Mukesh Ambani: ಎಲ್ಲಾ ಸೆಲೆಬ್ರಿಟಿಗಳ ಹಾಗಲ್ಲ ಮುಕೇಶ್ ಅಂಬಾನಿ. ಬೆಳಿಗ್ಗೆ ಎದ್ದ ತಕ್ಷಣ ಅವರು ಮಾಡೋ ಕೆಲಸಗಳು ಕೇಳಿದರೆ ನೀವು ಕೂಡ ಶಿಸ್ತಿನ ಸಿಪಾಯಿ ಅಂತೀರಾ.

Mukesh Ambani ನಮ್ಮ ಭಾರತ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವಂತಹ ಮುಕೇಶ್ ಅಂಬಾನಿಯವರು(Mukesh Ambani) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇವಲ ಹಣದ ಶ್ರೀಮಂತಿಕೆ ವಿಚಾರದಲ್ಲಿ ಮಾತ್ರವಲ್ಲದೆ ಹೃದಯ ಶ್ರೀಮಂತಿಕೆ ವಿಚಾರದಲ್ಲಿ ಕೂಡ ಬೇರೆಯವರನ್ನು ಮೀರಿಸುತ್ತಾರೆ.

ಇನ್ನು ಸಾಮಾನ್ಯವಾಗಿ ಶ್ರೀಮಂತರು ಅಥವಾ ಬೇರೆ ಸೆಲೆಬ್ರಿಟಿಗಳು ರಾತ್ರಿ ಎಲ್ಲಾ ಪಾರ್ಟಿ ಮಾಡಿ ಬೆಳಗಿನ ಜಾವದಲ್ಲಿ ಮಲಗುತ್ತಾರೆ ಆದರೆ ಬೇರೆಯವರಿಗೆ ಹೋಲಿಸಿದರೆ ಸಾಕಷ್ಟು ಶಿಸ್ತು ಬದ್ಧ ಜೀವನವನ್ನು ನಡೆಸುತ್ತಾರೆ ಎನ್ನುವುದು ಪ್ರತಿಯೊಬ್ಬರೂ ಕೂಡ ಒಪ್ಪಿಕೊಳ್ಳಬೇಕಾಗುತ್ತದೆ ಅದಕ್ಕೆ ವಿವರಣೆಯನ್ನು ಕೂಡ ನೀಡುತ್ತೇವೆ ಬನ್ನಿ.

ಬೆಳಗ್ಗೆ ಎಲ್ಲರಿಗಿಂತ ಬೇಗ ಅಂದರೆ 5.30ಕ್ಕೆ ಎದ್ದು ವಾಕಿಂಗ್ ಯೋಗಭ್ಯಾಸವನ್ನು ಮಾಡಿದ ನಂತರ ಶುಚಿಯಾಗಿ ಬಂದು ಸಸ್ಯಹಾರ ಇರುವಂತಹ ಆಹಾರವನ್ನು ಅಂದರೆ ಅದರಲ್ಲಿ ವಿಶೇಷವಾಗಿ ತಿಂಡಿಯ ವಿಚಾರಕ್ಕೆ ಬಂದರೆ ಇಡ್ಲಿ ಸಾಂಬಾರ್ ಅನ್ನು ಹೆಚ್ಚಾಗಿ ಮುಕೇಶ್ ಅಂಬಾನಿಯವರು ಸೇವಿಸುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ಅದಾದ ನಂತರ ತಮ್ಮ ಕೆಲಸವನ್ನು ಅತ್ಯಂತ ವೇಗವಾಗಿ ಪ್ರಾರಂಭಿಸುವ ಮುಖೇಶ್ ಅಂಬಾನಿಯವರು(Mukesh Ambani) ರಾತ್ರಿ 10 ಗಂಟೆಗೆ ನಿದ್ರೆಯನ್ನು ಮಾಡಿಬಿಡುತ್ತಾರೆ ಎಂಬುದಾಗಿ ಕೂಡ ಹೇಳಲಾಗುತ್ತದೆ.

ಈ ಮೂಲಕವೇ ನಾವು ಸೆಲೆಬ್ರಿಟಿ ಆಗಿದ್ದರೂ ಕೂಡ ಮುಖೇಶ್ ಅಂಬಾನಿ ಅವರು ಯಾವ ರೀತಿ ಜೀವನ ಮೌಲ್ಯಗಳನ್ನು ಹೊಂದಿದ್ದಾರೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬಹುದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment