ಟೀಮ್ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಪ್ರಸ್ತುತವಾಗಿ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅವರ ಲುಕ್ ಅಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ ಅವರ ಆ ಡಿಫರೆಂಟ್ ಲುಕ್ ಅನ್ನು ಅವರ ಸಾಮಾಜಿಕ ಮಾದ್ಯಮಗಳಲ್ಲಿ ಹಂಚಿಕೊಂಡಿದ್ದಾರೆ ಗಬ್ಬರ್ ಖ್ಯಾತಿಯ ಶಿಖರ್ ಧವನ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಹೊಸ ನೋಟದ ಫೋಟೋವನ್ನು ಹಂಚಿಕೊಂಡಿದ್ದಾರೆ
ಹಾಗು ಈ ಕೇಶವಿನ್ಯಾಸ ನನಗೆ ತುಂಬಾ ಇಷ್ಟವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಶಿಖರ್ ಧವನ್ ಶ್ರೀಲಂಕಾ ಟಿ ಟ್ವೆಂಟಿ ಹಾಗು ಟೆಸ್ಟ್ ಸರಣಿಯನ್ನು ಮಿಸ್ ಮಾಡಿಕೊಂಡಿದ್ದಾರೆ ಹಾಗಾಗಿ ಇವರು 2022 ಐಪಿಎಲ್ ಗೆ ನೇರವಾಗಿ ಕಾಣಿಸಿಕೊಳ್ಳಲಿದ್ದಾರೆ ಈ ಬಾರಿ ಗಬ್ಬರ್ ಐಪಿಎಲ್ ಅಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿಯಲಿದ್ದಾರೆ ಪಂಜಾಬ್ ಕಿಂಗ್ಸ್ ಶಿಖರ್ ಧವನ್ ಅವರನ್ನು ಹರಾಜಿನಲ್ಲಿ ಬರೋಬ್ಬರಿ 8.25 ಕೋಟಿ ರೂ ಗೆ ಖರೀದಿಸಲಾಗಿದೆ
ಈ ಹರಾಜಿನಲ್ಲಿ ಹಲವು ಫ್ರಾಂಚೈಸ್ ಗಳು ಧವನ್ ಮೇಲೆ ಆಸಕ್ತಿ ತೋರಿಸಿದವು ಆದರೆ ಪಂಜಾಬ್ ಕಿಂಗ್ಸ್ ಶಿಖರ್ ಧವನ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು ಪಂಜಾಬ್ ಕಿಂಗ್ಸ್ ಇನ್ನು ತನ್ನ ತಂಡದ ನಾಯಕನನ್ನು ಹೆಸರಿಸಿಲ್ಲ ಹೀಗಾಗಿ ಧವನ್ ಅವರನ್ನು ನೇಮಿಸುವ ಮಾತುಗಳು ಕೂಡ ಕೇಳಿಬರುತ್ತಿವೆ
ಶಿಖರ್ ಧವನ್ ಪ್ರಸ್ತುತವಾಗಿ ಟೀಮ್ ಇಂಡಿಯಾ ಏಕದಿನ ತಂಡದಲ್ಲಿ ಖಾಯಂ ಆಟಗಾರರಾಗಿದ್ದಾರೆ ಆದರೆ ಟಿ ಟ್ವೆಂಟಿ ಹಾಗು ಟೆಸ್ಟ್ ತಂಡದಲ್ಲಿ ಧವನ್ ಗೆ ಸ್ಥಾನ ಸಿಗುತ್ತಿಲ್ಲ 2021 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಧವನ್ ಕಳೆದ ಎರಡು ಸೀಸನ್ ಅಲ್ಲಿ ಮಿಂಚುತ್ತಿರುವ ಧವನ್ 2020 ಹಾಗು 2021 ಎರಡು ಸೀಸನ್ ಅಲ್ಲಿ 500 ಗಿಂತ ಹೆಚ್ಚು ರನ್ ಗಳಿಸಿದ್ದಾರೆ
2020 ಋತುವಿನಲ್ಲಿ ಅವರು ಐಪಿಎಲ್ ಇತಿಹಾಸತಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಶತಕ ಗಳಿಸಿದ ಮೊದಲ ಆಟಗಾರರು ಹಾಗು ಅದೇ ಲೀಗ್ ಅಲ್ಲಿ ಅವರು 5000 ರನ್ ಪೂರೈಸಿದರು ಹಾಗು 2021 ಅಲ್ಲಿ 587 ರನ್ ಗಳಿಸಿ ಋತುವಿನಲ್ಲಿ 4 ನೇ ಟಾಪ್ ಸ್ಕೋರರ್ ಆಗಿ ಉಳಿದರು