2 ಕೋಟಿಗೆ ಮಾರಾಟಕ್ಕೆ ಇಟ್ಟಿರೋ ರಾಗಿಣಿ ಮನೆ ಹೇಗಿದೆ ನೋಡಿ

ಸಿನಿಮಾ ರಂಗದಲ್ಲಿ ಸುದೀಪ್, ಶರಣ್, ರವಿಚಂದ್ರನ್, ರಮೇಶ್ ಮುಂತಾದ ನಟರ ಜೊತೆಗೆ ಅಭಿನಯಿಸಿದ್ದಾರೆ ಈ ನಟಿ. ಸುಮಾರು ಚಿತ್ರಗಳಲ್ಲಿ ಐಟಂ ಹಾಡುಗಳಲ್ಲಿಯೂ ನಟಿಸಿದ್ದಾರೆ. ಕನ್ನಡದಲ್ಲಿ ಒಂದೆ ಅಲ್ಲದೆ ಹಿಂದಿ, ತಮಿಳು, ಮಲಿಯಾಳಂ ಮುಂತಾದ ಭಾಷೆಗಳಲ್ಲಿ ನಟಿಸಿದ ಬಹುಭಾಷಾ ತಾರೆ ಇವರು. ಇವರ ಹೆಸರು ರಾಗಿಣಿ ದ್ವಿವೇದಿ. ವೀರ ಮದಕರಿ, ಅಧ್ಯಕ್ಷ ಇನ್ ಅಮೇರಿಕಾ, ರಾಗಿಣಿ ಐಪಿಎಸ್, ಕಳ್ಳ ಮಳ್ಳ ಸುಳ್ಳ, ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು. ಇತ್ತೀಚಿಗೆ ಡ್ರಗ್ಸ್ ಕೇಸ್‌ ಮೇಲೆ ಸಿಸಿಬಿಯವರಿಂದ ವಿಚಾರಣೆಗೆ ಒಳಪಡಿಸಲಾಯಿತು. ಈಗ ರಾಗಿಣಿ ದ್ವಿವೇದಿಯವರ ಮನೆಯನ್ನು ಎರಡು ಕೋಟಿಗೆ ಮಾರಾಟಕ್ಕಿದೆ ಎಂಬ ಸುದ್ದಿ ಇದೆ.

ಜ್ಯುಡಿಸಿಯಲ್ ಲೇಯೌಟ್ ನಲ್ಲಿ ಎಚ್. ಆರ್. ಸಿ. ಅನನ್ಯ ಅಪಾರ್ಟ್ ಮೆಂಟ್ ನಲ್ಲಿ ಇರುವ ರಾಗಿಣಿ ದ್ವಿವೇದಿಯ ಮನೆಯನ್ನು ಎರಡು ಕೋಟಿಗೆ ಮಾರಾಟಕ್ಕಿದೆ ಎಂದು ಹೇಳಾಗಿದೆ. ಮೂರು ಸುಂದರವಾದ ಬೆಡ್ ರೂಮ್ಸ್. ಅದಕ್ಕೆ ಅಟ್ಯಾಚ್ ಇರುವ ಬಾತ್ ರೂಮ್ಸ್. ಒಂದು ಅಡುಗೆಕೋಣೆ, ಡೈನಿಂಗ್ ಹಾಲ್, ಒಂದು ಲಿವಿಂಗ್ ಹಾಲ್ ಗಳನ್ನು ಹೊಂದಿದೆ. ಪ್ರತಿ ಬೆಡ್ ರೂಮ್ ಗಳಿಗೆ ಬಾಲ್ಕನಿಗಳು ಇದೆ. ಒಂದು ಟೆರೆಸ್ ಹೊಂದಿದೆ. ಹೊರಗಡೆ ದೊಡ್ಡದಾದ ಲಾನ್ ಹೊಂದಿದ್ದು, ಸ್ವಿಮ್ಮಿಂಗ್ ಫೂಲ್ ಹೊಂದಿದೆ. ಮನೆ ಸುಂದರವಾಗಿ , ವಿಶಾಲವಾಗಿದೆ.

Leave a Comment