ದಾನ ಧರ್ಮಗಳ ಕ್ಷೇತ್ರ ಶ್ರೀ ಧರ್ಮಸ್ಥಳ ಪುಣ್ಯ ಕ್ಷೇತ್ರದಲ್ಲಿ ಊಟ ಮಾಡಿದ್ದರೆ ಇದನೊಮ್ಮೆ ತಿಳಿಯಿರಿ

ಶ್ರೀ ಕ್ಷೇತ್ರ ಧರ್ಮಸ್ಥಳ ಅಂದ್ರೆ ಸಾಕು ಪ್ರತಿಯೊಬ್ಬರಿಗೂ ಗೊತ್ತಿರುವಂತ ಪುಣ್ಯ ಕ್ಷೇತ್ರ ಎಂದು ನೆನಪಾಗುತ್ತದೆ, ಈ ಪುಣ್ಯ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ ಹಾಗೂ ಇಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆದು ಇಲ್ಲಿ ಪ್ರಸಾದವನ್ನು ಸ್ವೀಕರಿಸುತ್ತಾರೆ. ಪ್ರತಿದಿನ ಸಾವಿರಾರ್ ಭಕ್ತರಿಗೆ ಅನ್ನ ಸಂತರ್ಪಣೆ ಮಾಡೋ ಈ ಕ್ಷೇತ್ರದಲ್ಲಿ ಪ್ರತಿದಿನ ಎಷ್ಟು ಜನ ಪ್ರಾಸದವನ್ನು ಸ್ವೀಕರಿಸುತ್ತಾರೆ ಇದರ ಹಿಂದಿರುವಂತ ಕಾರ್ಯ ವೈಖರಿ ಹೇಗಿದೆ ಅನ್ನೋದನ್ನ ಈ ಮೂಲಕ ತಿಳಿಯೋಣ ಬಹಳಷ್ಟು ಜನಕ್ಕೆ ಇದರ ಬಗ್ಗೆ ಅಷ್ಟೊಂದು ತಿಳಿದಿರುವುದಿಲ್ಲ ಅನಿಸುತ್ತದೆ.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಇಲ್ಲಿನ ನೇತ್ರಾವತಿ ನದಿಯಲ್ಲಿ ಮಿಂದು ಅಮ್ಮನವರ ಹಾಗೂ ಶ್ರೀ ಮಂಜುನಾಥನ ದರ್ಶನ ಪಡೆದವರೇ ಪುಣ್ಯವಂತರು, ಈ ಪುಣ್ಯ ಕ್ಷೇತ್ರದಲ್ಲಿ ಇರುವ ದಾಸೋಹ ಸಹ ಅಷ್ಟೇ ಪ್ರಸಿದ್ದಿ, ಈ ದೇಗುಲಕ್ಕೆ ಬಂದವರು ಊಟ ಮಾಡದೆ ಹಿಂದಿರುಗಿ ಬರುವುದಿಲ್ಲ, ಪುಣ್ಯ ಕ್ಷೇತ್ರದಲ್ಲಿ ನಡೆಯುವ ಈ ಪುಣ್ಯ ಕಾರ್ಯದ ಬಗ್ಗೆ ಕೊಂಚ ಮಾಹಿತಿ ತಿಳಿಸುವ ಪ್ರಯತ್ನ ನಮ್ಮದು.

ಅನ್ನ ದಾಸೋಹ ಯಾವ ದಿನದಿಂದ ನಡೆದುಕೊಂಡು ಬಂದಿದೆ ಹಾಗೂ ಇದರ ಹಿಂದಿರುವಂತ ವಿಶೇಷತೆ ಏನು ಅನ್ನೋದನ್ನ ನೋಡುವುದಾದರೆ, ಅಂಕಿ ಅಂಶ ನೋಡುವುದಾದರೆ ಹೆಗಡೆ ಅವರ ತಂದೆ 1955 ರಲ್ಲಿ ಅಣ್ಣ ಪೂರ್ಣ ಭೋಜನ ಶಾಲೆ ಕಟ್ಟುವ ನಿರ್ದಾರ ಮಾಡಿದರು ಎನ್ನಲಾಗುತ್ತದೆ. ವಿಶಾಲವಾದ ಭೋಜನ ಶಾಲೆಯಲ್ಲಿ ಒಂದು ದಿನಕ್ಕೆ 25 ರಿಂದ 50 ಸಾವಿರ ಜನರು ಅನ್ನ ಪ್ರಸಾದ ಸ್ವೀಕರಿಸುತ್ತಾರೆ, ದೀಪೋತ್ಸವ ಸಂಧರ್ಭದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಇಲ್ಲಿ ಅಡುಗೆ ಮಾಡಲಾಗುತ್ತದೆ.

ಇನ್ನು ಈ ಪುಣ್ಯ ಕ್ಷೇತ್ರದಲ್ಲಿ ಹೆಚ್ಚಿನದಾಗಿ ಸ್ವಚ್ಛತೆಗೆ ಆದ್ಯತೆ ಕೊಡಲಾಗುತ್ತದೆ ಆದ್ದರಿಂದ ಇಲ್ಲಿ ಮಾಡುವಂತ ಆಹಾರ ಕೂಡ ಅಷ್ಟೇ ಅಸ್ವಚ್ಛತೆಯನ್ನು ಹೊಂದಿರುತ್ತದೆ, ಅಷ್ಟೇ ಅಲ್ದೆ ಅಡುಗೆಗೆ ಬಳಸುವ ಪ್ರತಿಯೊಂದು ಸಾಮಗ್ರಿಗಳು ಅತ್ಯಾಧುನಿಕ ಯಂತ್ರ ಬಳಸಿ ಅಡುಗೆ ತಯಾರಾಗುತ್ತದೆ, ದಿನಕ್ಕೆ 5000 ಕೆಜಿ ಯಷ್ಟು ಅಕ್ಕಿ ಬಳಸಿ ಅನ್ನ ಮಾಡುತ್ತಾರೆ ಇನ್ನು 3500 ಕೆಜಿ ತರಕಾರಿಗಳನ್ನು ಸಾಂಬಾರು ಮಾಡಲು ಬಳಸುತ್ತಾರೆ, ದೀಪೋತ್ಸವದ ಸಂದರ್ಭದಲ್ಲಿ ದಿನಕ್ಕೆ 8500 ಕೆಜಿ ಅಕ್ಕಿಯಿಂದ ಅಡುಗೆ ನಡೆಯುತ್ತದೆ. ಇಲ್ಲಿ ಅಡುಗೆಗೆ ಒಂದು ದಿನಕ್ಕೆ 1200 ತೆಂಗಿನ ಕಾಯಿ ಬಳಸಲಾಗುತ್ತದೆ, ಇಷ್ಟೊಂದು ಪ್ರಮಾಣದ ಕಾಯಿ ಹಾಗೂ ತರಕಾರಿಯನ್ನ ದೇವಸ್ಥಾನದ ಆಡಳಿತದಲ್ಲಿರುವ ತೋಟದಲ್ಲಿ ಬೆಳೆಯಲಾಗುತ್ತದೆ ಅನ್ನೋದೇ ವಿಶೇಷತೆಯಾಗಿದೆ. ನಿಮಗೆ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ.

Leave a Comment