ಕಂಠ ಪೂರ್ತಿ ಕುಡಿದು ಶಾಲೆಗೆ ಟೈಟಾಗಿ ಬಂದ ಶಿಕ್ಷಕಿ ಮಾಡಿದ್ದು ಎಂತಾ ಕೆಲಸ ನೋಡಿ

ಗುರುಬ್ರಹ್ಮ ಗುರುವಿಷ್ಣು ಗುರುರ್ದೇವೋ ಮಹೇಶ್ವರಾ ಎಂಬ ಶ್ಲೋಕವಿದೆ ಈ ಶ್ಲೋಕದ ಅರ್ಥ ಗುರು ದೇವರ ಸಮಾನ ಗುರುವಿನನ್ನು ನಾವು ದೇವರ ಜಾಗದಲ್ಲಿಟ್ಟು ನೋಡುತ್ತೇವೆ. ಶಾಲೆಯೆಂಬುದು ದೇವಸ್ಥಾನವಿದ್ದಂತೆ ಮತ್ತು ಶಿಕ್ಷಕರು ದೇವರಿದ್ದಂತೆ. ಈಗ ನಾವು ಈ ಶ್ಲೋಕ ಘಟನೆ ಹೇಳುವುದಕ್ಕೂ ಮುಂಚೆ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಶಾಲೆಗೆ ಕುಡಿದ ಮತ್ತಿನಲ್ಲಿ ಶಾಲೆಗೆ ಶಿಕ್ಷಕಿ ಯೊಬ್ಬಳು ತರಗತಿ ಹೊಂದಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಛತ್ತೀಸ್‌ಗಢದ ಟಿಕಾಯತ್‌ಗಂಜ್‌ನಲ್ಲಿ ಈ ಘಟನೆ ನಡೆದಿದೆ.

ಛತ್ತೀಸ್‌ಗಢದ ಟಿಕಾಯತ್‌ಗಂಜ್‌ ನ ಪ್ರಾಥಮಿಕ ಶಾಲೆಯ ಟೀಚರ್ ಒಬ್ಬರು ಕಂಠಪೂರ್ತಿ ಕುಡಿದು ಕ್ಲಾಸ್ರೂಮಿಗೆ ಬಂದು ಮಕ್ಕಳ ಮುಂದೆ ಪಾಠ ಮಾಡಲಾಗದೆ ಪ್ರಜ್ಞೆ ತಪ್ಪಿ ಕುಳಿತಿರುವ ಫೋಟೋ ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಕುಡಿದ ಅಮಲಿನಲ್ಲಿ ಈ ಟೀಚರ್ ಅಮ್ಮನಿಗೆ ಪ್ರಜ್ಞೆಯೇ ಇಲ್ಲ. ಇವರಿಗೆ ಮಕ್ಕಳಿಗೆ ಪಾಠ ಹೇಳುವಷ್ಟು ಶಕ್ತಿ ಕೂಡ ಇಲ್ಲ. ಏನೂ ಅರಿವಿಲ್ಲದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಟೀಚರ್ ಕುರ್ಚಿ ಮೇಲೆ ಮಲಗಿರುವ ದೃಶ್ಯ ನಿಮಗೆಲ್ಲ ಕಾಣಸಿಗಬಹುದು.

ಈ ಘಟನೆ ಶಿಕ್ಷಣ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಬೆಳಿಗ್ಗೆ ಹನ್ನೊಂದು ಗಂಟೆಗೆ ಪರಿಶೀಲನೆಗೆಂದು ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ಕೊಟ್ಟಿದ್ದರು. ಶಾಲೆಗೆ ಭೇಟಿ ಕೊಟ್ಟಾಗ ಈ ಘಟನೆ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ . ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಶಿಕ್ಷಕರನ್ನು ನೋಡಿ ಅಧಿಕಾರಿಗಳು ಶಿಕ್ಷಕರ ಆರೋಗ್ಯದಲ್ಲಿ ಏರುಪೇರಾಗಿದೆ ಅಂದುಕೊಂಡರು ಆದರೆ ನಂತರ ತನಿಖೆ ಮಾಡಿದ ಮೇಲೆ ಗೊತ್ತಾಗುತ್ತೆ ಶಿಕ್ಷ ಕಿ ಕಂಠಪೂರ್ತಿ ಕುಡಿದು ಅಮಲಿನಲ್ಲಿ ತೇಲಾಡುತ್ತಿದ್ದಳು .. ಇದು ತುಂಬಾ ದಿನಗಳಿಂದ ನಡೆಯುತ್ತಿರುವ ಘಟನೆಯೆಂದು ವಿದ್ಯಾರ್ಥಿಗಳ ಮೂಲಕ ತಿಳಿದಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಶಿಕ್ಷಣಾಧಿಕಾರಿಗಳು ಶಿಕ್ಷಕಿಯನ್ನು ಎಬ್ಬಿಸಲು ಪ್ರಯತ್ನ ಪಟ್ಟರೂ ಎಷ್ಟೇ ಪ್ರಯತ್ನಪಟ್ಟರೂ ಕೂಡ ಕುಡಿದ ಅಮಲಿನಲ್ಲಿದ್ದ ಶಿಕ್ಷಕಿಯನ್ನು ಎಬ್ಬಿಸಲು ಸಾಧ್ಯವಾಗಿಲ್ಲ. ನೆಲದ ಮೇಲೆ ಬಿದ್ದಿದ್ದ ಶಿಕ್ಷಕಿಯನ್ನು ಎಬ್ಬಿಸಲು ಎಷ್ಟೇ ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಟಿಕಾಯತ್‌ಗಂಜ್‌ನ ಈ ಪ್ರಾಥಮಿಕ ಶಾಲೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಿಂದ ಸುಮಾರು 430 ಕಿಲೋ ಮೀಟರ್ ದೂರದಲ್ಲಿದೆ. ಈ ಪ್ರಾಥಮಿಕ ಶಾಲೆಯಲ್ಲಿ 54 ಮಕ್ಕಳು ಓದುತ್ತಿದ್ದಾರೆ..

