ಕೆಲವು ವಿಸ್ಮಯಗಳನ್ನು ಅಚ್ಚರಿಗಳನ್ನು ನಾವು ನಂಬಲೇ ಬೇಕು. ವಿಚಿತ್ರ ಆದರೂ ಸತ್ಯ ಅಂತೀವಲ್ಲ ಹಾಗೆ. ಪ್ರಪಂಚದಲ್ಲಿ ಏನು ನಡೆಯುತ್ತೆ ಅಂತ ಯಾರಿಗೂ ಊಹಿಸೋಕೆ ಸಾಧ್ಯವಿಲ್ಲ. ಉದಾಹರಣೆಗೆ ನೋಡಿ, ಗಂಡ ಹೆಂಡತಿ ಜೊತೆಯಲ್ಲಿಯೇ ಇರುವಾಗ ಮಗುವನ್ನ ಪಡೆಯುವುದು ಪ್ರಕೃತಿ ನಿಯಮ. ಆದರೆ ಇಲ್ಲೊಬ್ಬ ಮಹಿಳೆ ಪತಿ ತೀರಿಕೊಂಡ 2 ವರ್ಷಗಳ ನಂತರ ಮಗುವಿಗೆ ಜನ್ಮ ನೀಡಿದ್ದಾಳೆ.
ಹಾಗಾದರೆ ಅದು ಅವನ ಮಗುವೇ ಅಲ್ಲ ಬಿಡಿ ಎಂದು ಊಹಿಸಬಹುದು. ಆದರೆ 100 ಪ್ರತಿಶತ ಇದು ಅದೇ ದಂಪತಿಗಳ ಮಗು. ಇದು ತಂತ್ರಜ್ಞಾನದ ಫಲ. ಬನ್ನಿ ಈ ಘಟನೆಯ ಬಗ್ಗೆ ಇನ್ನಷ್ಟು ವಿಷಯಗಳನ್ನ ಹೇಳ್ತೀವಿ. ಅವರು ಕ್ರಿಸ್ ಹಾಗೂ ಲಾರೆನ್ ದಂಪತಿ. ಮದುವೆಯಾಗಿ ತಮ್ಮದೇ ಆದ ಮಗುವನ್ನು ಪಡೆಯಬೇಕು ಅಂತ ಹಂಬಲದಲ್ಲಿದ್ದವರು. ಆದರೆ ತಾವೊಂದು ಬಗೆದರೆ ದೈವವೊಂದು ಬಗೆದಿತು ಅನ್ನುವ ಮಾತಿದೆಯಲ್ಲ ಹಾಗೆ.
ಮಗುವನ್ನ ಪಡೆದು ಸುಂದರ ಸಂಸಾರ ಕಟ್ಟಿಕೊಳ್ಳಬೇಕು ಎಂದಿದ್ದ ಕ್ರಿಸ್ ಹಾಗೂ ಲಾರೆನ್ ದಂಪತಿಗಳಿಗೆ ಆತಂಕವೊಂದು ಎದುರಾಗಿತ್ತು. ಹೌದು ಕ್ರಿಸ್, ಟರ್ಮಿನಲ್ ಬ್ರೈನ್ ಟ್ಯೂಮರ್ ಗೆ ತುತ್ತಾದರು. ಹಾಗಾಗಿ ಮಗುವಿನ ಬಗ್ಗೆ ಯೋಚನೆ ಮಾಡದೆ ಪತಿಯ ಚಿಕಿತ್ಸೆಯಲ್ಲಿಯೆ ತೊಡಗಿಕೊಂಡರು ಲಾರೆನ್. ಆದರೆ 2020 ಜುಲೈನಲ್ಲಿ ಕ್ರಿಸ್ ಸಾ’ವನ್ನಪ್ಪಿದರು. ಆದರೆ ಮಗುವನ್ನು ಪಡೆಯುವ ಕನಸು ಮಾತ್ರ ಲಾರೆನ್ ಅವರಲ್ಲಿ ಜೀವಂತವಾಗಿತ್ತು.
ಹಾಗಾಗಿ ಪತಿ ತೀರಿಕೊಂಡ ಎರಡು ವರ್ಷಗಳ ನಂತರ ಮುದ್ದಾದ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ ಲಾರೆನ್. ಹೇಗೆ ಗೊತ್ತಾ! ಕ್ರಿಸ್ ಬದುಕಿದ್ದಾಗಲೇ ಅವರ ವೀ’ರ್ಯವನ್ನು ಶೇಖರಿಸಿ ಪ್ರಿಜ್ ಮಾಡಿ ಇಡಲಾಗಿತ್ತು. ಇದನ್ನು ಬಳಸಿ ಲಾರೆನ್ ಕ್ರಿಸ್ ಇಲ್ಲದಿದ್ದರೂ ಆತನ ಮಗುವಿಗೆ ಪತಿಯ ವೀ’ರ್ಯವನ್ನು ಬಳಸಿ ಜನ್ಮ ನೀಡಿದ್ದಾಳೆ. ಈ ಮೂಲಕ ಕ್ರಿಸ್ ಆಸೆಯನ್ನು ಲಾರೆನ್ ಈಡೇರಿಸಿದ್ದಾಳೆ. ಇಂದಿನ ತಂತ್ರಜ್ಞಾನ ಎಷ್ಟು ಅಭಿವೃದ್ದಿ ಹೊಂದಿವೆ ಎನ್ನುವುದಕ್ಕೆ ಇಂಥ ಘಟನೆಗಳು ಸಾಕ್ಷಿ ಒದಗಿಸುತ್ತವೆ ಅಲ್ವೇ