ಈ ದೇಶದಲ್ಲಿ ಬೇರೆ ಪುರುಷನ ಸೌಂದರ್ಯವನ್ನು ನೋಡಿ ಮದುವೆಯಾಗಿರುವ ಮಹಿಳೆಯರು ಏನು ಮಾಡ್ತಾರೆ ಗೊತ್ತಾ

ಪ್ರತಿಯೊಂದು ದೇಶದಲ್ಲಿ ಅದರದ್ದೇ ಆದ ಸಂಸ್ಕೃತಿ ಕಲೆ ವೈವಿಧ್ಯತೆ ಇರುತ್ತದೆ. ಜನರ ಆಡುಭಾಷೆ ಮತ್ತು ಚಟುವಟಿಕೆಗಳು ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಸಂಪ್ರದಾಯ ಮತ್ತು ಆಚರಣೆಗಳು ಕೂಡ ಪ್ರತಿಯೊಂದು ದೇಶದಲ್ಲಿ ವಿಭಿನ್ನವಾಗಿರುತ್ತದೆ. ಕೆಲವು ದೇಶಗಳ ಪದ್ಧತಿಗಳಂತೂ ತುಂಬಾ ವಿಚಿತ್ರವಾಗಿರುತ್ತದೆ. ಇಂತಹ ಜನರು ಇದ್ದಾರೆ ಎಂಬಂತೆ ನಾವೆಲ್ಲ ತಬ್ಬಿಬ್ಬಾಗುತ್ತೆವೆ. ನೀವೆಲ್ಲಾ ಹಿಂದೆಂದೂ ಕೇಳಿರದ ಚಿತ್ರ ವಿಚಿತ್ರ ಪದ್ದತಿಯನ್ನು ರೂಢಿಯಲ್ಲಿಟ್ಟುಕೊಂಡಿರುವ ದಕ್ಷಿಣ ಆಫ್ರಿಕಾ ದೇಶದ ಸತ್ಯವನ್ನು ತಿಳಿದುಕೊಳ್ಳಲು ಮುಂದೆ ಓದಿ.

ದಕ್ಷಿಣ ಆಫ್ರಿಕಾದ ಸಹೇಲ್ ಎಂಬ ಪ್ರದೇಶದಲ್ಲಿ ವೊಡಾಬೆ ಎಂಬ ಬುಡಕಟ್ಟು ಜನಾಂಗವೊಂದು ವಾಸ ಮಾಡುತ್ತಿದೆ. ಮೋಟಾಬೆ ಜನಾಂಗವು ಸುಮಾರು ಒಂದರಿಂದ 2 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಇವರು ವಿಚಿತ್ರವಾದ ಉಡುಪು ಮತ್ತು ಶ್ರೀಮಂತಿಕೆಯ ಸಾಂಸ್ಕೃತಿಕ ಚಟುವಟಿಕೆಗಳಿಂದ ಜನಪ್ರಿಯತೆ ಹೊಂದಿದ್ದಾರೆ. ವೊಡಾಬೆಯ ಜನರು ಫುಲಾ ಭಾಷೆಯನ್ನು ಮಾತನಾಡುತ್ತಾರೆ ಮತ್ತು ಈ ಪ್ರದೇಶದ ಜನರಿಗೆ ಬರೆಯಲು ಬರುವುದಿಲ್ಲ. ಇವರು ತಮ್ಮ ಹಳೆಯ ಸಂಪ್ರದಾಯಗಳನ್ನು ಇನ್ನೂ ಕೂಡ ಬೆಳೆಸಿಕೊಂಡು ಹೋಗುತ್ತಿದ್ದಾರೆ.

