ಪ್ರತಿದಿನ 10 ಸಾವಿರ ಜನಕ್ಕೆ ಅನ್ನದಾನ ಮಾಡುತ್ತಿರುವ ಕ್ರಿಕೇಟಿಗ.!

ದೇಶದಲ್ಲಿ ಕೋರೋಣ ಮಹಾಮಾರಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಆದ್ರೆ ಇದರ ಹಿನ್ನಲೆಯಲ್ಲಿ ಭಾರತ ಲಾಕ್ ಡೌನ್ ಆಗಿರುವುದರಿಂದ ಬಡವರಿಗೆ ಮಧ್ಯಮ ವರ್ಗದ ಜನರಿಗೆ ಹೆಚ್ಚು ತೊಂದರೆ ಆಗುತ್ತಿದೆ ಕೆಲವರಿಗೆ ಹೊಟ್ಟೆಗೆ ಊಟವಿಲ್ಲದೆ ಪರದಾಡುತ್ತಿದ್ದಾರೆ ಇನ್ನು ಕೆಲವರಿಗೆ ದೈನಂದಿನ ಸಾಮಗ್ರಿಗಳನ್ನು ಕೊಳ್ಳಲು ಸಹ ಆಗುತ್ತಿಲ್ಲ. ಈಗಿರುವಾಗ ಕೆಲವರು ಪ್ರದಾನ ಮಂತ್ರಿ ನಿಧಿಗೆ ದೇಣಿಗೆ ಕೊಡುತ್ತಿದ್ದಾರೆ ಹಾಗೂ ಇನ್ನು ಕೆಲವರು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಲು ಮುಂದಾಗಿದ್ದಾರೆ, ಹಾಗೆಯೆ ಭಾರತೀಯ ಕ್ರಿಕೆಟ್ ತಂಡದ ಅಂದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ನಿತ್ಯ ೧೦ ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನದಾನ ಮಾಡಲು ಮುಂದಾಗಿದ್ದಾರೆ.

ಹೌದು ಭಾರತೀಯ ಕ್ರಿಕೆಟ್ ತಂಡದ ಅಂದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಇಸ್ಕಾನ್‍ನ ಕೋಲ್ಕತ್ತಾ ಕೇಂದ್ರಕ್ಕೆ ಸಹಾಯ ಹಸ್ತ ಚಾಚಿದ್ದು, ಪ್ರತಿದಿನ ಕೊರೋನಾ ವೈರಸ್ಬ ಸೋಂಕಿನಿಂದ ಬಳಲುತ್ತಿರುವ 20,000 ಜನರಿಗೆ ಆಹಾರವನ್ನು ನೀಡುವುದಾಗಿ ಹೇಳಿದ್ದಾರೆ.

ಹಿಂದೆ ಇದೆ ಇಸ್ಕಾನ್‍ನ ಕೋಲ್ಕತ್ತಾ ಕೇಂದ್ರ 10 ಸಾವಿರ ಜನಕ್ಕೆ ಅನ್ನದಾನ ಮಾಡುತ್ತಿತ್ತು ಆದ್ರೆ ಇನ್ನು ಮುಂದೆ 20 ಸಾವಿರ ಜನರಿಗೆ ಅನ್ನದಾನ ಮಾಬೇಕು ಅನ್ನೋದನ್ನ ನಿರ್ಧರಿಸಲಾಗಿದೆ. ಇನ್ನು ಗಂಗೂಲಿಯವರು ಸ್ವತಃ ತಾವೇ ಮಾಸ್ಕ್ ಹಾಗೂ ಗ್ಲೌಸ್‍ಗಳನ್ನು ಧರಿಸಿ ಇಸ್ಕಾನ್ ಕೇಂದ್ರಕ್ಕೆ ಭೇಟಿ ನೀಡಿ ಬೆಂಬಲ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಹಿಂದೆ ಭಾರತೀಯ ಈ ಕ್ರಿಕೆಟಿಕ ದಾದಾ ಅಂತಲೇ ಅನಿಸಿಕೊಂಡಿರುವ ಇವರು ರಾಮಕೃಷ್ಣ ಮಿಷನ್‍ನ ಪ್ರಧಾನ ಕಚೇರಿಯಾದ ಬೇಲೂರು ಮಠದಲ್ಲಿ 20,000 ಕೆಜಿಗಳಷ್ಟು ಅಕ್ಕಿಯನ್ನು ದಾನ ಮಾಡಿದ್ದರು. ಇವರ ಈ ಕಾರ್ಯ ವೈಖರಿಗೆ ನಮ್ಮ ಕಡೆಯಿಂದ ಬಿಗ್ ಸಲ್ಯೂಟ್.

Leave a Comment