ದ್ವಿತೀಯ ಪಿಯುಸಿ ಮುಗಿಸಿ ಕತ್ತೆ ಹಾಲಿನ ವ್ಯಾಪಾರ ಶುರು ಮಾಡಿದ ಯುವಕ ಇಂದು ಒಂದು ಲೀಟರ್ ಕತ್ತೆಯ ಹಾಲಿಗೆ ಸಂಪಾದನೆ ಮಾಡುತ್ತಿರುವ ಹಣ ಎಷ್ಟು ಗೊತ್ತಾ

ಮನಸ್ಸಿದ್ದರೆ ಮಾರ್ಗ ಅನ್ನೋ ಮಾತಿದೆ. ಯಾವುದನ್ನು ನಮ್ಮಿಂದ ಮಾಡಲು ಸಾಧ್ಯವಿಲ್ಲ ಎಂದುಕೊಂಡರೆ ಆ ಕೆಲಸ ಮಾಡಲು ಸಾಧ್ಯವೇ ಇಲ್ಲ. ಆದರೆ ನಮ್ಮಿಂದ ಸಾಧ್ಯ ಎಂದು ತೀರ್ಮಾನಿಸಿದ್ದಾರೆ ಯಾವ ಕೆಲಸವನ್ನಾದರೂ ಮಾಡಬಹುದು ಹಾಗೂ ಅದರಿಂದ ಯಶಸ್ಸನ್ನು ಗಳಿಸಬಹುದು ಎಂಬುದಕ್ಕೆ ತಮಿಳುನಾಡಿನ ಯುವಕನ ಸಾಕ್ಷಿ. ತಾನು ಓದುವುದನ್ನು ಅರ್ಧದಲ್ಲಿಯೇ ನಿಲ್ಲಿಸಿ ತನ್ನದೇ ಅದ ವ್ಯವಹಾರವನ್ನು ಶುರು ಮಾಡಿ ಲಕ್ಷಗಟ್ಟಲೆ ಹಣವನ್ನು ಸಂಪಾದಿಸುತ್ತಿರುವ ಆ ವ್ಯಕ್ತಿ ತಮಿಳುನಾಡಿನ ತಿರುನಲ್ವೇಲಿಯ ಯು.ಬಾಬು. ಈ ವ್ಯಕ್ತಿಯ ಕಥೆಯನ್ನ ಕೇಳಿದ್ರೆ ಖಂಡಿತವಾಗಿ ನೀವೂ ಸ್ಪೂರ್ತಿ ಪಡೆಯುತ್ತೀರಿ.

ಹೌದು. ಯು. ಬಾಬು ಅವರು ಕೇವಲ ಪಿಯುಸಿ ಮುಗಿಸಿರುವ ವ್ಯಕ್ತಿ. ಇದರ ಬಳಿಕ ವಿದ್ಯಾಭ್ಯಾಸವನ್ನು ಬಿಟ್ಟು ಕತ್ತೆಗಳನ್ನ ಸಾಕಿ ಅದರ ಹಾಲನ್ನು ಮಾರಾಟ ಮಾಡುವ ವ್ಯವಹಾರಕ್ಕೆ ಕೈ ಹಾಕಿದರು. ಆದರೆ ಆಕಳು ಸಾಕಾಣಿಕೆ ಕುರಿ ಸಾಕಾಣಿಕೆ ಮಾಡಿದಷ್ಟೇ ಸುಲಭವಲ್ಲ. ಕತ್ತೆ ಹಾಲು ಬಹಳ ದುಬಾರಿ. ಕಾರಣ ಬೇರೆ ಬೇರೆ ತರಹದ ಕಾಸ್ಮೆಟಿಕ್ಸ್ ತಯಾರಿಸುವುದಕ್ಕೆ ಕತ್ತೆ ಹಾಲು ಬಹು ಉಪಯೋಗಿ. ಒಂದು ಕಾಸ್ಮೆಟಿಕ್ಸ್ ಕಂಪನಿಗೆ ತಿಂಗಳಿಗೆ ಸಾವಿರ ಲೀಟರ್ ಕತ್ತೆ ಹಾಲು ಬೇಕು ಎನ್ನುವ ಮಾಹಿತಿಯನ್ನು ಕಲೆ ಹಾಕುತ್ತಾನೆ. ಅಷ್ಟನ್ನು ಸಪ್ಲೈ ಮಾಡುವ ಪಣ ತೊಡುತ್ತಾನೆ. ಆದರೆ ಒಂದು ಕತ್ತೆ ದಿನಕ್ಕೆ ಕೇವಲ 350 ಮಿ.ಲಿ ಹಾಲನ್ನು ಕೊಡಬಹುದು. ಹಾಗೆ ತಮಿಳುನಾಡಿನಲ್ಲಿ ಸಮೀಕ್ಷೆ ಮಾಡಿದ ಪ್ರಕಾರ ಲಭ್ಯವಿದ್ದ ಕತ್ತೆಗಳ ಸಂಖ್ಯೆ ಹೆಚ್ಚು ಎಂದರೆ ಎರಡು ಸಾವಿರ ಕತ್ತೆಗಳು. ಅದೇನಾದರೂ ಆಗಲಿ ತಾನು ಕತ್ತೆ ಬ್ಯುಸನೆಸ್ ಶುರು ಮಾಡಲೇಬೇಕು ಎಂದು ಬಯಸುತ್ತಾರೆ. ಬಾಬು. ಆದರೆ ಎಲ್ಲರೂ ಈ ಉದ್ಯೋಗಕ್ಕೆ ಬೆಂಬಲ ನೀಡುವ ಬದಲು ನಗುತ್ತಾರೆ. ಅಪಹಾಸ್ಯ ಮಾಡುತ್ತಾರೆ.

