Viral News Kannada ಸ್ನೇಹಿತರೆ, ಸಾಕಷ್ಟು ಪುಸ್ತಕಗಳಲ್ಲಿ ಇತಿಹಾಸಗಳಲ್ಲಿ ಪುರುಷ ಶೌರ್ಯದ ಪುರಾವೆಗಳನ್ನು ನಾವು ಹಲವು ಬಾರಿ ನೋಡಿರುತ್ತೇವೆ. ಅಥವಾ ಓದಿ ತಿಳಿದುಕೊಂಡಿರುತ್ತೇವೆ ಆದರೆ ಮಹಿಳೆಯರು ತಾವು ಯಾರಿಗೂ ಕಡಿಮೆ ಇಲ್ಲ ಎಂದು ಒಂದು ಹೆಜ್ಜೆ ಮುಂದೆ ಹೋಗಿ ಸಾಹಸ ಕಾರ್ಯಕ್ಕೆ ಕೈ ಹಾಕಿ ಅದರಲ್ಲಿ ಗೆಲುವು ಸಾಧಿಸಿರುವುದನ್ನು ಅದೆಷ್ಟೋ ಮಂದಿ ಗುರುತಿಸುವುದಿಲ್ಲ.
ಆದರೆ ಈಗ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವಂತಹ ಸುದ್ದಿ ಮಹಿಳೆಯರ (Women) ಶೌರ್ಯಕ್ಕೆ ಪ್ರಶಂಸೆಯನ್ನು ತಂದು ಕೊಡುತ್ತಿದ್ದು, ಮುಳಗಿ ಹೋಗುತ್ತಿದ್ದಂತಹ ಯುವಕನನ್ನು ಕಾಪಾಡುವ ಸಲುವಾಗಿ ಆಪತ್ಬಾಂಧವರಂತೆ ಬಂದ ಸ್ತ್ರೀಯರು ತನ್ನ ಸೀರೆಯನ್ನು ಬಿಚ್ಚಿ ಯುವಕರ ಪ್ರಾಣ ಉಳಿಸಲು ನೀರಿಗೆ ಎಸೆದಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿರುವುದು ಎಲ್ಲಿ? ಅನಂತರ ಏನಾಯ್ತು ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಸಂಕಷ್ಟದ ಸಮಯದಲ್ಲಿ ತನ್ನ ಪರಾಕ್ರಮವನ್ನು ಮೆರೆದು ಯುವಕನ ಪ್ರಾಣ ಉಳಿಸಿದಂತಹ ಮಹಿಳೆಯರ ಹೆಸರು ಅಂತವಲ್ಲಿ, ಮುಥಮಲ್ ಹಾಗೂ ಸೆಂತಾ ಮೀಜ್ ಸೆಲ್ವಿ. ಮೂಲತಃ ತಮಿಳುನಾಡಿನ ಕೊಟ್ಟರಾಯ ಡ್ಯಾಮ್ (Kotaraya Dam) ನಲ್ಲಿ ಸ್ನಾನ ಮಾಡುವ ಸಲುವಾಗಿ ಕ್ರಿಕೆಟ್ ಆಟವಾಡಿದ ಬಳಿಕ ನಾಲ್ಕು ಜನ ಯುವಕರು ನೀರಿಗಿಳಿಯುತ್ತಾರೆ, ಆ ಸಂದರ್ಭದಲ್ಲಿ ಎಡವಟ್ಟಾಗಿ ಯುವಕರು ನೀರಿನಲ್ಲಿ ಮುಳುಗಿ ಹೋಗುತ್ತಿರುವುದನ್ನು ಗಮನಿಸಿದಂತಹ ಮಹಿಳೆಯರು ಆಪತ್ಬಾಂಧವರಂತೆ ತಮ್ಮ ಸೀರೆಯನ್ನು ಬಿಚ್ಚಿ ನೀರಿಗೆ ಎಸೆದು ಮುಳುಗುತ್ತಿರುವಂತಹ ಯುವಕರನ್ನು ಸಂರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಈ ಕೃತ್ಯದಲ್ಲಿ ಕೇವಲ ಇಬ್ಬರು ಯುವಕರ ಪ್ರಾಣವನ್ನು ಉಳಿಸಲಾಗಿದೆ ಆದರೆ ದುರ್ದೈವ ಇನ್ನಿಬ್ಬರನ್ನು ಉಳಿಸಲಾಗಲಿಲ್ಲ ಎಂದು ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.
ಹೌದು ಗೆಳೆಯರೇ ಈ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದಂತಹ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಆನಂತರ ಇಬ್ಬರ ಮೃತ ದೇಹ ತೇಲಿ ಬಂದಿರುವುದು ನೋಡ ಸಿಕ್ಕಿದೆ. ಈ ಒಂದು ಪ್ರಕರಣದ ಕುರಿತು ನ್ಯೂ ಇಂಡಿಯಾ ಎಕ್ಸ್ಪ್ರೆಸ್ (New india express) ಆಗಸ್ಟ್ 6ನೇ ತಾರೀಕಿನಂದು ತನ್ನ ಪೇಪರ್ ನಲ್ಲಿ ಪ್ರಕಟ ಮಾಡಿದ್ದಾರೆ, ಮಹಿಳೆಯರ ಸಾಹಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ 21 ವರ್ಷ ಪೂರೈಸಿದವರಿಗೆ ಗುಡ್ ನ್ಯೂಸ್, ಕೇವಲ 15 ಸಾವಿರ ಸಂಬಳವಿದ್ರು ಚಿಂತೆ ಇಲ್ಲ ಮೂರು ಲಕ್ಷ ಸಾಲ ಲಭ್ಯ