ಬಹುಶಃ ಗುರುವಿಗೆ ಭಾರತದಲ್ಲಿ ಇರುವಷ್ಟು ಪ್ರಾಮುಖ್ಯತೆ ಹಾಗೂ ಗುರುವಿಗೆ ಕೊಡುವಷ್ಟು ಮರ್ಯಾದೆ ಬೇರೆ ಯಾವ ದೇಶದಲ್ಲಿಯೂ ಕಾಣಲು ಸಿಗಲಿಕ್ಕಿಲ್ಲ. ಎಲ್ಲಾ ದೇವರಿಗಿಂತಲೂ ಗುರುವೇ ದೊಡ್ಡ ದೇವರು. ನಮಗೆ ಗುರುವೇ ಬ್ರಹ್ಮ ಗುರುವೇ ವಿಷ್ಣು. ವಿದ್ಯಾರ್ಥಿ ಏನು ತಪ್ಪು ಮಾಡಿದರು ಅದನ್ನ ತಿದ್ದಿ ಬುದ್ದಿ ಹೇಳೋದಕ್ಕೆ ಸಾಧ್ಯವಾಗುವುದು ಶಿಕ್ಷಕನಿಗೆ ಮಾತ್ರ. ಸಮಾಜಕ್ಕೆ ನೀಡುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ. ಆದರೆ ಬೇಲಿಯೇ ಎದ್ದು ಹೊಲ ಮೈದಂತೆ ಎನ್ನುವ ಗಾದೆಯನ್ನು ನೀವು ಕೇಳಿರಬಹುದು. ಇಂದು ಕೆಲವು ಕಡೆ ಶಿಕ್ಷಣ ವ್ಯವಸ್ಥೆಯಲ್ಲಿ ಹೀಗೆ ಆಗುತ್ತಿದೆ ಶಿಕ್ಷಕರು ತಾವು ಯಾಕೆ ಶಾಲೆಗೆ ಬಂದಿದ್ದೇವೆ ತಮ್ಮ ಕರ್ತವ್ಯವೇನು ಅನ್ನೋದನ್ನ ಮರೆತುಬಿಟ್ಟಿದ್ದಾರೆ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕಲಿಸುವ ಬದಲಿಗೆ ತಮಗೆ ಹೇಗೆ ಬೇಕೋ ಹಾಗೆ ಶಾಲೆಯಲ್ಲಿ ಇರಲು ಆರಂಭಿಸಿದ್ದಾರೆ.
ಇಂದು ಶಿಕ್ಷಣ ವ್ಯವಸ್ಥೆ ಹದಗೆಡುವುದಕ್ಕೆ ಇಂತಹ ಕೆಲವು ಶಿಕ್ಷಕರು ಕೂಡ ಕಾರಣ. ವಿದ್ಯಾರ್ಥಿಗಳು ಹಾಳಾಗಿದ್ದಾರೆ ಅಂತ ಕೇವಲ ಕಂಪ್ಲೆಂಟ್ ಮಾಡಿದ್ರೆ ಸಾಲದು ಅದರಲ್ಲಿ ಶಿಕ್ಷಕರ ಕೈವಾಡ ಎಷ್ಟಿರುತ್ತೆ ಅನ್ನೋದನ್ನ ಕೂಡ ಗಮನಿಸಬೇಕು. ಇಂದು ಅದೆಷ್ಟು ಗೌರ್ಮೆಂಟ್ ಶಾಲೆಗಳು ಹೆಸರು ಹಾಳು ಮಾಡಿಕೊಂಡಿದ್ದು ಇಂತಹ ಕೆಲವು ಶಿಕ್ಷಕರಿಯಿಂದ. ಹೌದು ಉತ್ತರಪ್ರದೇಶದಲ್ಲಿ ಒಂದು ಶಾಲೆಯಲ್ಲಿ ನಡೆದ ಈ ಘಟನೆ ಶಿಕ್ಷಕರ ಮೇಲಿನ ನಂಬಿಕೆಯನ್ನು ಒಂದು ಕ್ಷಣ ಮರೆಮಾಚಿಸಿ ಬಿಡುತ್ತೆ.
