ಉಡುಪಿ ಜಿಲ್ಲೆಯಲ್ಲಿ ಜೋಡಿ ಕೊ’ಲೆ’ಗಳನ್ನು ಮಾಡಿ ಪರಾರಿಯಾಗಿದ್ದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಇತನ ಮಾಡಿದ ಕೆಲಸಕ್ಕೆ ಕಾರಣ ಕೇಳಿದ್ರೆ ನೀವು ನಿಜಕ್ಕೂ ದಂಗಾಗ್ತೀರಿ. ಪ್ರೀತಿಸಿದವರನ್ನೇ ಇಲ್ಲ ಸಲ್ಲದ ಕಾರಣಕ್ಕೆ ಕೊ’ಲೆ ಮಾಡುವಷ್ಟು ಕೆಟ್ಟ ಮನಸ್ಥಿತಿ ಮನುಷ್ಯಲ್ಲಿ ಹೇಗೆ ಹುಟ್ಟಿತು ಗೊತ್ತಿಲ್ಲ ಆದ್ರೆ, ಸಣ್ಣ ಸಣ್ಣ ಕಾರಣಗಳಿಗೆ ಜೀವ ವನ್ನು ತೆಗೆಯುವ ಹಲವಾರು ಕೇಸ್ ಗಳನ್ನು ನಾವು ದಿನವೂ ನೋಡುತ್ತೇವೆ. ಆದರೆ ಇಂಥ ಕೆಲಸಗಳನ್ನು ಮಾಡಿ ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಮಾತ್ರ ಕೊ’ಲೆ’ಗಾರನ ಮನಸ್ಸಿನಲ್ಲಿ ಮೂಡುವುದಿಲ್ಲವೇನೋ!
ಈ ಘಟನೆ ನಡೆದಿದ್ದು ಉಡುಪಿಯಲ್ಲಿ. ರಾತ್ರೋ ರಾತ್ರಿ ಇಬ್ಬರನ್ನು ಮುಗಿಸಿ ಕಣ್ಣು ತಪ್ಪಿಸಿಕೊಂಡಿದ್ದ ವ್ಯಕ್ತಿ ಶಿವಮೊಗ್ಗ ಜಿಲ್ಲೆಯ ಬೊಮ್ಮನಕಟ್ಟೆ ನಿವಾಸಿ. ಈತನ ಹೆಸರು ಹರೀಶ್ ಅಲಿಯಾಸ್ ಗಣೇಶ್. ಇದೀಗ ಫೋಲಿಸರ ಭಂದಿಖಾನೆಯಲ್ಲಿರುವ ಈ ಆರೋಪಿಯ ವಯಸ್ಸು ಕೇವಲ 29 ವರ್ಷ! ಆರೋಪಿ ಹರೀಶ್ ಚೆಲುವಿ ಹಾಗೂ ಅವಳ ಹತ್ತು ವರ್ಷದ ಮಗಳನ್ನು ಮುಗಿಸಿ ಸ್ಥಳದಿಂದ ನಾಪತ್ತೆಯಾಗಿದ್ದ.
ಹರೀಶ್, ಚೆಲುವಿ ಎನ್ನುವ ಹೆಣ್ಮಗಳ ದೂರದ ಸಂಬಂಧಿ. ಈತನಿಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಚೆಲುವಿಗೆ ಹತ್ತು ವರ್ಷದ ಒಬ್ಬ ಹೆಣ್ಣು ಮಗಳಿದ್ದು ಚೆಲುವಿಯ ಗಂಡ ಆಕೆಯಿಂದ ದೂರವಾಗಿದ್ದ. ಹಾಗಾಗಿ ಚೆಲುವಿ ಹಾಗೂ ಮಗಳು ಇಬ್ಬರೇ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದರು. ಆರೋಪಿ ಹರೀಶ್ ಚೆಲುವಿಯೊಂದಿಗೆ ಪ್ರೀತಿಯ ಹೆಸರಿನಲ್ಲಿ ಸಂಬಂಧ ಬೆಳೆಸಿ ಅವಳಿಂದ ಎಲ್ಲವನ್ನೂ ಪಡೆದುಕೊಂಡು ಕೊನೆಗೆ ಮದುವೆಯಾಗುವಂತೆ ದಿನವೂ ಪೀಡಿಸುತ್ತಿದ್ದ. ಆದರೆ ಚೆಲುವಿ ಇದನ್ನು ನಿರಾಕರಿಸಿದ್ದಳು. ಇನ್ನು ಚೆಲುವಿ ಬೇರೆ ಗಂಡಸರೊಂದಿಗೆ ಪೋನ್ ನಲ್ಲಿ ಮಾತನಾಡುತ್ತಾಳೆ ಎನ್ನುವುದು ಹರೀಶ್ ನಿಗೆ ಸಿಟ್ಟುಬರಿಸುವ ಸಂಗತಿಯಾಗಿತ್ತು.
