸುತ್ತೇವೆ. ಇದೀಗ ಡಿವಿಲಿಯರ್ಸ್ ಮತ್ತು ಚಹಲ್ ಇಬ್ಬರೂ ಆಟಗಾರರು ಕೂಡ ಆರ್ ಸಿಬಿ ತಂಡದಲ್ಲಿ ಆಡುತ್ತಿಲ್ಲ. ಹಳೆಯ ಆಟಗಾರರಲ್ಲಿ ಕೊಹ್ಲಿ ಮಾತ್ರ ಆರ್ ಸಿಬಿ ತಂಡದಲ್ಲಿದ್ದಾರೆ.

ಆರ್ ಸಿಬಿ ಆಟಗಾರರು ಆರ್ ಸಿಬಿ ತಂಡವನ್ನು ಬಿಟ್ಟರು ಸಹ ಅವರ ಮೇಲೆ ಅಭಿಮಾನ ಸ್ವಲ್ಪವೂ ಕಡಿಮೆಯಾಗಿಲ್ಲ. ಇದೇ ವರ್ಷ ಯುಜುವೇಂದ್ರ ಚಾಹಲ್ ಅವರು ಆರ್ ಸಿಬಿ ತಂಡವನ್ನು ಬಿಟ್ಟು ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಚಹಲ್ ಅವರು ಆರ್ ಸಿಬಿ ತಂಡದಲ್ಲಿ ಇಲ್ಲ ಎಂಬ ಬೇಸರವಿದೆ ಆದರೆ ಚಾಹಲ್ ಅವರ ಪ್ರೀತಿ ಅಭಿಮಾನ ಎಂದಿಗೂ ಕಡಿಮೆಯಾಗಿಲ್ಲ.

ಆದರೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರುತ್ತಿದ್ದಂತೆ ಚಹಾಲ್ ಅವರು ಆರ್ ಸಿಬಿ ಮೇಲೆ ಅಸಮಾಧಾನವನ್ನು ವ್ಯಕ್ತ ಪಡಿಸಿರುವುದು ಅಭಿಮಾನಿಗಳಿಗೆ ಆಶ್ಚರ್ಯ ತಂದಿದೆ. ಆರ್ ಸಿಬಿ ಮ್ಯಾನೇಜ್ಮೆಂಟ್ ಅವರು ನನ್ನನ್ನು ನಡೆಸಿಕೊಂಡ ರೀತಿ ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಚಹಲ್ ಅವರಿಗೆ ಆರ್ ಸಿಬಿ ತಂಡ ಮತ್ತು ಆರ್ ಸಿಬಿ ಅಭಿಮಾನಿಗಳೆಂದರೆ ತುಂಬಾ ಪ್ರೀತಿ ಆದ್ದರಿಂದ ಚಹಲ್ ಅವರಿಗೆ ಆರ್ ಸಿಬಿ ತಂಡವನ್ನು ಬಿಟ್ಟು ಹೋಗಲು ಇಷ್ಟವಿರಲಿಲ್ಲ.

ಆದರೆ ಆರ್ ಸಿಬಿ ಮ್ಯಾನೇಜ್ಮೆಂಟ್ ಸಿಬ್ಬಂದಿಗಳು ಚಹಲ್ ಅವರನ್ನು ಬಲವಂತವಾಗಿ ಆರ್ ಸಿಬಿ ತಂಡದಿಂದ ಹೊರ ಹಾಕಿದ್ದಾರೆ ಎಂದು ಸ್ವತಃ ಚಹಲ್ ತಿಳಿಸಿದ್ದಾರೆ. ಚಹಲ್ ಅವರನ್ನು ತಂಡದಿಂದ ಹೊರ ಹಾಕುತ್ತೇವೆ ಎಂಬ ಯಾವುದೇ ಸಂದೇಶವನ್ನು ಚಹಲ್ ಗೆ ಆರ್ ಸಿಬಿಯವರು ಮುಂಚಿತವಾಗಿ ತಿಳಿಸಿಲ್ಲ. ಹಾಗೆ ಚಹಲ್ ಅವರ ಜೊತೆ ಆರ್ ಸಿಬಿ ಅವರು ಸಂಭಾವನೆ ವಿಷಯವನ್ನು ಕೂಡ ಚರ್ಚೆ ಮಾಡಿಲ್ಲ. ನಿಮ್ಮನ್ನು ಹರಾಜಿನಲ್ಲಿ ನಾವು ಹಿಂಪಡೆಯುತ್ತೇವೆ ಎಂಬ ಟೊಳ್ಳು ಆಶ್ವಾಸನೆಯನ್ನು ಆರ್ ಸಿಬಿ ತಂಡದವರು ನೀಡಿದ್ದರು.

ನನಗೆ ಹಣ ಮುಖ್ಯವಲ್ಲ .ನನಗೆ ಆರ್ ಸಿಬಿ ತಂಡ ಮತ್ತು ಆರ್ ಸಿಬಿ ಅಭಿಮಾನಿಗಳ ಪ್ರೀತಿ ಮುಖ್ಯ. ನನಗೆ 5 ಕೋಟಿ ಕೊಟ್ಟರೂ ಸಹ ಆರ್ ಸಿಬಿ ತಂಡದ ಆಟಗಾರನಾಗಿ ಆಡುತ್ತಿದ್ದೆ. ಆದರೆ ಆರ್ ಸಿಬಿ ತಂಡದವರು ನನಗೆ ಸೂಚನೆ ನೀಡದೆ ಬಲವಂತವಾಗಿ ನನ್ನನ್ನು ಹೊರ ಹಾಕಿರುವುದು ತುಂಬಾ ಬೇಸರವಾಗಿದೆ. ಏನೇ ಇರಲಿ ನನಗೆ ಆರ್ ಸಿ ಬಿ ತಂಡದ ಮೇಲೆ ಆರ್ ಸಿಬಿ ಅಭಿಮಾನಿಗಳ ಮೇಲೆ ಯಾವಾಗಲೂ ಪ್ರೀತಿ ಇರುತ್ತೆ ಎಂದು ಚಹಲ್ ಭಾವನಾತ್ಮಕ ಮಾತುಗಳನ್ನು ಆಡಿದ್ದಾರೆ. ಇಂತಹ ಅಪ್ಪಟ ಬಂಗಾರದಂಥ ಮನಸ್ಸುಳ್ಳ ಆಟಗಾರನನ್ನು ಕೈಬಿಟ್ಟಿರುವ ಆರ್ ಸಿಬಿ ಅವರಿಗೆ ಏನು ಹೇಳಬೇಕು ನೀವೇ ಹೇಳಿ.

Leave a Comment