Viral video For Instagram: ಸೋಶಿಯಲ್ ಮೀಡಿಯಾದಲ್ಲಿ ಸದಾ ಒಂದಲ್ಲ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಅದರಂತೆ ಈಗ ತನ್ನ ಪತ್ನಿಗೆ ಕಂತೆ ಕಂತೆ ಹಣವನ್ನು ತಂದು ಪತಿ ಸುರಿದಿರುವಂತಹ ವಿಡಿಯೋವನ್ನು ನೆಟ್ಟಿಗರನ್ನು ಆಕರ್ಷಿಸುತ್ತಿದ್ದು ನೋಡಲು ಇಷ್ಟು ಸಾಧಾರಣವಾಗಿರುವಂತಹ ವ್ಯಕ್ತಿ ಇಷ್ಟೊಂದು ಹಣ ಸಂಪಾದನೆ ಮಾಡಲು ಹೇಗೆ ಸಾಧ್ಯವಾಯಿತು ಎಂದು ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ.
ಹೌದು ರಾಜಸ್ಥಾನ(Rajasthan) ಮೂಲದ ವ್ಯಕ್ತಿಯ ವಿಡಿಯೋ ಇದಾಗಿದ್ದು, ಹಾಸಿಗೆ ಮೇಲೆ ಕುಳಿತ ತನ್ನ ಹೆಂಡತಿಗೆ 500 ರೂಪಾಯಿ ನೋಟಿನ (₹500 notes) ಕಂತೆಯನ್ನು ತಂದು ಆಕೆಯ ಮಡಿಲ ಮೇಲೆ ಅಭಿಷೇಕದಂತೆ ಸುರಿದಿದ್ದಾನೆ. ಅದರಂತೆ ಹೆಂಡತಿ ಕೂಡ ನಗುತ ತನ್ನ ಗಂಡ ಮಾಡುತ್ತಿರುವಂತಹ ಈ ಚಟುವಟಿಕೆಯನ್ನು ಆನಂದಿಸುತ್ತಿರುವ ಸುಂದರ ಕ್ಷಣ ವಿಡಿಯೋದಲ್ಲಿ ಕ್ಯಾಪ್ಚರ್ ಆಗಿದೆ. ಸದ್ಯ ಈ ವಿಡಿಯೋ instagram ಹಾಗೂ facebook ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗುತ್ತಾ ನೆಟ್ಟಿಗರ ಆಕರ್ಷಣೆಗೆ ಗುರಿಯಾಗಿದ್ದು,
ಇದನ್ನು ಕಂಡವರು ಭಿನ್ನವಾಗಿ ಕಮೆಂಟ್ ಮಾಡುತ್ತಾ ವ್ಯಕ್ತಿಯ ಕೃತ್ಯವನ್ನು ಮೆಚ್ಚುತ್ತಿದ್ದಾರೆ. ಸಂಬಳ ಬಂದರೆ ಹೆಂಡತಿಗೆ ಒಂದು ರೂಪಾಯಿ ಹಣವನ್ನು ನೀಡದೆ ಮನೆಯ ಜವಾಬ್ದಾರಿಗಳನ್ನೆಲ್ಲ ತಾವೇ ನೋಡಿಕೊಳ್ಳುವಂತಹ ಗಂಡಸರುರಿವಂತಹ ಈ ಕಾಲದಲ್ಲಿ ಈ ವ್ಯಕ್ತಿ ತಾನು ಇಷ್ಟು ತಿಂಗಳುಗಳವರೆಗೂ ಕಷ್ಟಪಟ್ಟು ದುಡಿದು ಕೂಡಿಟ್ಟ ಹಣವನ್ನು ತನ್ನ ಹೆಂಡತಿಯ(wife) ಮುಂದಿಟ್ಟು ಆಕೆಯ ಸಂತಸವನ್ನು ನೋಡುತ್ತಿರುವ ಪರಿಯನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಜನ ನಾವು ತುಂಬಾ ಕಷ್ಟದಲ್ಲಿದ್ದೇವೆ ದಯವಿಟ್ಟು ಸಹಾಯ ಮಾಡಿ ಎಂದು ಅವರವರ ಮೊಬೈಲ್ ನಂಬರ್ ಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕುತ್ತಿದ್ದಾರೆ. ಅಲ್ಲದೆ ದೇವರ ಅನುಗ್ರಹದಿಂದಾಗಿ ಇಷ್ಟೊಂದು ಹಣ ಸಂಪಾದಿಸಲು ಸಾಧ್ಯವಾಯಿತು ಎಂದು ಹೇಳುವಂತೆ ಕತು ಶ್ಯಾಮ್ ಬಾಬಾ(Khatu Shyam Baba) ಎಂಬ ಫೇಸ್ಬುಕ್ ಪೇಜ್ ನಲ್ಲಿ ಈ ಒಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ 50 ಎಕರೆ ತೋಟ ಅದರ ಮಧ್ಯಯಿರುವ ಭವ್ಯವಾದ ನಿಖಿಲ್ ಕುಮಾರಸ್ವಾಮಿಯ ಫಾರ್ಮ್ ಹೌಸ್ ಹೇಗಿದೆ ಗೊತ್ತಾ? ಇಲ್ಲಿವೆ ಫೋಟೋಸ್