ಒಂದು ರಾತ್ರಿ ಚೆಲುವಿಯ ಮನೆಗೆ ಬಂದಿದ್ದಾನೆ. ಆಗಲೂ ಆಕೆ ಬೇರೆಯವರೊಂದಿಗೆ ಪೋನ್ ನಲ್ಲಿ ಇರುವುದನ್ನು ಗಮನಿಸಿ ಅದೇ ವಿಷಯಕ್ಕೆ ಜಗಳ ಎತ್ತಿದ್ದಾನೆ. ಮಾತಿಗೆ ಮಾತು ಬೆಳೆಸಿದೆ. ಕೊನೆಗೆ ಚೆಲುವಿಯನ್ನು ಬಟ್ಟೆಯಿಂದ ಕುತ್ತಿಗೆಗೆ ಬಿಗಿದು ಸಾ’ಯಿಸಿದ್ದಾನೆ. ಅದೇ ರೀತಿ ಮಲಗಿದ್ದ ಚೆಲುವಿಯ ಹತ್ತು ವರ್ಷದ ಮಗಳನ್ನು ತನ್ನ ವಿರುದ್ಧ ಸಾಕ್ಷಿ ಹೇಳಬಹುದು ಎನ್ನುವ ಕಾರಣಕ್ಕೆ ಅವಳನ್ನೂ ಅದೇ ಬಟ್ಟೆಯಿಂದ ಕುತ್ತಿಗೆ ಬಿಗಿದು ಮುಗಿಸಿದ್ದಾನೆ. ಜೊತೆಗೆ ಚೆಲುವಿಯ ಕುತ್ತಿಗೆಯಲ್ಲಿದ್ದ 50 ಸಾವಿರ ಬೆಲೆಬಾಳುವ ಸರ ಹಾಗೂ ಅವಳು ಬಳಸುತ್ತಿದ್ದ ಫೋನ್ ನ್ನು ಲಪಟಾಯಿಸಿದ್ದಾನೆ.
ಘಟನೆ ನಡೆದ ಕೇವಲ 28 ಗಂಟೆಗಳಲ್ಲಿ ಪರಾರಿಯಾಗಿದ್ದ ಆರೋಪಿಯನ್ನು ಪೋಲಿಸ್ ತಂದ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಪ್ರಕಕರಣಕ್ಕೆ ಸಂಬಂಧಪಟ್ಟ ಹಾಗೆ ತನಿಖಾಧಿಕಾರಿ, ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಶ್ರೀ ಅನಂತ ಪದ್ಮನಾಭ ಅವರು, ಪಿ.ಎಸ್. ಶ್ರೀ ಅನಿಲ್ ಬಿ ಮಾದರ, ಮಧು ಈ, ಪ್ರೊಬೆಷನರಿ ಪಿ.ಎಸ್.ಐ ಮಂಜುನಾಥ್ ಮರಬದ, ರವಿ ಬಿ ಕಾರಗಿ, ರಾಘವೇಂದ್ರ ನಿತಿನ್ ಮೊದಲಾದವರ ತಂಡವನ್ನು ರಚಿಸಿ ಈ ಘಟನೆಯ ಆರೋಪಿಯನ್ನು ಕೇವಲ 48 ಗಂಟೆಗಳ ಒಳಗೆ ಬಂಧಿಸಿ ಠಾಣೆಗೆ ತಂದಿದ್ದಾರೆ. ಘಟನೆಗೆ ಸಂಬಂಧಪಟಂತೆ ಪೋಲಿಸ್ ವಿಚಾರಣೆ ಮುಂದುವರೆದಿದೆ.