ಈಗಿನ ಕಾಲದಲ್ಲಿ ಯುವಕರು ಸೋಷಿಯಲ್ ಮೀಡಿಯಾ ನಲ್ಲಿಯೇ ಮನಸೋತು ಪ್ರೀತಿ ಮಾಡಿ ಮದುವೆಯಾಗುತ್ತಿದ್ದಾರೆ. ನಂತರ ಮದುವೆ ಮಾಡಿಕೊಂಡು ಜೀವನ ನಡೆಸುವಾಗ ಗೊತ್ತಾಗುತ್ತೆ ನಿಜಜೀವನಕ್ಕೂ ಮತ್ತು ಸೋಶಿಯಲ್ ಮೀಡಿಯಾಕ್ಕೂ ಇರುವ ವ್ಯತ್ಯಾಸ. 2 ಮಕ್ಕಳ ತಾಯಿ ರೇಷ್ಮಾ ಎಂಬ ಮಹಿಳೆ ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದ ರಮೇಶ್ ಎಂಬ ಯುವಕನನ್ನು ಟಿಕ್ ಟಾಕ್ ಮೂಲಕ ಪರಿಚಯ ಮಾಡಿಕೊಂಡು ಆತನಿಗೆ ಮನಸೋತು ಆತನ ಹಿಂದೆ ಹೋಗಿ ಇದೀಗ ಪಶ್ಚಾತ್ತಾಪ ಪಡುತ್ತಿದ್ದಾಳೆ.
ಬೆಂಗಳೂರಿನ ಮೂಲದ ರೇಷ್ಮಾ ಎಂಬ ಮಹಿಳೆ ಮು’ಸ್ಲಿಂ’ ಸಮುದಾಯದವಳು. ಈಕೆ ಅಪ್ರಾಪ್ತ ವಯಸ್ಸಿನ ಲ್ಲಿಯೇ ಪುರುಷನೊಬ್ಬನನ್ನು ಮದುವೆಯಾಗಿದ್ದಳು. ಹಾಗೆ 2 ಮಕ್ಕಳು ಕೂಡ ಈಕೆಗೆ ಹುಟ್ಟಿದ್ದರು. ದಿನ ಕಳೆದಂತೆ ಗಂಡನ ಕಿ’ರು’ಕುಳ ಈಕೆಗೆ ತಡಿಯಲಾಗಲಿಲ್ಲ ಆದಕಾರಣ ತನ್ನ ಗಂಡನಿಂದ ದೂರವಾಗಿ ಬೇರೆ ಕಡೆ ವಾಸ ಮಾಡುತ್ತಿದ್ದಳು. ಗಂಡನನ್ನು ಬಿಟ್ಟು ಒಂಟಿಯಾಗಿದ್ದ ಈ ಮಹಿಳೆಗೆ ಟಿಕ್ ಟಾಕ್ ಆ್ಯಪ್ ನ ಮೂಲಕ ಮುಂಡಗೋಡಿನ ಮೂಲದ ರಮೇಶ್ ಎಂಬ ಯುವಕನ ಪರಿಚಯವಾಗುತ್ತೆ.
ಹಾಗೆ ಪರಿಚಯ ಸ್ನೇಹವಾಗಿ ನಂತರ ಪ್ರೀತಿಯಾಗಿ ಬದಲಾಗುತ್ತೆ. ರೇಷ್ಮಾ ಮತ್ತು ರಮೇಶ್ ಇಬ್ಬರೂ ಸೇರಿಕೊಂಡು ಟಿಕ್ ಟಾಕ್ ನಲ್ಲಿ ಡುಯೆಟ್ ಮಾಡುತ್ತಿದ್ದರು. ಹೀಗೆ ಟಿಕ್ ಟಾಕ್ ವಿಡಿಯೋ ಗಳನ್ನು ಮಾಡಿ ಇಬ್ಬರೂ ಪ್ರೀತಿಯ ಬಲೆಗೆ ಬಿದ್ದಿದ್ದರು. ತನಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂಬ ವಿಷಯವನ್ನು ರೇಷ್ಮಾ ರಮೇಶ್ ಗೆ ಮೊದಲೇ ತಿಳಿಸಿದ್ದಳು. ಈ ವಿಷಯ ತಿಳಿದಿದ್ದರೂ ಕೂಡ ರಮೇಶ್ ರೇಶ್ಮಾಳನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ನನಗೆ ನನ್ನ ತಾಯಿ ಇಲ್ಲ..ನನಗೆ ಊಟ ಮಾಡಿ ಹಾಕಲು ಯಾರೂ ಇಲ್ಲ. ನನ್ನ ಜೊತೆಗೆ ಬಂದು ಬಿಡು. ನಿನಗೆ ನಾನು ಜೀವನ ನೀಡುತ್ತೇನೆಂದು ಬೆಂಗಳೂರಿನಿಂದ ರೇಶ್ಮಾಳನ್ನು ನೇರವಾಗಿ ತಾಲೂಕಿಗೆ ಕರೆತಂದು ಬಾಡಿಗೆ ಮನೆ ಮಾಡಿ ಇರಿಸಿಕೊಂಡಿದ್ದನು