ಉತ್ತರ ಪ್ರದೇಶದ ಹರ್ದೋಯಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆ ಇದು. ಶಿಕ್ಷಕಿ ಒಬ್ಬಳು ತಾನು ಶಾಲೆಯಲ್ಲಿ ಪಾಠ ಮಾಡುವುದನ್ನ ಬಿಟ್ಟು ಕುರ್ಚಿಯಲ್ಲಿ ಕುಳಿತು ವಿದ್ಯಾರ್ಥಿಯ ಬಳಿ ಕೈ ಮಸಾಜ್ ಮಾಡಿಸಿಕೊಳ್ಳುತ್ತಿದ್ದಾಳೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗಿರುವ ಈ ವಿಡಿಯೋ ಉತ್ತರ ಪ್ರದೇಶದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೂ ಬಂದಿದೆ. ಈ ಶಿಕ್ಷಕಿಯನ್ನು ಊರ್ಮಿಳಾ ಸಿಂಗ್ ಎಂದು ಗುರುತಿಸಲಾಗಿದೆ. ಈ ಶಿಕ್ಷಕಿಯನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಸಾಕಷ್ಟು ಜನ ಒತ್ತಾಯ ಮಾಡಿದ್ದಾರೆ. ಟ್ವಿಟರ್ ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ವಿದ್ಯಾರ್ಥಿಗಳಿಂದ ಮಸಾಜ್ ಮಾಡಿಸಿಕೊಳ್ಳುವ ಶಿಕ್ಷಕರು ಹರ್ದೋಯ್ ಯುಪಿ ಸರ್ಕಾರಿ ಶಾಲೆ ಅಂತ ಬರೆದಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಟಿಕರು ಶಿಕ್ಷಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ಶಿಕ್ಷಣ ಇಲಾಖೆ ಕೂಡಲೇ ಈ ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯ ಮಾಡಿದ್ದಾರೆ. ಕೆಲವರು ದಯವಿಟ್ಟು ವಿದ್ಯಾರ್ಥಿಗಳನ್ನು ಹೀಗೆಲ್ಲಾ ಬಳಸಿಕೊಳ್ಳಬೇಡಿ ಅಂತ ವಿನಂತಿಸಿದ್ದಾರೆ ಇನ್ನು ಕೆಲವರು ಇಂಥವರಿಂದಲೇ ಸರ್ಕಾರಿ ಸ್ಕೂಲ್ ನ ಹೆಸರು ಹಾಳಾಗಿರೋದು.
ಮೊದಲು ಈಕೆಯನ್ನ ನೌಕರಿಯಿಂದ ತೆಗೆದುಹಾಕಿ ಅಂತ ಕಮೆಂಟ್ ಮಾಡಿದ್ದಾರೆ. ಅಂದಹಾಗೆ ಹರ್ದೋಯ್ ಮೂಲ ಶಿಕ್ಷಣ ಅಧಿಕಾರಿ ಬಿಪಿ ಸಿಂಗ್ ಅವರಿಗೂ ಈ ವಿಡಿಯೋ ತಲುಪಿದ್ದು ಅವರು ’ಈಗಾಗಲೇ ಮೇಲ್ನೋಟಕ್ಕೆ ಶಿಕ್ಷಕರದ್ದೆ ತಪ್ಪು ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಅವರನ್ನು ಅಮಾನತುಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಶಿಕ್ಷಕರನ್ನ ನಂಬಿ ಶಾಲೆಗೆ ಮಕ್ಕಳನ್ನು ಕಳುಹಿಸುತ್ತೇವೆ. ಶಿಕ್ಷಣ ವ್ಯವಸ್ಥೆಯಲ್ಲಿ ಲೋಪ ದೋಷಗಳು ಇರುವುದಂತೂ ಸತ್ಯ. ಕರೆ ವಿದ್ಯಾರ್ಥಿಗಳನ್ನು ಹೇಗೆ ನೋಡಿಕೊಳ್ಳಬೇಕು ಅವರಿಗೆ ಯಾವ ರೀತಿ ಶಿಕ್ಷಣ ಕೊಡಬೇಕು ಅಂತ ಶಿಕ್ಷಕರಿಗೆ ತಿಳಿಯದೆ ಇದ್ದರೆ ಇನ್ನು ವಿದ್ಯಾರ್ಥಿಗಳ ಉದ್ಧಾರ ಆಗುವುದಾದರೂ ಹೇಗೆ ಅಲ್ವಾ! ಉತ್ತರ ಪ್ರದೇಶದ ಶಿಕ್ಷಕಿ ವಿದ್ಯಾರ್ಥಿಯೊಬ್ಬನ ಕೈಯಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋವೊಂದು ಎಲ್ಲಾ ಕಡೆ ವೈರಲ್ ಆಗಿದೆ. ಈ ಮಸಾಜ್ ವಿಡಿಯೋ ಕೆಳಗಿದೆ ನೋಡಿ ನಿಮ್ಮ ಅನಿಸಿಕೆ ತಿಳಿಸಿ..