ಸ್ನೇಹಿತರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕನಾಗಿರುವಂತಹ ರಾಹುಲ್ ಗಾಂಧಿಯವರು(Rahul Gandhi) ಪ್ರತಿನಿತ್ಯ ಒಂದಲ್ಲ ಒಂದು ಕಾರ್ಯಗಳಿಂದಾಗಿ ಸದಾ ಟ್ರೆಂಡಿಂಗ್ನಲ್ಲಿ ಇರುತ್ತಾರೆ. ಸತತ ಹಲವು ವರ್ಷಗಳಿಂದ ಭಾರತದ ಪ್ರಧಾನ ಮಂತ್ರಿ ಆಗಬೇಕೆಂಬ ಆಸೆಯಿಂದ ಪ್ರಧಾನಿ ನರೇಂದ್ರ ಮೋದಿಯ(Narendra modi) ಬಗ್ಗೆ ಯಶಸ್ವಿ ಪೈಪೋಟಿ ನೀಡುತ್ತಾ ರಾಜಕೀಯ ರಂಗದಲ್ಲಿ ಸಕ್ರಿಯರಾಗಿರುವಂತಹ ರಾಹುಲ್ ಗಾಂಧಿಯವರು ಲಡಾಕ್ ನಲ್ಲಿ ಮೊಹಬತ್ ಕಿ ದುಕಾನ್ ನಡೆಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಫೋಟೋ ಗಳನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿಯವರು 53 ವರ್ಷ ವಯಸ್ಸು ಆದರೂ ಸಹ ಇಂದಿಗೂ ಬಹಳ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಬೈಕ್ ಹತ್ತಿ ಲಡಾಕ್ಗೆ ಪ್ರವಾಸ ತೆರಳಿರುವ ಫೋಟೋ ಬಾರಿ ವೈರಲ್ ಆಗುತ್ತಿದೆ. ಹೌದು ಗೆಳೆಯರೇ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಲೋಕಸಭಾ ಎಲೆಕ್ಷನ್ ಕೂಡ ಬರುತ್ತಿದ್ದು ಇಂತಹ ಸಂದರ್ಭದಲ್ಲಿ ತಮ್ಮ ಮನಶಾಂತಿಗಾಗಿ ದೂರದೂರಿನ ಟ್ರಿಪ್ಗೆ ರಾಹುಲ್ ತೆರಳಿರುವುದು ವಿಶೇಷವಾಗಿ ಕಂಡುಬಂದಿದೆ.
ಸೋಮವಾರವಷ್ಟೆ ಲಡಾಕ್ ತಲುಪಿರುವಂತಹ ರಾಹುಲ್ ಗಾಂಧಿಯವರು ಅಲ್ಲಿನ ಸ್ಥಳಿಯರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ಅವರ ಆಗುಹೋಗುಗಳನ್ನೆಲ್ಲ ಕೇಳುವುದರ ಜೊತೆಗೆ ಅವರ ದಿನಾಚರಣೆ ಹೇಗಿರುತ್ತದೆ, ಎಂಬುದನ್ನೆಲ್ಲವನ್ನು ಮನಗಂಡಿದ್ದಾರೆ. ಇದರ ಜೊತೆಗೆ ಮೋಟಾರ್ ಸೈಕಲ್ ನಲ್ಲೇ ಭೇಟಿ ನೀಡಿರುವ ರಾಹುಲ್ ಗಾಂಧಿಯವರು ಪ್ಯಾಂಗಾಂಗ್ ಸರೋವರದ (Pyanggang pond) ಕೆಲ ಸುಂದರ ಚಿತ್ರಣಗಳನ್ನು ತಮ್ಮ instagramನಲ್ಲಿ ಹಂಚಿಕೊಂಡು
“ತಮ್ಮ ತಂದೆ ಹೇಳುತ್ತಿದ್ದ ಪ್ಯಾಂಗಾಂಗ್ ಸರೋವರಕ್ಕೆ ಹೋಗುವ ದಾರಿಯಲ್ಲಿ ಇದು ವಿಶ್ವದಾದ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ” ಎಂದು ಬರೆದುಕೊಂಡಿದ್ದಾರೆ. ಸದ್ಯ ಹಸಿರು ಬಣ್ಣದ ಟೀ ಶರ್ಟ್ ಹಾಗೂ ಜಾಕೆಟ್ ಧರಿಸಿ ಸಕಲಸಿದ್ಧತೆಯೊಂದಿಗೆ ಡ್ಯೂಕ್ 39೦ (Duke 390) ಬೈಕ್ನಲ್ಕಿ ರಾಹುಲ್ ಗಾಂಧಿ ದೇಶ ಸುತ್ತುತ್ತಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ನಮ್ಮ ಆಲ್ರೌಂಡರ್(our allrounder) ಎಂಬ ಕ್ಯಾಪ್ಶನ್ ಬರೆದು ರಾಹುಲ್ ಗಾಂಧಿ ಅವರ ಫೋಟೋಗಳನ್ನು ಶೇರ್ ಮಾಡಲಾಗುತ್ತಿದೆ.