ಯುವ ಪ್ರೇಮಿಗಳು ಪ್ರೀತಿಸಿ ಕಷ್ಟಪಟ್ಟು ಮನೆಯವರನ್ನು ಒಪ್ಪಿಸಿ ಮದುವೆಯಾಗಬೇಕು ಎಂದು ಎಲ್ಲಾ ಸಿದ್ಧತೆಗಳನ್ನು ನಡೆಸಿಕೊಂಡ ಮೇಲೆ ಕಾದಿತ್ತು ದೊಡ್ಡ ಶಾಕ್. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಯುವಕನನ್ನು ಮದುವೆಯಾಗಬೇಕೆಂಬುದು ಯುವತಿಯ ಕನಸಾಗಿತ್ತು. ಮದುವೆಗೆ ಕೆಲವೇ ದಿನ ಇರಬೇಕಿದ್ದರೆ ಭಾವಿ ಪತಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ಯುವತಿ ದಂಗಾಗಿ ತೆಗೆದುಕೊಂಡ ನಿರ್ಧಾರ ವನ್ನು ನೋಡಿದರೆ ನಿಜಕ್ಕೂ ಮನಕಲಕುತ್ತವೆ. ಇಂಥ ಕಠಿಣ ನಿರ್ಧಾರವನ್ನು ಆಕೆ ಯಾಕಾದರೂ ತೆಗೆದುಕೊಂಡಳು ಅಂತ ಅನಿಸುತ್ತೆ.
23 ವರ್ಷದ ಧನುಷ್ ಎಂಬ ಹುಡುಗ ಮತ್ತು 22 ವರ್ಷದ ಸುಷ್ಮಾ ಎಂಬ ಹುಡುಗಿ ಇಬ್ಬರೂ ಕೂಡ ತುಮಕೂರಿನ ಮೂಲದ ಮಸ್ಕಲ್ ಗ್ರಾಮದವರು. ಸುಷ್ಮಾ ಎಂಕಾಂ ವಿದ್ಯಾಭ್ಯಾಸ ಮಾಡುತ್ತಿದ್ದಳು ಮತ್ತು ಧನುಷ್ ಬಟ್ಟೆ ಅಂಗಡಿಯ ವ್ಯಾಪಾರ ಮಾಡಿ ಬಿಸಿನೆಸ್ ಮಾಡುತ್ತಿದ್ದ. ಇಬ್ಬರು ಜೋಡಿಗಳು ಕಳೆದ ಹನ್ನೊಂದು ವರ್ಷದಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಇವರಿಬ್ಬರಿಗೆ ಲವ್ ಆಗಿತ್ತಂತೆ. ಇವರದ್ದು ತುಂಬಾ ಆಳವಾದ ಪ್ರೀತಿ.
ಒಬ್ಬರನ್ನೊಬ್ಬರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದರು. ಆದರೆ ದೇವರಿಗೆ ಇವರ ಪ್ರೇಮದಾಟ ನೋಡಿ ಅಸೂಯೆ ಹುಟ್ಟಿತೋ ಏನೋ ಗೊತ್ತಿಲ್ಲ. ಮೇ 11 ರಂದು ಧನುಷ್ ಊರಿನ ಜಾತ್ರೆಗೆ ಬೆಂಗಳೂರಿನಿಂದ ಹೊರಟಿದ್ದ. ಆ ಸಂದರ್ಭದಲ್ಲಿ ಧನುಷ್ ಗೆ ನೆಲಮಂಗಳ ಕುಲುವನಹಳ್ಳಿ ಬಳಿ ಅ’ಪ’ಘಾತ ಉಂಟಾಗುತ್ತದೆ. ದುರದೃಷ್ಟವಶಾತ್ ಈ ಅ’ಪ’ಘಾತದಲ್ಲಿ ಧನುಷ್ ತನ್ನ ಜೀವವನ್ನು ಕಳೆದುಕೊಳ್ಳುತ್ತಾನೆ. ಈ ವಿಷಯ ತಕ್ಷಣ ಸುಷ್ಮಾಗೆ ತಿಳಿಯುತ್ತದೆ.ವಿಷಯ ತಿಳಿಯುತ್ತಿದ್ದಂತೆ ಸುಷ್ಮಾಗೆ ದುಃಖವನ್ನು ತಡೆಯಲು ಆಗಲಿಲ್ಲ.
