ಟಾಯ್ಲೆಟ್ ರೂಮ್ ಕೂಡ ಇಲ್ಲದ ಮನೆಯಲ್ಲಿ ಹುಟ್ಟಿದ ಪುಟಿನ್ ಇದೀಗ ವಿಶ್ವದ ಅತ್ಯಂತ ಪವರ್ ಫುಲ್ ಹಾಗೂ ಶ್ರೀಮಂತ ವ್ಯಕ್ತಿ. ಈತನ ಆಸ್ತಿ ಕೇಳಿದ್ರೆ ಬೆಚ್ಚಿ ಬೀಳುತ್ತೀರಿ

ರಷ್ಯಾ ಅಧ್ಯಕ್ಷ ಪುಟಿನ್ ಹೆಸರನ್ನು ನೀವೆಲ್ಲ ಕೇಳಿರುತ್ತೀರಿ. ಸುಮಾರು 20 ವರ್ಷ ಕ್ಕಿಂತಲೂ ಹೆಚ್ಚು ಕಾಲ ರಷ್ಯಾದ ಸರ್ವೋಚ್ಚ ನಾಯಕನಾಗಿ ಪುಟಿನ್ ಆಳ್ವಿಕೆ ನಡೆಸುತ್ತಾ ಇದ್ದಾನೆ. ಗೆಳೆಯರೆ ಪುಟಿನ್ ಬಗ್ಗೆ ನಿಮಗೆ ಗೊತ್ತಿಲ್ಲದ ಸ್ವಾರಸ್ಯಕರ ಸಂಗತಿಗಳ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ. ಪುಟಿನ್ ಹುಟ್ಟುತ್ತಲೇ ರಾಜ ಮನೆತನದಲ್ಲಿ ಅಥವ ಶ್ರೀಮಂತ ಕುಟುಂಬದಲ್ಲಿ ಹುಟ್ಟಿಲ್ಲ. ಸಾಧಾರಣವಾಗಿ ಕೆಳ ಮಧ್ಯಮ ಕುಟುಂಬದಲ್ಲಿ ಪುಟಿನ್ ಜನಿಸಿದ್ದ. ಪುಟಿನ್ ಅಮ್ಮ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಮತ್ತು ಅಪ್ಪ ನೀವು ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು.

ಪುಟಿನ್ ಹುಟ್ಟಿದಾಗ ಅವರ ಮನೆ ತುಂಬಾ ಚಿಕ್ಕದಾಗಿತ್ತು ಆ ಮನೆಯಲ್ಲಿ ಅಡುಗೆ ಮನೆ ಮತ್ತು ಟಾಯ್ಲೆಟ್ ರೂಮ್ ಗಳು ಕೂಡ ಇರಲಿಲ್ಲ. ಬಡತನದಲ್ಲಿ ಹುಟ್ಟಿ ಬೆಳೆದ ಪುಟಿನ್ ದೊಡ್ಡವನಾದ ಮೇಲೆ USSR ನ ಸೀಕ್ರೆಟ್ ಏಜೆಂಟ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅಮೆರಿಕ ಮತ್ತು ರಷ್ಯಾ ನಡುವೆ ನಡೆದ ಕೋಲ್ಡ್ ವಾರ್ ನಲ್ಲಿ ಪುಟಿನ್ ಬಹುಮುಖ್ಯ ಪಾತ್ರವನ್ನು ವಹಿಸಿದ್ದರು. ಪುಟಿನ್ ರಷ್ಯಾದ ಅಧ್ಯಕ್ಷ ಆಗುವುದಕ್ಕಿಂತಲೂ ಮುಂಚೆ ರಷ್ಯಾದ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ಬೊರಿಸ್ ಯೆಲ್ಟ್ಸಿನ್ ಎನ್ನುವ ವ್ಯಕ್ತಿ 1991 ರ ಸಮಯದಲ್ಲಿ ರಷ್ಯಾದ ಅಧ್ಯಕ್ಷನಾಗಿದ್ದ. ಈತ ರಷ್ಯಾದ ಅತಿ ಕೆಟ್ಟ ಅಧ್ಯಕ್ಷ ಎಂದು ಅನ್ನಿಸಿಕೊಂಡಿದ್ದ.

