ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತಿದೆ. ಆರೋಗ್ಯವನ್ನು ಕಾಪಾಡಿಕೊಂಡು ನೂರಾರು ವರ್ಷ ಬದುಕುವುದು ಸುಲಭದ ಮಾತಲ್ಲ. ಈಗಿನ ಕಾಲದಲ್ಲಂತೂ ಇದು ಕನಸಿನ ಮಾತೇ ಸರಿ. ನೂರು ವರ್ಷಗಳ ಕಾಲ ಬದುಕಬೇಕೆಂದರೆ ಮನುಷ್ಯ ಆಹಾರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವ ಶಕ್ತಿ ಇರಬೇಕು. ನಮ್ಮ ಆರೋಗ್ಯ ಮತ್ತು ನಮ್ಮ ಕೈಯಲ್ಲೇ ಇದೆ ಎಂಬ ವಿಚಾರ ಮನುಷ್ಯ ಮರೆಯಬಾರದು. ಮೋದಿಯವರ ತಾಯಿ ಇದೀಗ ನೂರು ವರ್ಷವನ್ನು ಪೂರೈಸಿ ಸೆಂಚುರಿ ಬಾರಿಸಿದ್ದಾರೆ.
ನೂರು ವರ್ಷ ವಯಸ್ಸಾದರೂ ಮೋದಿಯವರ ತಾಯಿ ಹೀರಾಬೆನ್ ಅವರು ಇನ್ನೂ ಕೂಡ ಗಟ್ಟಿಮುಟ್ಟಾಗಿದ್ದಾರೆ ಅವರಿಗೆ ಯಾವುದೇ ರೋಗವಿಲ್ಲ. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಾರೆ. ಯಾರ ಸಹಾಯವಿಲ್ಲದೆ ಓಡಾಡಿಕೊಂಡು ಆರಾಮಾಗಿದ್ದಾರೆ. ಇದೀಗ ನರೇಂದ್ರ ಮೋದಿ ಅವರ ತಾಯಿಯ ಹೆಲ್ತ್ ಸೀಕ್ರೆಟ್ ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಲ್ಲೂ ಮುಗಿದೆ ಅವರು ಯಾವ ಆಹಾರ ಸೇವಿಸುತ್ತಾರೆ ಅವರ ಜೀವನ ಕ್ರಮ ಹೇಗಿದೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಮೂಡಿದೆ.
ಮೋದಿಯವರ ತಾಯಿ ಹೀರಾಬೆನ್ ಅವರು ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನುವುದು ಇಲ್ಲ ಮನೆಯಲ್ಲಿ ಮಾಡಿದ ಆಹಾರಗಳನ್ನು ಮಾತ್ರ ಸೇವಿಸುತ್ತಾರೆ. ಪ್ರತಿ ದಿನ ಊಟಕ್ಕೆ ಮೋದಿ ಮತ್ತು ಅವರ ತಾಯಿ ಹಸಿ ತರಕಾರಿಗಳಾದ ಗಜ್ಜರಿ ಸೌತೆಕಾಯಿ ಗಳನ್ನು ತಿನ್ನುತ್ತಾರೆ ಹಾಗೆ ರೊಟ್ಟಿ, ಡಾಲ್, ರೈಸ್ ಮತ್ತು ಸಬ್ಜಿ ಪದಾರ್ಥಗಳನ್ನು ಸೇವಿಸುತ್ತಾರೆ. ಹಾಗೆ ಮೋದಿಯವರ ಅಮ್ಮನಿಗೆ ಸಿಹಿ ತಿಂಡಿಗಳೆಂದರೆ ತುಂಬ ಇಷ್ಟವಂತೆ ಮೋದಿಯವರ ಹುಟ್ಟು ಹಬ್ಬಕ್ಕೆ ಕೂಡ ಅವರು ಸ್ವೀಟ್ ಗಳನ್ನು ಮಾಡಿ ಮೋದಿಯವರಿಗೆ ತಿನ್ನಿಸಿ ತಾವು ಕೂಡ ತಿಂದಿದ್ದರು.
ಹಾಗೆ ಮೋದಿಯವರ ತಾಯಿ ಹೀರಾಬೆನ್ ಅವರ ಇನ್ನೊಂದು ಹೆಲ್ತ್ ಸೀಕ್ರೆಟ್ ಏನೆಂದರೆ ಮೋದಿಯವರ ತಾಯಿ ಊಟ ಮಾಡುವಾಗ ಯಾವಾಗಲು ತಾಮ್ರದ ಪಾತ್ರೆಗಳನ್ನು ಬಳಸುತ್ತಾರೆ. ತಾಮ್ರದ ಪಾತ್ರೆಗಳಲ್ಲಿ ಊಟವನ್ನು ಸೇವಿಸುವುದು ಆರೋಗ್ಯಕರ ಅಭ್ಯಾಸವೆ೦ದು ಪರಿಗಣಿಸಲಾಗುತ್ತದೆ. ತಾಮ್ರ ಲೋಹವು ದೇಹದಲ್ಲಿ ಅಗ್ನಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಇದರಿಂದ ದೇಹದಲ್ಲಿ ಚಯಾಪಚಯ ದರವು ಹೆಚ್ಚುತ್ತದೆ.. ಮತ್ತು ದೇಹದ ಚರ್ಮಕ್ಕೆ ಕೂಡ ಈ ಲೋಹವು ಉಪಕಾರಿಯಾಗಲಿದೆ. ಅಷ್ಟೇ ಅಲ್ಲದೆ ತಾಮ್ರದ ಪಾತ್ರೆಗಳಲ್ಲಿ ಊಟ ಮಾಡುವುದರಿಂದ ಇದು ದೇಹವನ್ನು ನಿರ್ವಿಷಗೊಳಿಸುತ್ತದೆ. ದೇಹದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮತ್ತು ಪಿತ್ತರಸದ ಸ್ರವಿಸುವಿಕೆಯನ್ನು ಸುಧಾರಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡಲು ಕರುಳಿನ ಪೆರಿಸ್ಟಾಲ್ಟಿಕ್ ಚಲನೆಯನ್ನು ಸುಧಾರಿಸುತ್ತದೆ.