PAN Card: ಇನ್ಮುಂದೆ ಪಾನ್ ಕಾರ್ಡ್ ಅನ್ನು ಬಳಸಿದರೆ ಪರಿಸ್ಥಿತಿ ನೆಟ್ಟಗಿರಲ್ಲ.

PAN Card ಪಾನ್ ಕಾರ್ಡ್ ಅನ್ನು ಪ್ರತಿಯೊಬ್ಬರೂ ಕೂಡ ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಬೇಕು ಎನ್ನುವುದಾಗಿ ಈಗಾಗಲೇ ಕೇಂದ್ರ ಸರ್ಕಾರದ ವಿತ್ತ ಸಚಿವಾಲಯ(Ministry Of Finance) ಸಾಕಷ್ಟು ವರ್ಷಗಳ ಹಿಂದೇನೆ ಘೋಷಿಸಿತ್ತು. ಆದರೆ ಸಾಕಷ್ಟು ಜನರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದಾದ ನಂತರ ಮಾರ್ಚ್ 31 ರಂದು ಮೊದಲ ಬಾರಿ ಗಡುವನ್ನು ಸರ್ಕಾರ ನೀಡಿತ್ತು ಅದಾದ ನಂತರ ಜೂನ್ 30ರಂದು ಕೊನೆಯ ಗಡುವಿನ ಅವಧಿ ಎಂಬುದಾಗಿ ಕೂಡ ಸ್ಪಷ್ಟಪಡಿಸಿತ್ತು.

ಪ್ರತಿಯೊಬ್ಬರೂ ಕೂಡ e-Filling ವೆಬ್ ಸೈಟಿನಲ್ಲಿ ಸಾವಿರ ರೂಪಾಯಿ ಫೈನ್ ಕಟ್ಟುವ ಮೂಲಕ ನಿಮ್ಮ ಆಧಾರ್ ಹಾಗೂ ಪಾನ್ ಕಾರ್ಡ್(PAN Card) ಅನ್ನು ಲಿಂಕ್ ಮಾಡಿಸಿಕೊಳ್ಳಬಹುದಾಗಿದೆ ಎಂಬುದಾಗಿ ಆದಾಯ ಇಲಾಖೆ ಮೊದಲೇ ಘೋಷಿಸಿತ್ತು. ಆದರೆ ಇದುವರೆಗೂ ಲಿಂಕ್ ಮಾಡಿಸಿಕೊಳ್ಳದೆ ಇರುವಂತಹ ಸಾಕಷ್ಟು ಜನರಿದ್ದಾರೆ. ಇನ್ನು ಮುಂದೆ ಅವರು ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಹೌದು ಲಿಂಕ್ ಮಾಡಿಸಿಕೊಳ್ಳದೆ ಇರುವ ಪ್ರತಿಯೊಬ್ಬರೂ ಕೂಡ ಇನ್ನು ಮುಂದೆ ತಮ್ಮ ಪಾನ್ ಕಾರ್ಡ್ ಅನ್ನು ಎಲ್ಲಿಯೂ ಕೂಡ ಬಳಸುವಂತಿಲ್ಲ ಯಾಕೆಂದರೆ ಅದು ಈಗಾಗಲೇ ಸರಕಾರದ ನಿಯಮದ ಪ್ರಕಾರ ನಿಷ್ಕ್ರಿಯೆ ಗೊಂಡಿದೆ. ಒಂದು ವೇಳೆ ಬಳಸಿದ್ದೆ ಆದಲ್ಲಿ ನಿಮ್ಮ ವಿರುದ್ಧ 10 ಸಾವಿರ ರೂಪಾಯಿಗಳ ತಂಡವನ್ನು ಮೊದಲ ಬಾರಿಗೆ ವಿಧಿಸಲಾಗುತ್ತದೆ ಹಾಗೂ ಕಾನೂನು ಕ್ರಮವನ್ನು ಕೂಡ ಜರಗಿಸಬಹುದಾದ ಸಾಧ್ಯತೆ ಇದೆ.

ಇನ್ನು ಮುಂದೆ 50,000 ಗಿಂತ ಹೆಚ್ಚಿನ ವಹಿವಾಟನ್ನು ಮಾಡೋ ಹಾಗಿಲ್ಲ. ಆಸ್ತಿ ಹಾಗೂ ಇನ್ನಿತರ ಬೆಳೆಬಾಳುವ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಕೂಡ ಪಾನ್ ಕಾರ್ಡ್ ಪ್ರಮುಖವಾಗಿ ಬೇಕಾಗಿರುವಂತಹ ಸರ್ಕಾರಿ ದಾಖಲೆ ಆಗಿತ್ತು ಆದರೆ ಇನ್ನು ಮುಂದೆ ಅಂತಹ ವಸ್ತುಗಳನ್ನು ಕೂಡ ಲಿಂಕ್ ಆಗದೆ ಇರುವ ಪಾನ್ ಕಾರ್ಡ್ ಅನ್ನು ಬಳಸಿಕೊಂಡು ಖರೀದಿಸುವ ಹಾಗಿಲ್ಲ ಎಂಬುದು ಕೂಡ ನಿಮಗೆ ತಿಳಿದಿರಲಿ.

Leave a Comment