ABD: ಎಬಿ ಡಿವಿಲಿಯರ್ಸ್ ಗೆ ಆರ್ಸಿಬಿ ಅಂದ್ರೆ ಇಷ್ಟ ಆದರೆ ಅವರ ಪತ್ನಿಗೆ ಮಾತ್ರ ಯಾವ ಟೀಮ್ ಅಂದರೆ ಇಷ್ಟ ಗೊತ್ತಾ?

ABD ದಕ್ಷಿಣ ಆಫ್ರಿಕಾ ಮೂಲದ ಆರ್‌ಸಿಬಿ ತಂಡದ ಅತ್ಯಂತ ನೆಚ್ಚಿನ ಆಟಗಾರ ಆಗಿರುವಂತಹ ಎಬಿಡಿ(ABdevilliers) ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ದಕ್ಷಿಣ ಆಫ್ರಿಕಾ ಮೂಲದವರು ಆಗಿದ್ದರು ಕೂಡ ಭಾರತ ಕ್ರಿಕೆಟ್ ಅಭಿಮಾನಿಗಳ ಅತ್ಯಂತ ನೆಚ್ಚಿನ ವಿದೇಶಿ ಕ್ರಿಕೆಟ್ ಆಟಗಾರ ಆಗಿದ್ದಾರೆ.

ಸಾಕಷ್ಟು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಪರವಾಗಿ ಐಪಿಎಲ್ ನಲ್ಲಿ ಆಡುತ್ತಿರುವ ಎಬಿಡಿ ಕಳೆದ ಎರಡು ವರ್ಷಗಳ ಹಿಂದೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಇದು ಅಭಿಮಾನಿಗಳಲ್ಲಿ ಸಾಕಷ್ಟು ಬೇಸರವನ್ನು ಮೂಡಿಸಿತ್ತು.

ಯಾಕೆಂದರೆ ಆರ್ಸಿಬಿ ತಂಡದ ಪರವಾಗಿ ಸಾಕಷ್ಟು ದಾಖಲೆಯನ್ನು ಹೊಂದಿರುವಂತಹ ಎಬಿಡಿ ಾಕಷ್ಟ ಸಮಯದಲ್ಲಿ ಆರ್‌ಸಿಬಿ ಸೋಲುತ್ತಿದ್ದ ವೇಳೆ ಆಪದ್ಬಾಂಧವನಾಗಿ ತಂಡದ ಪರವಾಗಿ ಮ್ಯಾಚ್ ವಿನ್ನರ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಈಗ ಅವರ ಸ್ಥಾನವನ್ನು ತುಂಬುವಂತಹ ಮತ್ತೊಬ್ಬ ಆಟಗಾರ ಇಲ್ಲ ಎನ್ನುವುದು ಎಲ್ಲರ ಅಭಿಪ್ರಾಯ.

ಇನ್ನು ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿಗಷ್ಟೇ ನಡೆದಿರುವಂತಹ ಒಂದು ಸಂದರ್ಶನದಲ್ಲಿ ಎಂದಿನಂತೆ ನಿಮ್ಮ ನೆಚ್ಚಿನ ಐಪಿಎಲ್ ತಂಡ ಯಾವುದು ಎಂಬುದಾಗಿ ಹೇಳಿದಾಗ ಆರ್ಸಿಬಿ ಎಂದಿದ್ದಾರೆ. ಆದರೆ ಅವರ ಪತ್ನಿ ಮಾತ್ರ ಕೊಲ್ಕತ್ತಾ ನೈಟ್ ರೈಡರ್ಸ್(KKR) ತಂಡದ ಹೆಸರನ್ನು ಹೇಳುವ ಮೂಲಕ ಪ್ರತಿಯೊಬ್ಬರು ಕೂಡ ಆಶ್ಚರ್ಯ ಚಕಿತರಾಗುವಂತೆ ಮಾಡಿದ್ದಾರೆ.

Leave a Comment