Mukesh Ambani ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತರ ಪೈಕಿಯಲ್ಲಿ ಭಾರತದಿಂದ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಮುಕೇಶ್ ಅಂಬಾನಿ(Mukesh Ambani) ಅವರು ಟಾಪ್ 10 ಲಿಸ್ಟ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಕೂಡ ಭಾರತೀಯರಾಗಿರುವ ನಮಗೆಲ್ಲರಿಗೂ ಕೂಡ ಹೆಮ್ಮೆಯ ವಿಚಾರವಾಗಿದೆ. ಇನ್ನು ಏಷ್ಯಾ ಹಾಗೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಕೂಡ ಮುಕೇಶ್ ಅಂಬಾನಿ ಇದೆ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತಾರೆ.
ಮುಕೇಶ್ ಅಂಬಾನಿ ಅವರ ಈ ಯಶಸ್ಸಿನ ಹಿಂದೆ ಅವರ ಕುಟುಂಬದ ಬೆಂಬಲವೂ ಕೂಡ ಒಂದು ಕಾರಣವಾಗಿ ಕಾಣಿಸಿಕೊಳ್ಳುತ್ತದೆ ಹಾಗೂ ಅದರಲ್ಲೂ ವಿಶೇಷವಾಗಿ ಅವರ ಪತ್ನಿ ಆಗಿರುವಂತಹ ನೀತಾ ಅಂಬಾನಿ(Nita Ambani) ಕೂಡ ತಮ್ಮ ಪತಿಯ ಈ ಸಾಧನೆಗೆ ಬೆನ್ನ ಹಿಂದಿನ ಪ್ರಮುಖ ಶಕ್ತಿಯಾಗಿ ಕಾಣಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಇತ್ತೀಚಿಗಷ್ಟೇ ಅಂಬಾನಿ ಪರಿವಾರಕ್ಕೆ ಮತ್ತೊಂದು ಅತಿಥಿಯ ಆಗಮನವಾಗಿದೆ.
ಹೌದು ನಾವ್ ಮಾತನಾಡುತ್ತಿರುವುದು ಮುಕೇಶ್ ಅಂಬಾನಿ ಅವರ ಹಿರಿಯ ಮಗ ಆಗಿರುವಂತಹ ಆಕಾಶ್ ಅಂಬಾನಿ(Akash Ambani) ಹಾಗೂ ಶ್ಲೋಕ ಮೆಹ್ತ ದಂಪತಿಗಳ ಎರಡನೇ ಹೆಣ್ಣು ಮಗುವಿನ ಬಗ್ಗೆ. ಇದೇ ಮೇ 31 ರಂದು ದಂಪತಿಗಳ ಎರಡನೇ ಹೆಣ್ಣು ಮಗುವಿನ ಜನ್ಮ ವಾಗಿದ್ದು ಇದನ್ನು ಅಂಬಾನಿ ಕುಟುಂಬ ಸಂತೋಷದಿಂದ ಸಂಭ್ರಮಾಚರಿಸಿದೆ.
ಇನ್ನು ಈಗ ಈ ಹೆಣ್ಣು ಮಗುವಿಗೆ ನಾಮಕರಣ ಕೂಡ ಮಾಡಿದ್ದು ವೇದ ಆಕಾಶ ಅಂಬಾನಿ(Vedha Akash Ambani) ಎನ್ನುವುದಾಗಿ ಮಗುವಿಗೆ ನಾಮಕರಣ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಹಿಂದೂ ಶಾಸ್ತ್ರದ ಪ್ರಕಾರ ಅತ್ಯಂತ ಪವಿತ್ರವಾದ ಹೆಸರನ್ನೇ ಹೆಣ್ಣು ಮಗುವಿಗೆ ಇಟ್ಟಿದ್ದು ಪ್ರತಿಯೊಬ್ಬರಿಗೂ ಕೂಡ ಸಂತೋಷವನ್ನು ತಂದಿದ್ದು ಪ್ರತಿಯೊಬ್ಬರೂ ಕೂಡ ಈ ಹೆಣ್ಣು ಮಗುವಿಗೆ ಹಾರೈಸಿದ್ದಾರೆ. ಹೆಸರಿನ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.