ಛಲ ಬಿಡದ ಬಾಬು, ಕತ್ತೆ ಫಾರಂ ಶುರು ಮಾಡಲು ಸಿದ್ಧನಾಗುತ್ತಾನೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಸಂಗ್ರಹಿಸುತ್ತಾನೆ. ಕಡಲೂರು ಜಿಲ್ಲೆಯ ವೃದ್ಧಾಚಲಂ ನಗರದಲ್ಲಿ ನೂರು ಮಿ.ಲಿ. ಗೆ 50 ರೂಪಾಯಿ ದರದಲ್ಲಿ ಕತ್ತೆ ಹಾಲನ್ನು ಮಾರಾಟ ಮಾಡುತ್ತಿರುವುದು ಗೊತ್ತಾಗುತ್ತದೆ. ಕತ್ತೆ ಹಾಲಿನಲ್ಲಿ ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ, ವೃದ್ಧಾಪ್ಯವನ್ನು ತಡೆಯುವ ಔಷಧದ ಗುಣಗಳಿರುವುದು ಅರಿವಿಗೆ ಬರುತ್ತದೆ. ಈ ಮಾಹಿತಿಯನ್ನಿಟ್ಟುಕೊಂಡು ಕತ್ತೆ ಫಾರಂ ಶುರು ಮಾಡಿಯೇ ಬಿಡುತ್ತಾನೆ ಬಾಬು.

ತಿರುನಲ್ವೀಲಿಯಲ್ಲಿ 17 ಎಕರೆ ಜಮೀನನ್ನು ಲೀಸ್ ಗೆ ಪಡೆದು ಅಲ್ಲಿ “ಡಾಂಕಿ ಪ್ಯಾಲೇಸ್’ ನ್ನು ಆರಂಭಿಸುತ್ತಾನೆ. ಮೊದಲಿಗೆ ನೂರು ಕತ್ತೆಗಳನ್ನು ತಂದು ಸಾಕಲು ಶುರು ಮಾಡುತ್ತಾನೆ. ಇದಕ್ಕಾಗಿ ಸ್ಥಳಿಯ ಕೆಲಸಗಾರರನ್ನು ನೇಮಿಸಿಕೊಳ್ಳುತ್ತಾನೆ. ಇಡೀಗ ಬಾಬು ಫಾರಂ ನಲ್ಲಿ ಗುಜರಾತ್ ಮೂಲದ ಹಲಾರಿ ಹಾಗೂ ಸ್ಥಳೀಯ ತಳಿಗಳ ಕತ್ತೆಗಳಿವೆ. ಹಾಲು ಕರೆಯಲು, ಕತ್ತೆಗಳ ಕೆಲಸ ಮಾಡಲು ಎಲ್ಲದಕ್ಕೂ ಆಳು ಕಾಳುಗಳನ್ನಿಟ್ಟುಕೊಂಡಿರುವ ಬಾಬು ಕತ್ತೆ ಹಾಲಿಗೆ ಪ್ರತಿಲೀಟರ್ ಗೆ ಬರೋಬ್ಬರು 7 ಸಾವಿರ ರೂಪಾಯಿಗಳನ್ನು ಪಡೆಯುತ್ತಿದ್ದಾರೆ!

ಸ್ಥಳೀಯ ಕತ್ತೆಗೆ ಅಂದ್ರೆ ದೇಶಿಯ ತಳಿಗೆ ಒಂದು ಕತ್ತೆಗೆ 40 ಸಾವಿರ ರೂಪಾಯಿಗಳಿರಬಹುದು. ಆದರೆ ಈ ಕತ್ತೆಗಳು ದಿನಕ್ಕೆ ಒಂದು ಲೀಟರ್ ಹಾಲು ಕೊಡುವುದಿಲ್ಲ. ಅದೇ ಒಂದು ಲೀಟರ್ ಹಾಲು ಕೊಡುವ ಹಲಾರಿ ತಳಿಗಳ ಕತ್ತೆಗೆ ಒಂದಕ್ಕೆ ಬರೋಬ್ಬರಿ ಒಂದು ಲಕ್ಷ ರೂಪಾಯಿಗಳು. ಹಾಗಾಗಿ ಈ ಕತ್ತೆಗಳೂ ಕೂಡ ಇದೀಗ ಬಾಬು ಪ್ಯಾಲೇಸ್ ಸೇರಿವೆ. ಇವುಗಳಿಗೆ ಮೇವನ್ನೂ ಕೂಡ ತಾವೇ ಬೆಳೆಸುತ್ತಿದ್ದಾರೆ ಬಾಬು. ನಮ್ಮಲ್ಲಿ ಯಾರಾದರೂ ಓದಲು ಹಿಂದೆ ಇದ್ದರೆ ’ದನ ಮೇಯಿಸೋಕೆ ಹೋಗು’, ’ಕತ್ತೆ ಮೇಯಿಸೋಕೆ ಹೋಗು’ ಅಂತ ಬೈತಾರೆ. ಆದ್ರೆ ಇಲ್ಲಿ ನೋಡಿ ಕತ್ತೆ ಉದ್ಯೋಗ ಮಾಡಿಕೊಂಡೇ ಲಕ್ಷಾಂತರ ಹಣವನ್ನು ಗಳಿಸುತ್ತಿದ್ದಾರೆ ಬಾಬು. ಇನ್ನು ಈ ಬೈಗುಳಗಳು ಬದಲಾಗಬಹುದು ಏನಂತೀರಿ!

Leave a Comment