Narendra Modi: ನಾನು ಕೂಡ ಮೋದಿ ಅಭಿಮಾನಿ ಎಂದ ಅಮೆರಿಕಾದ ಈ ಅತ್ಯಂತ ಶ್ರೀಮಂತ ವ್ಯಕ್ತಿ.

Narendra Modi ಭಾರತದ ಪ್ರಧಾನ ಮಂತ್ರಿ ಆಗಿರುವಂತಹ ನರೇಂದ್ರ ಮೋದಿ(Narendra Modi) ಅವರು ಜಾಗತಿಕ ನಾಯಕರ ಪಟ್ಟಿಯಲ್ಲಿ ಅತ್ಯಂತ ಜನಪ್ರಿಯ ನಾಯಕರಲ್ಲಿ ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಅಕ್ಕ ಪಕ್ಕದಲ್ಲಿ ಕೂಡ ಬೇರೆ ದೇಶದ ನಾಯಕರು ಕಂಡು ಬರುವುದಿಲ್ಲ ಎನ್ನುವುದು ನಿಜಕ್ಕೂ ಕೂಡ ಭಾರತೀಯರಾದ ನಾವು ಹೆಮ್ಮೆಪಡಬೇಕಾಗಿರುವ ವಿಚಾರ.

ನರೇಂದ್ರ ಮೋದಿ(Modi) ಅವರು ಜಾಗತಿಕ ಮಟ್ಟದಲ್ಲಿ ಭಾರತ ವೇಗವಾಗಿ ಬೆಳೆಯುತ್ತಿರುವಂತಹ ಆರ್ಥಿಕ ಶಕ್ತಿಯಾಗಿ ರೂಪಿಸಲು ಸಾಕಷ್ಟು ಪರಿಶ್ರಮಪಟ್ಟಿದ್ದಾರೆ ಎನ್ನುವುದು ಫಲಿತಾಂಶದಲ್ಲಿಯೇ ನಮಗೆ ತಿಳಿದು ಬರುತ್ತದೆ. ಇನ್ನು ಇತ್ತೀಚಿಗಷ್ಟೇ ಅಮೆರಿಕಾಗೆ ತೆರಳಿದ್ದ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಆಗಿರುವಂತಹ ಜೋ ಬಿಡೆನ್(Joe Biden) ಸೇರಿದಂತೆ ಹಲವಾರು ಗಣ್ಯತೆ ಗಣ್ಯರನ್ನು ಸೇರಿದಂತೆ ಅಲ್ಲಿನ ಭಾರತೀಯರನ್ನು ಕೂಡ ಭೇಟಿ ಮಾಡಿ ಅವರ ಮುಖದಲ್ಲಿ ಸಂತೋಷ ಮೂಡುವಂತೆ ಮಾಡಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಅಮೆರಿಕಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವಂತಹ ಟೆಸ್ಲಾ ಸಂಸ್ಥೆಯ ಮಾಲೀಕ ಎಲೋನ್ ಮಸ್ಕ್(Elon Musk) ಕೂಡ ಇದ್ದರು.

Narendra fans

ಹೌದು ಮಸ್ಕ್ ಈ ಸಂದರ್ಭದಲ್ಲಿ ಮೋದಿ ಅವರ ಜೊತೆಗೆ ಚರ್ಚೆಯಲ್ಲಿ ತೊಡಗಿದ್ದರು ಹಾಗೂ ಅವರ ಜೊತೆಗಿನ ಸಂಭಾಷಣೆ ಸಾಕಷ್ಟು ಸಂತೋಷವನ್ನು ನೀಡಿತ್ತು ಹಾಗೂ ನಾನು ಕೂಡ ಮೋದಿ ಅವರ ಅಭಿಮಾನಿ ಎಂಬುದಾಗಿ ಮಸ್ಕ್ ಹೇಳಿರುವುದು ನಿಜಕ್ಕೂ ಕೂಡ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ Narendra Modi: ನರೇಂದ್ರ ಮೋದಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿರುವ ಈ ಫೋಟೋದಲ್ಲಿರುವ ಹುಡುಗಿ ಯಾರು? ಎಲ್ಲಾ ಕಡೆ ಅದೇ ಚರ್ಚೆ ನೋಡಿ.

Leave a Comment