ಇಂತಹ ಸಮಯದಲ್ಲಿ ರಷ್ಯಾದ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ ಹೊಂದಲು ಮತ್ತು ದೇಶ ಉದ್ಧಾರವಾಗಲು ಪುಟಿನ್ ನಂತಹ ಡೈನಮಿಕ್ ಹೀರೋ ಬೇಕಾಗಿತ್ತು. 1999 ರಲ್ಲಿ ಪುಟಿನ್ ರಷ್ಯಾದ ಪ್ರೈಮ್ ಮಿನಿಸ್ಟರ್ ಆಗಿ ನೇಮಕಗೊಳ್ಳುತ್ತಾರೆ. ಪುಟಿನ್ ಅಧಿಕಾರಕ್ಕೆ ಬಂದ ತಕ್ಷಣವೇ ತನ್ನ ಎಲ್ಲಾ ಶತ್ರುಗಳನ್ನು ಉಡೀಸ್ ಮಾಡ್ತಾರೆ. ಪುಟಿನ್ ಒಂದೇ ವರ್ಷದೊಳಗೆ ರಷ್ಯಾದ ಪ್ರೆಸಿಡೆಂಟ್ ಸತತ 8 ವರ್ಷಗಳ ಕಾಲ ರಷ್ಯಾದ ಅಧ್ಯಕ್ಷ ಪುಟಿನ್ ಮಿಂಚುತ್ತಾರೆ. ಪುಟಿನ್ ಅಧ್ಯಕ್ಷ ರಾಗಿದ್ದ ಕಾಲದಲ್ಲಿ ರಷ್ಯಾದ ಜನರ ಆದಾಯ ಇಪ್ಪತ್ತರಷ್ಟು ಹೆಚ್ಚಾಗುತ್ತದೆ. ದಿನದಿಂದ ದಿನಕ್ಕೆ GDP ರೇಟ್ ಕೂಡ ಹೆಚ್ಚಾಗುತ್ತದೆ.

ಇಂಧನ ಮತ್ತು ತೈಲಗಳ ಆದ್ಯತೆ ಮತ್ತು ಬೆಲೆಗಳು ಹೆಚ್ಚಾಗುತ್ತಿದ್ದಂತೆ ರಷ್ಯಾದ ಆರ್ಥಿಕತೆ ದ್ವಿಗುಣವಾಯಿತು. 8 ವರ್ಷಗಳಲ್ಲಿ ಪುಟಿನ್ ರಷ್ಯಾದ ಗ್ರೇಟೆಸ್ಟ್ ಲೀಡರ್ ಆಗಿ ಹೊರಹೊಮ್ಮಿದ್ದ. 2008 ರ ಸಮಯದಲ್ಲಿ ರಷ್ಯಾದ ಸಂಪೂರ್ಣ ಅಧಿಕಾರ ಪುಟಿನ್ ಕೈಯಲ್ಲಿತ್ತು. ಪುಟಿನ್ ವಿರುದ್ಧ ಮಾತನಾಡುವ ಧೈರ್ಯ ಯಾರಿಗೆ ಕೂಡ ಇರಲಿಲ್ಲ. ಪುಟಿನ್ ವಿರುದ್ಧ ಮಾತನಾಡಿದ ವ್ಯಕ್ತಿ ಎಷ್ಟೇ ಪವರಫುಲ್ ಆದರೂ ಸಹ ಪುಟಿನ್ ಆ ವ್ಯಕ್ತಿಯನ್ನು ಸುಮ್ಮನೆ ಬಿಡುವುದಿಲ್ಲ. 2008 ರ ನಂತರ 4 ವರ್ಷಗಳು ಕಳೆದ ಮೇಲೆ 2012 ರಲ್ಲಿ ಪುಟಿನ್ ಮತ್ತೆ ರಷ್ಯಾದ ಪ್ರೆಸಿಡೆಂಟ್ ಆಗ್ತಾನೆ.

