ಹತ್ತು ಸಾವಿರ ರೂಪಾಯಿ ಕೊಟ್ಟು ಜೇಮ್ಸ್ ಸಿನೆಮಾ ನೋಡ್ತೀನಿ. ಆದರೆ ಕಾಶ್ಮೀರ್ ಫೈಲ್ಸ್ ಸಿನೆಮಾ ಮಾತ್ರ ನೋಡಲ್ಲ ಎಂದು ಗುಡುಗಿದ ರೂಪೇಶ್ ರಾಜಣ್ಣ

ಕಾಶ್ಮೀರ್ ಫೈಲ್ಸ್ ಎನ್ನುವ ಸಿನಿಮಾ ಇದೀಗ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 1990 ರಲ್ಲಿ ಕಾಶ್ಮೀರದಲ್ಲಿ ನಡೆದ ಘಟನೆ ಆಧಾರಿತ ಚಿತ್ರ ಇದಾಗಿದೆ.
ಈ ಚಿತ್ರದಲ್ಲಿ ಕಾಶ್ಮೀರಿ ಪಂಡಿತರ ಕಷ್ಟ ನೋವು ಮತ್ತು ಹೋರಾಟದ ಬಗ್ಗೆ ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ಮಾನವೀಯತೆ ರಾಜಕೀಯ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಕಣ್ಣು ತೆರೆಸುವ ಸಂಗತಿಗಳನ್ನು ಪ್ರಶ್ನೆ ಮಾಡಲಾಗಿದೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಬರುತ್ತಿರುವುದು ವಿಲಕ್ಷಣವಾಗಿದೆ.

ಶೇಕಡಾ 80 ರಷ್ಟು ಪ್ರೇಕ್ಷಕರು ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನೂ ಶೇಕಡಾ ಇಪ್ಪತ್ತರಷ್ಟು ಜನ ಈ ಸಿನಿಮಾದ ಬಗ್ಗೆ ನೆಗೆಟಿವ್ ಮಾತನಾಡುತ್ತಿದ್ದಾರೆ. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿ ಅವರಿಂದ ಹಿಡಿದು ದೇಶದ ಪ್ರಧಾನಮಂತ್ರಿಯವರು ಸಹ ಈ ಸಿನಿಮಾವನ್ನ ಹೊಗಳಿ ಕೊಂಡಾಡಿದ್ದಾರೆ. ದೇಶಾಭಿಮಾನ ಇರೋರು ಇಂಥ ಸಿನಿಮಾಗಳನ್ನು ನೋಡಬೇಕಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಇಂಥ ಸಿನಿಮಾಗಳನ್ನು ನಾನು ನೋಡೋದೇ ಇಲ್ಲ ಅಂತ ಕೋಪ ವ್ಯಕ್ತಪಡಿಸಿದ್ದಾರೆ.

ಭಾಷಾಭಿಮಾನವನ್ನು ಗುರಿಯಾಗಿಟ್ಟುಕೊಂಡ ರೂಪೇಶ್ ರಾಜಣ್ಣ ಅವರು ಕಾಶ್ಮೀರ ಫೈಲ್ಸ್ ಎಂಬ ಬೇರೆ ಭಾಷೆಯ ಸಿನಿಮಾವನ್ನು ನೋಡಿಲ್ಲ ಎಂದು ಹೇಳಿದ್ದಾರೆ. ಕಾಶ್ಮೀರ ಫೈಲ್ಸ್ ಅಲ್ಲ ಅಮೇರಿಕ ಫೈಲ್ಸ್ ಸಿನಿಮಾ ಬಂದರು ಕೂಡ ನಾನ್ ಮಾತ್ರ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಚಿತ್ರವೊಂದೇ ನೋಡ್ತೀನಿ ಎಂದು ಹೇಳುತ್ತಿದ್ದಾರೆ. ಪುನೀತ್ ಅವರ ಗೇಮ್ ಚಿತ್ರಕ್ಕೆ 5 ಸಾವಿರ ಅಲ್ಲ ಹತ್ತು ಸಾವಿರ ರೂಪಾಯಿ ಕೊಟ್ಟು ಬೇಕಾದ್ರೂ ನೋಡ್ತಿನಿ ಆದರೆ ಕಾಶ್ಮೀರ ಫೈಲ್ಸ್ ಎಂಬ ಬೇರೆ ಭಾಷೆ ಸಿನಿಮಾ ಮಾತ್ರ ನಾನು ನೋಡಲ್ಲ ಇದು ನನ್ನ ಅಭಿಪ್ರಾಯ ನೀವ್ಯಾರು ಪ್ರಶ್ನೆ ಮಾಡೋ ಹಾಗಿಲ್ಲ ಎಂದು ಖಡಕ್ಕಾಗಿ ಉತ್ತರ ನೀಡಿದ್ದಾರೆ.

ಕೊರೋನಾ ದಿಂದಾಗಿ ಕರ್ನಾಟಕದಲ್ಲಿ ಲಕ್ಷಾಂತರ ಮಂದಿ ಜೀವ ಬಿಟ್ಟಿದ್ದಾರೆ ಹಾಗೆ ಪ್ರತಿವರ್ಷ ನೂರಾರು ಮಂದಿ ರೈತರು ಜೀವವನ್ನು ಬಿಡುತ್ತಾರೆ. ಹಾಗೆ ನಮ್ಮ ರಾಜ್ಯದಲ್ಲಿ ಸರಿಯಾದ ಶಿಕ್ಷಣವಿಲ್ಲ ಹಾಗೆ ಮೂಲಭೂತ ಹಕ್ಕುಗಳು ಸಾರ್ವಜನಿಕರಿಗೆ ಸಿಗುತ್ತಿಲ್ಲ ಇಂತಹ ವಿಷಯಗಳ ಬಗ್ಗೆ ಚರ್ಚೆ ಮಾಡೋದನ್ನ ಬಿಟ್ಟು ನಾವು ಯಾಕೆ ಕಾಶ್ಮೀರ ಫೈಲ್ಸ್ ಚಿತ್ರದ ಬಗ್ಗೆ ಚರ್ಚೆ ಮಾಡಬೇಕು ಅಂತ ರಾಜಣ್ಣ ಪ್ರಶ್ನೆ ಹಾಕಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಯಾರು ಯಾರು ಜೀವಬಿಟ್ಟಿದ್ದಾರೆ ಮತ್ತು ಅದಕ್ಕೆ ಮೂಲ ಕಾರಣ ಎಂಬುದರ ಬಗ್ಗೆ ಫೈಲ್ಸ್ ಮಾಡಿ ಅದರ ಮೇಲೆ ಸಿನಿಮಾ ಮಾಡಿ ಆಗ ನೋಡುತ್ತೇನೆ ಅದನ್ನು ಬಿಟ್ಟು ಬೇರೆ ರಾಜ್ಯದ ಸಮಸ್ಯೆಗಳ ಬಗ್ಗೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದು ರಾಜಣ್ಣ ಫೇಸ್ಬುಕ್ ಲೈವ್ ನಲ್ಲಿ ಕೋಪ ವ್ಯಕ್ತಪಡಿಸಿದ್ದಾರೆ.

Leave a Comment