ಶಿಕ್ಷಕಿಯ ಅವಸ್ಥೆಯನ್ನು ನೋಡಿ ತಕ್ಷಣವೇ ಶಿಕ್ಷಣಾಧಿಕಾರಿಗಳು ಎಎಸ್ಪಿಗೆ ಕರೆ ಮಾಡಿ ವಿಷಯ ತಿಳಿಸಿದರು. ಹಾಗೆ ಶಿಕ್ಷಕಿಯ ವೈದ್ಯಕೀಯ ಪರೀಕ್ಷೆಯನ್ನು ಮಾಡುವಂತೆ ಕೋರಿಕೆ ಸಲ್ಲಿಸಿದರು. ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ 2ಮಹಿಳಾ ಪೇದೆಗಳು ಬಂದು ಶಿಕ್ಷಕಿಯನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲು ಮಾಡಿದರು ನಂತರ ವೈದ್ಯಕೀಯ ತಪಾಸಣೆ ಕೂಡ ಮಾಡಲಾಯಿತು. ವೈದ್ಯಕೀಯ ಪರೀಕ್ಷೆಯಲ್ಲಿ ಶಿಕ್ಷಕಿ ಕುಡಿದಿರುವ ವಿಚಾರ ಖಾತ್ರಿಯಾಗಿದೆ.

ಪೊಲೀಸರು ಮತ್ತು ಶಿಕ್ಷಣಾಧಿಕಾರಿಗಳು ಸೂಕ್ಷ್ಮವಾಗಿ ತನಿಖೆ ನಡೆಸಿದಾಗ ಈ ಶಿಕ್ಷಕಿ ಹಲವಾರು ದಿನಗಳಿಂದ ಕುಡಿದು ಕ್ಲಾಸ್ರೂಮಿಗೆ ಬಂದು ನೆಲದ ಮೇಲೆ ಮಲಗುತ್ತಿದ್ದಳು ಎಂಬ ಶಾಕಿಂಗ್ ವಿಚಾರ ಹೊರಬಂತು. ನಂತರ ಶಿಕ್ಷಣಾಧಿಕಾರಿಗಳು ಶಿಕ್ಷಕಿಗೆ ಪ್ರಜ್ಞೆ ಬಂದ ನಂತರ ಶಿಕ್ಷಕಿಯ ಬಳಿ ಇನ್ಮೇಲೆ ಕುಡಿದು ಕ್ಲಾಸ್ ಕಂಡುಬರದಂತೆ ಎಚ್ಚರಿಕೆ ನೀಡಿದ್ದಾರೆ. ಇನ್ನೊಂದು ಆಶ್ಚರ್ಯಕರ ಸಂಗತಿಯೇನೆಂದರೆ ಛತ್ತೀಸ್ ಘಡ್ ದಲ್ಲಿ ವಿದು ಕ್ಲಾಸ್ ರೂಂಗೆ ಬರುವ ಶಿಕ್ಷಕರ ಘಟನೆ ಇದೇ ಮೊದಲಲ್ಲ. ಮುಂಚೆ ಕೂಡ ಇಂತಹ ಘಟನೆಗಳು ನಡೆದಿತ್ತು. ಮತ್ತು ಈಗಲೂ ಕೂಡ ಇಂಥ ಘಟನೆಗಳು ನಡೆಯುತ್ತಲೇ ಇವೆ ಇದಕ್ಕೆಲ್ಲ ಶಿಕ್ಷಣಾಧಿಕಾರಿಗಳ ನಿರ್ಲಕ್ಷವೇ ಕಾರಣಾನಾ ಅಂತ ಪ್ರಶ್ನೆ ಮೂಡಿದೆ.

Leave a Comment