ವೊಡಾಬೆ ಜನರು ಉದ್ದ ಕೊಂಬಿನ ಜಾನುವಾರುಗಳನ್ನು ಸಾಕುತ್ತಾರೆ. ವೊಡಾಬೆಯ ನಡವಳಿಕೆಯ ಸಂಹಿತೆಯು ಮೀಸಲು ಮತ್ತು ನಮ್ರತೆ , ತಾಳ್ಮೆ ಮತ್ತು ದೃಢತೆ, ಕಾಳಜಿ ಮತ್ತು ಮುಂದಾಲೋಚನೆ , ಮತ್ತು ನಿಷ್ಠೆಯನ್ನು ಒತ್ತಿಹೇಳುತ್ತದೆ. ಅವರು ಸೌಂದರ್ಯ ಮತ್ತು ಆಕರ್ಷಣೆಗೆ ಹೆಚ್ಚಿನ ಒತ್ತು ನೀಡುತ್ತಾರೆ. ಅದರಲ್ಲೂ ಆಶ್ಚರ್ಯಕರ ಸಂಗತಿಯೇನೆಂದರೆ ಮಹಿಳೆಯರಿಗಿಂತ ಪುರುಷರೇ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅಲ್ಲದೆ ಈ ಪ್ರದೇಶದಲ್ಲಿ ಮಹಿಳೆಯರನ್ನು ಪುರುಷರು ನಾನಾ ರೀತಿಯ ಸರ್ಕಸ್ಆ ಮಾಡಿ ಕರ್ಷಿಸಬೇಕಾಗುತ್ತದೆ.

ಮಹಿಳೆಯರನ್ನು ಆಕರ್ಷಿಸಲು ಪುರುಷರು ಹರಸಾಹಸ ಮಾಡಬೇಕಾಗುತ್ತದೆ. ವಿಚಿತ್ರ ವೇಷ ಭೂಷಣ ಧರಿಸಿ, ನೃತ್ಯ ಮತ್ತು ಮೇಕಪ್ ಗಳನ್ನು ಹಾಕಿಕೊಂಡು ಮಹಿಳೆಯರನ್ನು ಸಂತೃಪ್ತಿ ಪಡಿಸುತ್ತಾರೆ. ಮಹಿಳೆಯರು ಪುರುಷನ ಕೌಶಲ್ಯಗಳನ್ನು ನೋಡಿ ಅವನನ್ನು ಒಪ್ಪಿಕೊಳ್ಳುತ್ತಾರೆ . ವಿಚಿತ್ರ ಸಂಗತಿ ಏನೆಂದರೆ ಮದುವೆಯಾಗಿರುವ ಮಹಿಳೆಯರನ್ನು ಕೂಡ ಬೇರೊಬ್ಬ ಪುರುಷ ಆಕರ್ಷಿಸ ಬಹುದು. ಹಾಗೆ ಮದುವೆಯಾಗಿರುವ ಮಹಿಳೆಯರಿಗೆ ಇನ್ನೊಬ್ಬ ಪುರುಷ ಇಷ್ಟವಾದರೆ ಆ ಪುರುಷನೊಂದಿಗೆ ಆ ಮಹಿಳೆ ಸ್ವಇಚ್ಛೆಯಿಂದ ಸಂಪರ್ಕ ಬೆಳೆಸುಬಹುದು ಮತ್ತು ಆ ಮಹಿಳೆಯ ಈ ನಿರ್ಧಾರಕ್ಕೆ ಮಹಿಳೆಯ ಗಂಡ ಯಾವುದೇ ರೀತಿಯ ನಿರ್ಬಂಧ ಹೇರುವಂತಿಲ್ಲ.

ಹಾಗೆ ಮಹಿಳೆ ಮದುವೆಯಾಗೋ ಕ್ಕಿಂತಲೂ ಮುಂಚೆ ಹಲವಾರು ಪುರುಷರ ಜೊತೆ ಸಂಬಂಧವನ್ನು ಬೆಳೆಸುವ ಅವಕಾಶ ಇರುತ್ತೆ. ಇನ್ನೊಂದು ಆಶ್ಚರ್ಯಕರ ಸಂಗತಿಯೇನೆಂದರೆ ಮದುವೆಯಾಗಿರುವ ತಂದೆ ತಾಯಿ ತಮ್ಮ ಮಕ್ಕಳೊಡನೆ ಸಂಪರ್ಕ ಬೆಳೆಸುವಂತಿಲ್ಲ. ಮಕ್ಕಳು ಅಜ್ಜ ಅಜ್ಜಿಯರೊಂದಿಗೆ ಸಂಪರ್ಕ ಬೆಳೆಸಬೇಕು. ಹಗಲು ಹೊತ್ತಿನಲ್ಲಿ ಗಂಡ ಮತ್ತು ಹೆಂಡತಿ ಕೈ ಹಿಡಿಯುವಂತಿಲ್ಲ ಅಥವಾ ಪರಸ್ಪರ ವೈಯಕ್ತಿಕ ರೀತಿಯಲ್ಲಿ ಮಾತನಾಡುವಂತಿಲ್ಲ.

Leave a Comment