Nita Ambani ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವಂತಹ ಮುಕೇಶ್ ಅಂಬಾನಿ(Mukesh Ambani) ಅವರ ಬೆನ್ನ ಹಿಂದಿನ ಪ್ರಮುಖ ಶಕ್ತಿಯಾಗಿ ಅವರ ಪತ್ನಿ ಆಗಿರುವಂತಹ ನೀತ ಅಂಬಾನಿ(Nita Ambani) ಅವರು ಕೂಡ ಕಾಣಿಸಿಕೊಳ್ಳುತ್ತಾರೆ. ಕೇವಲ ಶ್ರೀಮಂತಿಕೆ ವಿಚಾರದಲ್ಲಿ ಮಾತ್ರವಲ್ಲದೆ ಇನ್ನೂ ಹಲವಾರು ವಿಚಾರಗಳಲ್ಲಿ ಕೂಡ ನೀತಾ ಅಂಬಾನಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ.
ಹೌದು ಈಗಾಗಲೇ ನೀವೆಲ್ಲರೂ ಅರಿತುಕೊಂಡಿರುವ ಹಾಗೆ ರಿಲಯನ್ಸ್ ಫೌಂಡೇಶನ್(Reliance Foundation) ಮೂಲಕ ಸಾಕಷ್ಟು ಬಡ ಮಕ್ಕಳ ಶಿಕ್ಷಣ ಆರೋಗ್ಯ ಸೇರಿದಂತೆ ಹಲವಾರು ಜನ ಹಿತ ಆಗುವಂತಹ ಕೆಲಸಗಳನ್ನು ಮಾಡುವ ಮೂಲಕ ಅನಿತಾ ಅಂಬಾನಿ ತಾವು ಹೃದಯ ಶ್ರೀಮಂತೆ ಎಂಬುದನ್ನು ಕೂಡ ಸಾಬೀತುಪಡಿಸಿದ್ದಾರೆ.
ಅದಕ್ಕೂ ಮಿಗಿಲಾಗಿ ತಮ್ಮ ಧೀರೂಭಾಯ್ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕೂಡ ಕ್ರಾಂತಿಯನ್ನು ಸೃಷ್ಟಿಸಿರುವಂತಹ ನೀತ ಅಂಬಾನಿ ಇಲ್ಲಿ ಸೆಲೆಬ್ರಿಟಿಗಳ ಮಕ್ಕಳ ಜೊತೆಗೆ ಬಡ ಮಕ್ಕಳಿಗೂ ಕೂಡ ಶಿಕ್ಷಣ ನೀಡುವ ಕೆಲಸವನ್ನು ಮಾಡುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಈ ಶಾಲೆಯಲ್ಲಿ ಪಾಠವನ್ನು ಕಲಿಸುವಂತಹ ಶಿಕ್ಷಕರಿಗೆ ಎಷ್ಟು ಸಂಭಾವನೆ ಇದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಗುಣಮಟ್ಟದ ಶಿಕ್ಷಣವನ್ನು ನೀಡುವಂತಹ ಈ ಶಾಲೆಯ ಶಿಕ್ಷಕರಿಗೆ ತಿಂಗಳಿಗೆ ಭರ್ಜರಿ ಮೂರು ಲಕ್ಷಗಳಿಂದ ಉನ್ನತ ಪದವಿಯನ್ನು ಹೊಂದಿರುವಂತಹ ಶಿಕ್ಷಕರಿಗೆ 16 ಲಕ್ಷ ರೂಪಾಯಿಗಳವರೆಗು ಕೂಡ ಸಂಬಳವಿದೆ. ಅಂಬಾನಿ ಅವರ ಶಾಲೆ ಅಂದಮೇಲೆ ಶಿಕ್ಷಕರ ಸಂಭಾವನೆ ಕೂಡ ಅದೇ ರೆಜಿನಲ್ಲಿ ಇರುತ್ತೆ ಎಂಬುದನ್ನು ಈ ಮೂಲಕ ನೀವು ಅರ್ಥೈಸಿಕೊಳ್ಳಬಹುದಾಗಿದೆ.