Virendra Sehwag ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿರುವಂತಹ ವೀರೇಂದ್ರ ಸೆಹ್ವಾಗ್(Virendra Sehwag) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇವಲ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಸುದ್ದಿ ಮಾಡುತ್ತಾರೆ.
ಹೌದು ಕ್ರಿಕೆಟ್ ನಿಂದ ನಿವೃತ್ತಿ ಆದ ನಂತರ ವೀರೇಂದ್ರ ಸೆಹ್ವಾಗ್ ರವರು ಸಂಪೂರ್ಣವಾಗಿ ಕಾಮಂಟೇಟರ್ ಆಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದಲ್ಲಿ ಕಪ್ಪು ಕಳಂಕ ಎಂದು ಅನಿಸಿಕೊಂಡಿರುವ ರೈಲು ದುರಂತ ನಡೆದಿರುವುದು ನಿಮಗೆಲ್ಲರಿಗೂ ತಿಳಿದಿದೆ.
280ಕ್ಕೂ ಅಧಿಕ ಮಂದಿ ಮರಣ ಹೊಂದಿದ್ದಾರೆ ಹಾಗೂ ಆಸ್ಪತ್ರೆಯಲ್ಲಿ 800ಕ್ಕೂ ಅಧಿಕ ಜನರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು ಕೆಲವರು ಗಂಭೀರ ಸ್ವರೂಪದಲ್ಲಿ ಇದ್ದರೆ ಇನ್ನು ಕೆಲವರು ಜೀವನ್ಮರಣದ ಹೋರಾಟದಲ್ಲಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ವೀರೇಂದ್ರ ಸೆಹ್ವಾಗ್(Virendra Sehwag) ರವರು ಮಾಡಿರುವಂತಹ ಕೆಲಸ ನಿಜಕ್ಕೂ ಕೂಡ ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿದೆ.
ಹೌದು ಈಗಾಗಲೇ ಸಾಕಷ್ಟು ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವಂತಹ ವೀರೇಂದ್ರ ಸೆಹ್ವಾಗ್ ರವರು ಈ ಘಟನೆಯಲ್ಲಿ ಮಾಡಿದವರ ಮನೆಯ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನಾನು ನೀಡುತ್ತೇನೆ ಎಂಬುದಾಗಿ ಸೇಹವಾಗ್ ಮುಂದೆ ಬಂದಿರುವುದು ಪ್ರತಿಯೊಬ್ಬರ ಮೆಚ್ಚುಗೆಗೆ ಕಾರಣವಾಗಿದೆ