ಸಂಸಾರದಲ್ಲಿ ಜಗಳ ಕಲಹ ಭಿನ್ನಾಭಿಪ್ರಾಯಗಳು ಸರ್ವೇ ಸಾಮಾನ್ಯ. ಆದರೆ ಇದು ಅತಿರೇಕಕ್ಕೆ ಹೋದಾಗ ಮನುಷ್ಯ ತನ್ನ ನಿಯಂತ್ರಣವನ್ನು ತಪ್ಪುತ್ತಾನೆ ಮತ್ತು ಇದರಿಂದ ತನ್ನ ಸಂಸಾರವನ್ನು ಹಾಳು ಮಾಡಿಕೊಳ್ಳುತ್ತಾನೆ. ಬೆಂಗಳೂರಿನ ನೆಲಮಂಗಲದಲ್ಲಿ ವಾಸಮಾಡುತ್ತಿದ್ದ ದಂಪತಿಗಳು ಸುಖ ಸಂಸಾರ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಕ್ಷುಲ್ಲಕ ಕಾರಣದಿಂದ ಪತಿ ತನ್ನ ಪತ್ನಿಯನ್ನು ಭೀ’ಕ’ರವಾಗಿ ಕೊಲೆ ಮಾಡಿ ಅನಾರೋಗ್ಯದ ಕಥೆ ಕಟ್ಟಿ ಎಲ್ಲರನ್ನು ಕಣ್ಣು ತಪ್ಪಿಸಲು ಪ್ರಯತ್ನ ಪಟ್ಟಿದ್ದಾನೆ. ನೋಡೋಕೆ ಸುರಸುಂದರಿಯಂತೆ ಕಾಣುತ್ತಿದ್ದ ಪತ್ನಿಯನ್ನು ಈತ ಈ ರೀತಿ ಮಾಡಿದ್ದೇಕೆ..
ಹಿರಿಯೂರು ತಾಲೂಕು ಕುರುಬರಹಳ್ಳಿ ಗ್ರಾಮದ ಚೌಡೇಶ್ ಎಂಬ 35 ವರ್ಷ ವಯಸ್ಸಿನ ಪುರುಷ 9 ವರ್ಷಗಳ ಹಿಂದೆ ಶ್ವೇತಾ(30) ಎನ್ನುವ ಮಹಿಳೆಯನ್ನು ಮದುವೆಯಾಗಿದ್ದ. 4 ವರ್ಷಗಳ ಹಿಂದೆ ಈ ದಂಪತಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ನೆಲೆಸಲು ಬಂದಿದ್ದರು. ನಾಲ್ಕು ವರ್ಷಗಳ ಹಿಂದೆ ಉದ್ಯೋಗ ಅರಸಿ ನೆಲಮಂಗಲ ಸಮೀಪದ ತೋಣಚಿನಕುಪ್ಪೆ ಗ್ರಾಮದ ಭುವನೇಶ್ವರಿ ಬಡಾವಣೆಯಲ್ಲಿ ಬಾಡಿಗೆ ಮನೆ ಪಡೆದು ವಾಸ ಮಾಡುತ್ತಿದ್ದರು. ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಚೌಡೇಶ್ ಗೆ ಕ್ಯಾಶಿಯರ್ ಕೆಲಸ ಸಿಗುತ್ತೆ.
ಬೆಂಗಳೂರಿಗೆ ಬಂದ ಒಂದು ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು. ಚೌಡೇಶ್ ಗೆ ಕೈತುಂಬ ಹಣ ಬರುತ್ತಿತ್ತು. ಈತ ಒಂದೇ ವರ್ಷದಲ್ಲಿ ಬೆಂಗಳೂರಿನಲ್ಲಿ ಮನೆಯೊಂದನ್ನು ಖರೀದಿಸುತ್ತಾನೆ. ಎಲ್ಲವೂ ಸುಗಮವಾಗಿ ನಡೆಯುತ್ತಿತ್ತು. ಅದರ ಮೊನ್ನೆ ಇದ್ದಕ್ಕಿದ್ದ ಹಾಗೆ ಶ್ವೇತಾ ಳನ್ನು ಚೌಡೇಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಡಾಕ್ಟರ್ ಬಳಿ ನನ್ನ ಹೆಂಡತಿಗೆ ಲೋ ಬಿಪಿಯಾಗಿ ತಲೆಸುತ್ತು ಬಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಮನೆಯಲ್ಲಿ ಬಿದ್ದಳು ಎಂದು ಕಾರಣ ಹೇಳಿದ್ದ. ನಂತರ ವೈದ್ಯರು ಪರೀಕ್ಷೆ ನಡೆಸಿ ಶ್ವೇತಾ ಮೃ’ತ’ ಪಟ್ಟಿದ್ದಾಳೆ ಎಂದು ವರದಿ ನೀಡಿದ್ದಾರೆ. ತಕ್ಷಣ ಶ್ವೇತಾಳ ಪಾಲಕರಿಗೆ ವಿಷಯ ತಿಳಿದಿದೆ.
