ಪರೀಕ್ಷೆಯಲ್ಲಿ ಫೇಲ್ ಆದೆ ಅಂತಲೋ, ನಿರೀಕ್ಷೆಯ ಮಟ್ಟಕ್ಕೆ ಮಾರ್ಕ್ಸ್ ಬರಲಿಲ್ಲ ಅಂತಲೋ ವಿದ್ಯಾರ್ಥಿಗಳು ಜೀವ ಕಳೆದುಕೊಳ್ಳುವ ಸ್ಥಿತಿ ಮತ್ತೆ ಮತ್ತೆ ನಿರ್ಮಾಣವಾಗುತ್ತಲೆ ಇರುತ್ತದೆ. ಈ ಬಗ್ಗೆ ಎಷ್ಟೇ ಬುದ್ಧಿವಾದ ಹೇಳಿದರೂ, ಪರೀಕ್ಷೆಯಲ್ಲಿ ಎಷ್ಟೇ ಬದಲಾವಣೆಗಳನ್ನು ತಂದರೂ ಮನಸ್ಸು ವೀಕ್ ಇರುವ ವಿದ್ಯಾರ್ಥಿಗಳು ತಪ್ಪು ನಿರ್ಧಾರ ತೆಗೆದುಕೊಳ್ಳುವುದನ್ನು ಮಾತ್ರ ಬಿಡುವುದಿಲ್ಲ. ಇನ್ನು ಬೋರ್ಡ್ ಎಕ್ಸಾಂ ಗಳಲ್ಲಿ ಫೇಲ್ ಆದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಹುಡುಗಿ ಪ್ರಥಮ ಪಿಯುಸಿಯಲ್ಲಿಯೇ ತಾನು ಫೇಲ್ ಆಗಿಬಿಡಬಹುದು ಎನ್ನುವ ಭಯಕ್ಕೆ ಪರೀಕ್ಷೆಯನ್ನೂ ಎದುರಿಸಿದೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಹೌದು, ಈ ಘಟನೆಯನ್ನು ನೋಡಿದ್ರೆ ವಿದ್ಯಾರ್ಥಿಗಳು ಓದುವುದು, ಅಧ್ಯಯನ ಮಾಡುವುದು ಯಾಕೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಕೇರಳದ ಕುನ್ನಿಕೊಡ್ ನಲ್ಲಿ ನಡೆದ ಘಟನೆ ಇದು. 17 ವರ್ಷ ವಯಸ್ಸಿನ ಸಾನಿಗಾ, ಇಂಥ ದುಡುಕಿನ ನಿರ್ಧಾರ ತೆಗೆದುಕೊಂಡು ಬಿಟ್ಟಿದ್ದಾಳೆ. ಈಕೆ ಥಲವೂರಿನ ಸನಲ್ ಕುಮಾರ್ ಹಾಗೂ ಅನಿತಾ ಅವರ ಪುತ್ರಿ. ಅನಿತಾ ಮನ್ನಾರ್ ನಲ್ಲಿ ಕೆಲ್ಸ ಮಾಡುತ್ತಿದ್ದು ಆಗಾಗ ಮನೆಗೆ ಬಂದು ಹೋಗುತ್ತಾರೆ. ಇನ್ನು ಕಾರ್ಪೆಂಟರ್ ಕೆಲ್ಸ ಮಾಡುತ್ತಿರುವ ಸನಲ್ ಅವರು ರಾತ್ರಿ ಮನೆಗೆ ವಾಪಸಾಗುತ್ತಾರೆ. ಎಂದಿನಂತೆ ಮನೆಗೆ ಸೇರಿದ ಸಾನಿಗಾ ಮಾತ್ರ ಅಪ್ಪ ಅಮ್ಮನಿಗೆ ಸಿಕ್ಕಿದ್ದು ಹೆಣವಾಗಿ!
ಎಸ್ ಎಸ್ ಎಲ್ ಸಿಯಲ್ಲಿ ಎಲ್ಲಾ ವಿಷಯಗಳಲ್ಲಿಯು ಎ+ ಗ್ರೇಡ್ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಳು ಸಾನಿಗಾ. ಆದರೆ ಪಿಯುಸಿಯ ಪರೀಕ್ಷೆಯನ್ನು ಎದುರಿಸುವ ಧೈರ್ಯ ಮಾತ್ರ ಅವಳಲ್ಲಿ ಇರಲಿಲ್ಲ. ಇದೇ ಬುಧವಾರ ರಾತ್ರಿ ತಾಯಿ ಅನಿತಾ ಮಗಳಿಗೆ ಕಾಲ್ ಮಾಡಿದ್ದಾರೆ ಆದರೆ ಆಕೆ ಕಾಲ್ ರಿಸೀವ್ ಮಾಡಿಲ್ಲ. ನಂತರ ಅನಿತಾ ಪತಿಗೆ ಫೋನಾಯಿಸಿದ್ದಾರೆ. ಸನಲ್ ಕೆಲಸದಲ್ಲಿ ಇದ್ದಿದ್ದರಿಂದ ಪಕ್ಕದ ಮನೆಯವರ ಬಳಿ ಮನೆಗೆ ಹೋಗಿ ನೋಡುವಂತೆ ಹೇಳಿದ್ದಾರೆ.
ಪಕ್ಕದ ಮನೆಯವರು ಮನೆಗೆ ಹೋಗಿ ನೋಡಿದರೆ ಮನೆ ಬಾಗಿಲು ಹಾಕಿತ್ತು ನಂತರ ಬಾಗಿಲು ತೆಗೆದು ಒಳಗೆ ಹೋಗಿ ನೋಡಿದರೆ ಸಾನಿಗಾ ತಾನು ಮಲಗುವ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಜೊತೆಗೆ ಒಂದು ಡೆತ್ ನೋಟನ್ನು ಬರೆದುಬಿಟ್ಟಿದ್ದಾರೆ ಸಾನಿಗಾ. ತಾನು ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಬಹುದು ಎನ್ನುವ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಇದರಲ್ಲಿ ಬರೆದಿಟ್ಟಿದ್ದಾರೆ.
ಕೇರಳದಲ್ಲಿ ಜೂನ್ 13 ರಿಂದ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭವಾಗಲಿದೆ ಪಿಯುಸಿ ವಿದ್ಯಾರ್ಥಿನಿ ಸಾನಿಗಾ ಪರೀಕ್ಷೆಗಳಿಗೆ ಸಿದ್ಧತೆ ಎನ್ನು ಮಾಡಿಕೊಳ್ಳುವ ಬದಲು ಮೊದಲು ಅನುತ್ತೀರ್ಣರಾಗಬಹುದು ಎಂದು ಭಯದಿಂದ ತಪ್ಪು ನಿರ್ಧಾರವನ್ನು ತೆಗೆದುಕೊಂಡು ಬಿಟ್ಟಿದ್ದಾರೆ. ಆಕೆಯ ಮನೆಯವರು ನೋವು ಮಾತ್ರ ಯಾರು ಬರಿಸಲಾಗದು!