ಸ್ವಲ್ಪ ದಿನಗಳ ನಂತರ ಕುಟುಂಬದವರ ಒತ್ತಾಯದ ಮೇರೆಗೆ ರಮೇಶ್ ಮತ್ತು ರೇಷ್ಮಾ ಇಬ್ಬರು 2021 ಎಪ್ರಿಲ್ 2 ರಂದು ಶಿರಸಿ ತಾಲ್ಲೂಕಿನ ಮಾರಿಕಾಂಬ ದೇವಸ್ಥಾನದಲ್ಲಿ ಶಾಸ್ತ್ರದ ಪ್ರಕಾರ ಮದುವೆಯಾಗಿದ್ದರು. ಮದುವೆಯಾದ ನಂತರ ರೇಷ್ಮಾಳ ಹೆಸರನ್ನು ಸಿಂಧು ಅಂತ ಬದಲಾಯಿಸಲಾಯ್ತು. ಮದುವೆಯಾದ ಒಂದು ವರ್ಷಗಳ ಕಾಲ ರೇಷ್ಮಾ/ಸಿಂಧೂ ಮತ್ತು ರಮೇಶ್ ಸುಖ ಸಂಸಾರ ನಡೆಸುತ್ತಿದ್ದರು. ಆನಂತರ ರೇಷ್ಮಾಗೆ ಮೊದಲ ಗಂಡನ ಹಾಗೆ ರಮೇಶ್ ಕೂಡ ಕಿ’ರು’ಕುಳ ಕೊಡೋಕೆ ಶುರು ಮಾಡ್ದ. ರಮೇಶನ ಕಾಟ ತಡೆಯಲಾಗದೆ ಸಿಂಧು ಆ’ತ್ಮ’ಹತ್ಯೆಗೆ ಕೂಡ ಪ್ರಯತ್ನ ಪಟ್ಟಿದ್ದಳು. ಆಮೇಲೆ ಊರಿನವರು, ಗ್ರಾಮದ ಪೋಲಿಸ್ ನವರು ಮತ್ತು ಸಂಬಂಧಿಕರೆಲ್ಲರೂ ರಮೇಶ್ ಗೆ ಬುದ್ದಿ ಹೇಳಿ ಪಾಠ ಕಲಿಸಿದ್ದರು. ಅದಾದ ಮೇಲೆ ರಮೇಶ್ ಮತ್ತು ರೇಷ್ಮಾ ಬೆಂಗಳೂರಿಗೆ ತೆರಳಿ ಜೀವನ ನಡೆಸೋಕೆ ಶುರುಮಾಡಿದ್ರು…
ಊರಿನವರು ಬುದ್ಧಿ ಪಾಠ ಹೇಳಿದ ಮೇಲೆ ರಮೇಶ್ ಸರಿಯಾಗುತ್ತಾನೆ ಅಂತ ರೇಷ್ಮ ನಂಬಿದ್ದಳು. ಆದರೆ ಬೆಂಗಳೂರಿಗೆ ಬಂದಮೇಲೆ ರಮೇಶ್ ನ ನಿಜವಾದ ಬಣ್ಣ ಬಯಲಾಯ್ತು. ಬೆಂಗಳೂರಿನಲ್ಲಿ ರೇಷ್ಮಾ ಮತ್ತು ರಮೇಶ್ ಮೂವತ್ತ ಮಾಡುತ್ತಿದ್ದ ಬಾಡಿಗೆ ಮನೆಯಿಂದ ರಮೇಶ್ ಇದ್ದಕ್ಕಿದ್ದಂತೆ ಪರಾರಿಯಾಗಿದ್ದಾನೆ. ರೇಷ್ಮಾಳ ಬಳಿಯಿದ್ದ ಹಣ , ಚಿನ್ನದ ಆಭರಣ ಮತ್ತು ಅವಳ ಹೆಸರಿನಲ್ಲಿ ಬ್ಯಾಂಕ್ ಲೋನ್ ತೆಗೆದುಕೊಂಡು ಏಕಾಏಕಿ ಯಾವುದೇ ಸುಳಿವಿಲ್ಲದೆ ಪರಾರಿಯಾಗಿದ್ದಾನೆ. ಇದೀಗ ರೇಷ್ಮಾ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾಳೆ. ಘಟನೆಯ ಬಗ್ಗೆ ರೇಷ್ಮಾ ವಿಡಿಯೋ ರೆಕಾರ್ಡ್ ಕೂಡಾ ಮಾಡಿ, ತನ್ನ ಜೀವನದ ದುರಂತದ ಬಗ್ಗೆ ತಿಳಿಸಿದ್ದಾಳೆ.
ಆ ಕಡೆ ಮೊದಲ ಗಂಡನ ಮನೆಗೆ ಕೂಡ ಹೋಗೋ ಹಾಗಿಲ್ಲ ಈ ಕಡೆ ರಮೇಶ್ ಕೂಡ ಸಿಕ್ಕಿಲ್ಲ. ನನಗೆ ನನ್ನ ಗಂಡ ರಮೇಶಾ ಬೇಕು. ಎಷ್ಟೇ ಕಷ್ಟವಾದರೂ ಅವನ ಜೊತೆಯೇ ಜೀವನ ನಡೆಸುತ್ತೇನೆ ಎಂದು ರೇಶ್ಮಾ ಅಳಲನ್ನು ತೋಡಿಕೊಂಡಿದ್ದಾರೆ. ರೇಶ್ಮಾ ಬೆಂಗಳೂರಿನ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಈ ವಿಚಾರವಾಗಿ ದೂರು ದಾಖಲಿಸಿದ್ದಾಳೆ. ಬಲ್ಲ ಮೂಲಗಳ ಪ್ರಕಾರ ಬೆಂಗಳೂರಿನಿಂದ ಪರಾರಿಯಾಗಿದ್ದ ರಮೇಶ್ ತನ್ನ ಮೂಲ ಊರು ಮುಂಡಗೋಡಿಗೆ ಹಿಂತಿರುಗಿದ್ದಾನೆ ಎಂಬ ಮಾಹಿತಿಯಿದೆ.