shivamogga boy Azaan khan: ಸ್ನೇಹಿತರೆ, ಜಗತ್ತಿನಾದ್ಯಂತ ನಡೆಯುವಂತಹ ಕೆಲ ಚಿತ್ರ ವಿಚಿತ್ರ ಘಟನೆಗಳು ಸೋಶಿಯಲ್ ಮೀಡಿಯಾಗಳ ಮುಖಾಂತರ ಬೆಳಕಿಗೆ ಬರುವುದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾಗಿದೆ. ಅದರಂತೆ ಒಂದು ಸುಂದರ ವಿಡಿಯೋ ಹಾಗೂ ಫೋಟೋಗಳನ್ನು ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ನಂತಹ ಜಾಲದಲ್ಲಿ ಬಾರಿ ವೈರಲಾಗುತ್ತಿದ್ದು,
ವಿಡಿಯೋದಲ್ಲಿ ಎಂಟು ವರ್ಷದ ಬಾಲಕ ಅಸಲಿ ಪೊಲೀಸ್ ಅಧಿಕಾರಿಯನ್ನು ಪಕ್ಕಕ್ಕೆ ಸರಿಸಿ ಅವರ ಕುರ್ಚಿ ಮೇಲೆ ತಾನು ಒಂದು ಗಂಟೆಯ ಕಾಲ ಕುಳಿತು ಅಧಿಕಾರ ನಡೆಸಿದ್ದಾನೆ. ಹೌದು ಗೆಳೆಯರೇ ಈ ಒಂದು ಘಟನೆ ನಡೆದಿರುವುದು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಲ್ಲ, ಆ ಮಗು ವೇಷವನ್ನು ಧರಿಸಿರುವ ಸಲುವಾಗಿಯೂ ಅಲ್ಲ, ಬದಲಿಗೆ ಶಿವಮೊಗ್ಗದ ಊರುಗಡೂರಿನ ತಪ್ರೇಜ್ ಖಾನ್(Taprej Khan) ಮತ್ತು ನಗ್ಮಾ (Nagma) ಎಂಬ ದಂಪತಿಗಳಿಗೆ
ಜನಿಸಿದ ದ್ವಿತೀಯ ಪುತ್ರ ಆಜಾನ್ ಖಾನ್ಗೆ ಚಿಕ್ಕಂದಿನಿಂದಲೂ ಹೃದಯ ಸಂಬಂಧಿ ಕಾಯಿಲೆ ಇರುತ್ತದೆ. ಶಿವಮೊಗ್ಗದಲ್ಲಿರುವಂತಹ ಸಹ್ಯಾದ್ರಿ ನಾರಾಯಣ ಹೃದಯಾಲಯದಲ್ಲಿ (Sahyadri Narayana Hrudayalaya) ಚಿಕಿತ್ಸೆ ಪಡೆಯುತ್ತಿರುತ್ತಾರೆ. ಹೀಗೆ ಮಗನಿಗೆ ಹೃದಯ ಕಾಯಿಲೆಯಿಂದಾಗಿ ಏನಾದರೂ ಹೆಚ್ಚು ಕಡಿಮೆಯಾದರೆ ಎಂಬ ಭಯದಿಂದ ಆತನ ಆಸೆ ಕನಸುಗಳನ್ನೆಲ್ಲ ಪೋಷಕರು ಈಡೇರಿಸುವ ಪ್ರಯತ್ನ ನಡೆಸಿದರು.
ಈ ವೇಳೆ ಮಗನಿಗೆ ಚಿಕ್ಕಂದಿನಿಂದಲೂ ಪೊಲೀಸ್ ಆಗಬೇಕೆಂಬ ಆಸೆ ಇರುತ್ತದೆ. ಹೀಗಾಗಿ ದೊಡ್ಡಪೇಟೆಯ ಪೊಲೀಸ್ ಠಾಣೆಯ ಪಿಐ ಆಗಿದ್ದ ಅಂಜನ್ ಕುಮಾರ್ (Anjan Kumar) ಅವರನ್ನು ಪೋಷಕರು ಕೇಳಿಕೊಳ್ಳುತ್ತಾರೆ. ಈ ಒಂದು ಕೋರಿಕೆಗೆ ಒಪ್ಪಿಕೊಂಡ ಪೊಲೀಸ್ ಅಧಿಕಾರಿಗಳು ಒಂದು ಗಂಟೆಗಳ ಕಾಲ ತಮ್ಮ ಅಧಿಕಾರವನ್ನು ಆಜನ್ ಖಾನ್ಗೆ (Azaan khan) ಬಿಟ್ಟುಕೊಟ್ಟಿದ್ದಾರೆ.
ಎಂಟು ವರ್ಷದ ಬಾಲಕ ಪೊಲೀಸ್ ವಸ್ತ್ರದಲ್ಲಿ ಪೊಲೀಸ್ ಸ್ಟೇಷನ್ ಗೆ ಧಾವಿಸಿದ ಸಮಯದಲ್ಲಿ ಬೊಕ್ಕೆ ನೀಡಿ ಆತನನ್ನು ಸ್ವಾಗತಿಸಿದ್ದಾರೆ. ಆನಂತರ ತಮ್ಮದೇ ಜೋಪ್ನದಲ್ಲಿ ರೌಂಡ್ಸ್ ಕೂಡ ಹಾಕಿಸಿ ಆತನನ್ನು ಖುಷಿ ಪಡಿಸಿದರು. ಹೀಗೆ ಒಂದು ಗಂಟೆಯ ಕಾಲ ಪೋಲಿಸ್ ಅಧಿಕಾರಿಯಾಗಿದ್ದಂತಹ ಹುಡುಗ ಪೊಲೀಸ್ ದಾಟಿಯಲ್ಲಿ ಮಾತನಾಡುತ್ತ ಕೆಲವೊಮ್ಮೆ ರೋಲ್ ಕಾಲ್ ಮಾಡುವುದು ಹೇಗೆ ಎಂಬುದನ್ನು ತೋರಿಸುತ್ತಾ ಖುಷಿಪಟ್ಟಿದ್ದಾನೆ. ಇದನ್ನೂ ಓದಿ ಯಶ್ ಅವರ ಫಾರ್ಮ್ ಹೌಸ್ ಹೇಗಿದೆ ಗೊತ್ತಾ? ಇಲ್ಲಿವೆ ನೋಡಿ ಸಕತ್ ಫೋಟೋಸ್