ಧನುಷ್ ಅಂತ್ಯಸಂಸ್ಕಾರದಲ್ಲಿ ಸುಷ್ಮಾ ಭಾಗಿಯಾಗುತ್ತಾಳೆ. ತನ್ನ ಪ್ರಿಯಕರನನ್ನು ಆ ಸ್ಥಿತಿಯಲ್ಲಿ ನೋಡಿ ಸುಷ್ಮಾಗೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಈ ಇಬ್ಬರು ಜೋಡಿಗಳಿಗೂ ಮದುವೆ ಕೂಡ ನಿಶ್ಚಯವಾಗಿತ್ತು ತಮ್ಮ ಪ್ರೀತಿಯ ವಿಷಯವನ್ನು ಮನೆಯವರ ಬಳಿ ಹೇಳಿ ಕಷ್ಟಪಟ್ಟು ಒಪ್ಪಿಸಿ ಮದುವೆಗೆ ಒಪ್ಪಿಗೆ ಪಡೆದಿದ್ದರು. ನಾನು ಮದುವೆಯಾದರೆ ಅವನನ್ನೇ ಮದುವೆಯಾಗುತ್ತೇನೆ ಎಂದು ಸುಷ್ಮಾ ಪಾಲಕರನ್ನು ಒಪ್ಪಿಸಿದ್ದಳು. ಆದರೆ ಯಾವಾಗ ತನ್ನ ಪ್ರಿಯಕರ ಜೀವವನ್ನು ಕಳೆದುಕೊಂಡ ವಿಷಯ ತಿಳಿಯುತ್ತದೆಯೋ ಆಗ ಸುಷ್ಮಾಳ ಜೀವನವೇ ಕಗ್ಗತ್ತಿನಲ್ಲಿ ಮುಳುಗುತ್ತೆ.
ಮದುವೆಯಾದರೆ ಧನುಷ್ ನನ್ನೇ ಮದುವೆಯಾಗುತ್ತೇನೆ ಎಂದು ಮನಸ್ಸಿನಲ್ಲಿ ನಿರ್ಧಾರ ಮಾಡಿದ್ದ ಸುಷ್ಮಾಗೆ ಧನುಷ್ ಇಲ್ಲ ಎಂಬ ವಿಷಯವನ್ನು ಅರಗಿಸಿಕೊಳ್ಳಲಾಗದೆ ತಾನೂ ಕೂಡ ಧನುಷ್ ಬಳಿ ಹೋಗಲು ಯೋಚಿಸುತ್ತಾಳೆ. ಧನುಷ್ ತೀರಿಕೊಂಡು ಮೂರೇ ದಿನಕ್ಕೆ ಸುಷ್ಮಾ ದುಃಖ ವನ್ನು ತೆಗೆದುಕೊಳ್ಳಲಾಗದೆ ವಿ’ಷ’ವನ್ನು ಸೇವಿಸಿ ದೇವರ ಪಾದ ಸೇರಿಕೊಂಡಿದ್ದಾಳೆ. ಸುಷ್ಮಾಳನ್ನು ಆಸ್ಪತ್ರೆಗೆ ಸೇರಿಸಿ ಕುಟುಂಬದ ಸದಸ್ಯರು ಅವಳನ್ನು ಉಳಿಸಿಕೊಳ್ಳಲು ಪ್ರಯತ್ನ ಪಟ್ಟರು ಆದರೆ ಆ ದೇವರು ಸುಷ್ಮಾ ಮತ್ತು ಧನುಷ್ ದೇವಲೋಕದಲ್ಲಿ ಮತ್ತೆ ಒಂದಾಗಬೇಕು ಎಂದು ನಿಶ್ಚಯ ಮಾಡಿದ್ದ.