Sudhamurthy family: ಬೀಗರಾದ ಸುಧಾ ಮೂರ್ತಿ ಅಮ್ಮನವರೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪೋಷಕರು!

Sudhamurthy family Visit Mantralaya: ಸ್ನೇಹಿತರೆ ಸುಧಾ ಮೂರ್ತಿ ಅಮ್ಮನವರು ಸಾಮಾಜಿಕ ಜಾಲತಾಣದಲ್ಲಿ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಅದರಂತೆ ಈಗ ಇಡೀ ದೇಶವೇ ಹೆಮ್ಮೆಪಡುವಂತಹ ವ್ಯಕ್ತಿಯಾಗಿರುವ ಅಳಿಯ ರಿಷಿ ಸುನಕ್(Rishi Sunak) ಅವರಿಂದ ಸುಧಾ ಮೂರ್ತಿ ಅಮ್ಮ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ತಮ್ಮ ಬೀಗರೊಟ್ಟಿಗೆ ಮಂತ್ರಾಲಯಕ್ಕೆ ತೆರಳಿ ಆ ಕೆಲ ಸುಂದರ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೌದು ಸ್ನೇಹಿತರೆ, ಬ್ರಿಟನ್ ದೇಶದ ಪ್ರಧಾನಿಯಾಗಿರುವಂತಹ ಸುಧಾ ಮೂರ್ತಿ(Sudha Murty) ಅಮ್ಮನವರ ಅಳಿಯ ರಿಷಿ ಸುನಕ್, ಜಿ 20 ಶೃಂಗಸಭೆಯ ಹಿನ್ನೆಲೆ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ನಮ್ಮ ಭಾರತದಲ್ಲಿರುವಂತಹ ಅತ್ಯಾಕರ್ಷಣೀಯ ರಮಣೀಯ ತಾಣಗಳಿಗೆ ತೆರಳಿ ತಮ್ಮ ಹೆಂಡತಿಯೊಂದಿಗೆ ಫೋಟೋಗೆ ಪೋಸ್ ನೀಡಿದರು. ಬ್ರಿಟನ್ ನಲ್ಲಿ ಇದ್ದರೂ ಕೂಡ ರಿಷಿ ಸುನಕ್ ಕುಟುಂಬಸ್ಥರು ಆಧ್ಯಾತ್ಮಿಕತೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ.

ಹೀಗಾಗಿ ಶೃಂಗಸಭೆ ವೇಳೆ ದೆಹಲಿಯಲ್ಲಿರುವಂತಹ ಅಕ್ಷರಧಾಮ ದೇವಸ್ಥಾನಕ್ಕೆ(Akshardham Temple) ತೆರಳಿ ರಿಷಿ ಸುನಕ್ ಪೂಜಾ ಕೈಂಕಾಲಗಳಲ್ಲಿ ತಮ್ಮ ಪತ್ನಿಯೊಂದಿಗೆ ಭಾಗಿಯಾಗಿದಂತಹ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದವು. ಇದೀಗ ಅವರ ಪೋಷಕರಾದ ಯಶ್ವೀರ್ ಸುನಕ್ ಮತ್ತು ಉಷಾ ಸುನಕ್ ದಂಪತಿಗಳು ಸುಧಾ ಮೂರ್ತಿ ಅಮ್ಮನವರೊಂದಿಗೆ ಮಂತ್ರಾಲಯಕ್ಕೆ ತೆರಳಿ ರಾಯರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.

ಹೌದು ಗೆಳೆಯರೇ ತಮ್ಮ ಬೀಗರು ಭಾರತಕ್ಕೆ ಬಂದ ಬೆನ್ನಲ್ಲೇ ಅವರ ಜವಾಬ್ದಾರಿಯನ್ನು ತೆಗೆದುಕೊಂಡಿರುವಂತಹ ಸುಧಾ ಮೂರ್ತಿ ಅಮ್ಮನವರು ಮಂತ್ರಾಲಯಕ್ಕೆ ಕರೆದುಕೊಂಡು ಹೋಗಿ ಪೀಠಾಧಿಪತಿಗಳಾದ ಸುಬುದೇಂದ್ರ ತೀರ್ಥರ ಆಶೀರ್ವಾದ ಪಡೆದುಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗುತ್ತಿದೆ.

ಅದರಲ್ಲೂ ರಿಷಿ ಸುನಕ್(Rishi Sunak) ಬ್ರಿಟನ್ ಪ್ರಧಾನಿಯಾದರು ಕೂಡ ತಾನೋರ್ವ ಹಿಂದೂ ಎಂದು ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿರುವುದನ್ನು ಕಂಡ ಭಾರತೀಯರಿಗೆ ಅವರ ಮೇಲಿನ ಗೌರವ ದುಪ್ಪಟ್ಟಾಗುತ್ತಿದೆ.

Leave a Comment