ಪುಟಿನ್ ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ಪವರ್ ಫುಲ್ ಆಗಿದ್ದಾನೆ ಎಂದರೆ ಈ ಮನುಷ್ಯನ ಬಳಿ 6000 ನ್ಯೂಕ್ಲಿಯರ್ ವೆ ಪನ್ ಗಳು ರೆಡಿ ಇವೆ.ಅಂದರೆ ಇಡೀ ಪ್ರಪಂಚವನ್ನೇ ಹತ್ತು ನಿಮಿಷದಲ್ಲಿ ನಾಶ ಮಾಡುವಷ್ಟು ಶಕ್ತಿ ಈ ವ್ಯಕ್ತಿಗಿದೆ. ಮುಗ್ಧ ರಾಷ್ಟ್ರವನ್ನು ಬಲಿಷ್ಠ ರಾಷ್ಟ್ರವಾಗಿ ಮಾಡಿದ ಎಲ್ಲಾ ಕ್ರೆಡಿಟ್ ಪುಟಿನ್ ಗೆ ಸಲ್ಲುತ್ತದೆ. ಇನ್ನೊಂದು ಆಶ್ಚರ್ಯದ ಸಂಗತಿಯೆಂದರೆ ಪುಟಿನ್ ಬಳಿಯಿರುವ ಆಸ್ತಿ ಅಂತಸ್ತುಗಳು. ಬಲ್ಲ ಮೂಲಗಳ ಪ್ರಕಾರ ಪುಟಿನ್ ಅವರು ಇಡೀ ಪ್ರಪಂಚದಲ್ಲೇ ಅತಿ ಶ್ರೀಮಂತ ವ್ಯಕ್ತಿ. ಜಗತ್ತಿನ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಮತ್ತು ಚೆಫ್ ಬಜ್ ಗಿಂತಲೂ ಹೆಚ್ಚು ಹಣ ಇವನ ಬಳಿ ಇದೆ.

ಪುಟಿನ್ ಬಳಿ 44 ಪ್ರೈವೇಟ್ ಜೆಟ್ ಮತ್ತು 6 ಸಾವಿರಕ್ಕೂ ಹೆಚ್ಚು ಕಾರ್ ಗಳಿವೆ. ಹಾಗೆ ಪುಟಿನ್ ಮನೆಯಲ್ಲಿರುವ ಟಾಯ್ಲೆಟ್ ಗಳನ್ನು ಚಿನ್ನದಿಂದ ವೈಭವೀಕರಿಸಲಾಗಿದೆ. ಪುಟಿನ್ ಬಳಿ 70 ಬಿಲಿಯನ್ ಡಾಲರ್ ಗಳು ಆಸ್ತಿ ಇದೆ ಎಂದು ಅಧಿಕೃತವಾಗಿ ತಿಳಿದುಬಂದಿದೆ. ಆದರೆ ಪುಟಿನ್ ಬಳಿ ಬಿಲಿಯನ್ ಡಾಲರ್ ಆಸ್ತಿ ಇದೆ ಎಂಬ ವಿಷಯ ಹಲವರಿಗೆ ತಿಳಿದಿಲ್ಲ. ಪುಟಿನ್ ವಾಸಮಾಡುವ ಅರಮನೆಯ ಬೆಲೆ 1 ಬಿಲಿಯನ್ ಡಾಲರ್ ಗಳು. ಟಾಯ್ಲೆಟ್ ರೂಮ್ ಕೂಡ ಇಲ್ಲದ ಮನೆಯಲ್ಲಿ ಹುಟ್ಟಿದ ಪುಟಿನ್ ಇದೀಗ ವಿಶ್ವದ ಅತ್ಯಂತ ಪವರ್ ಫುಲ್ ಹಾಗೂ ಶ್ರೀಮಂತ ನಾಯಕ.

Leave a Comment