ಆಸ್ಪತ್ರೆಗೆ ದೌಡಾಯಿಸಿದ ಶ್ವೇತಾಳ ಪಾಲಕರು ಶ್ವೇತಾಳ ಮೃ’ತ’ದೇಹವನ್ನು ನೋಡಿ ಶಾಕ್ ಆಗುತ್ತದೆ ಯಾಕೆಂದರೆ ಶ್ವೇತಾಳ ದೇಹದ ಮೇಲೆ ಮತ್ತು ಕುತ್ತಿಗೆಯ ಮೇಲೆ ಗಾಯಗಳು ಕಂಡು ಬಂದವು. ತಕ್ಷಣ ಶ್ವೇತಾ ಪಾಲಕರು ನೆಲಮಂಗಲ ಪೊಲೀಸ್ ಠಾಣೆಗೆ ಹೋಗಿ ತಮ್ಮ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ತಕ್ಷಣವೇ ತನಿಖೆ ನಡೆಸಿದ ಪೊಲೀಸರಿಗೆ ಸಿಕ್ಕ ಸ್ಫೋ’ಟ’ಕ ಮಾಹಿತಿ ನೋಡಿ ಶ್ವೇತಾಳ ಪಾಲಕರು ಬೆಚ್ಚಿ ಬಿದ್ದರು. ಪೊಲೀಸರ ಮುಂದೆ ಶ್ವೇತಾ ಗಂಡ ಚೌಡೇಶ ತನಿಖೆಯ ಸಂದರ್ಭದಲ್ಲಿ ಸತ್ಯ ಬಾಯ್ಬಿಟ್ಟಿದ್ದಾನೆ. ತಾನೇ ಸ್ವತಃ ತನ್ನ ಪ’ತ್ನಿ’ಯನ್ನು ಕೊ’ಲೆ’ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅದಕ್ಕೆ ಅವನು ಕೊಟ್ಟ ಕಾರಣ ಹೀಗಿತ್ತು ನೋಡಿ..
ಎಲ್ಎಲ್ಬಿ ವ್ಯಾಸಂಗ ಮಾಡುತ್ತಿದ್ದ ನಾದಿನಿ ಜೊತೆ ಚೌಡೇಶ್ ನಂಟು ಬೆಸೆದಿತ್ತು, ಹೆಂಡತಿಯ ತಂಗಿಯ ಜೋತೆ ಲವ್ವಿ ಡವ್ವಿ ಶುರು ಮಾಡಿದ್ದ. ಹೆಂಡತಿಯ ಕಣ್ಣು ತಪ್ಪಿಸಿ ನಾದಿನಿ ಜೋತೆ ಕಾ ಮದ ಆಟ ಆಡುತ್ತಿದ್ದ . ಹೆಂಡತಿ ಬಳಿ ತನಗೆ ಟ್ರೈನಿಂಗ್ ಇದೆ, ಬೇರೆ ಊರಿನಲ್ಲಿ ಕೆಲಸ ಇದೆ ಎಂದೆಲ್ಲಾ ಸುಳ್ಳು ಪೊಳ್ಳು ಹೇಳಿ ಚೌಡೇಶ್ ತನ್ನ ನಾದಿನಿ ಜೊತೆ ಪ್ರವಾಸಿ ಸ್ಥಳಗಳನ್ನು ಸುತ್ತಾಡುತ್ತಿದ್ದ. ಯಾರಿಗೂ ಗೊತ್ತಾಗದಂತೆ ನಾದಿನಿ ಹಾಗೂ ಬಾವ ಮದುವೆ ಕೂಡ ಆಗಿದ್ದರು. ಮೊದ ಮೊದಲು ಶ್ವೇತಾ ಗೆ ಈ ವಿಷಯ ತಿಳಿದೇ ಇರಲಿಲ್ಲ.
ಆ ದಿನ ಚೌಡೇಶ್ವರಿಯ ಹುಟ್ಟುಹಬ್ಬದ ದಿನವಾಗಿತ್ತು. ಚೌಡೇಶ್ 35 ನೇ ವರ್ಷಕ್ಕೆ ಕಾಲಿಟ್ಟಿದ್ದ ದಿನ. ಚೌಡೇಶ್ ಗೆ ತನ್ನ ತಂಗಿಯ ಜೊತೆ ಅ’ನೈ’ತಿಕ ಸಂಬಂಧವಿತ್ತು. ಈ ವಿಷಯವನ್ನು ಶ್ವೇತಾ ಳ ಸಂಬಂಧಿಕರೊಬ್ಬರು ಶ್ವೇತಾಳಿಗೆ ತಿಳಿಸಿದ್ದರು. ಈ ವಿಷಯ ಗೊತ್ತಿದ್ದರೂ ಕೂಡ ತನ್ನ ಮನೆತನದ ಗೌರವ ಹಾಳಾಗುತ್ತದೆ ಎಂಬ ಕಾರಣದಿಂದ ಶ್ವೇತಾ ಚೌಡೇಶ್ ನ ಬಳಿ ಏನೂ ಹೇಳದೆ ಸುಮ್ಮನೆ ಇದ್ದಳು. ಚೌಡೇಶ್ ಹುಟ್ಟುಹಬ್ಬದ ದಿನ ಶ್ವೇತಾ ತನ್ನ ವಾಟ್ಸ್ ಆ್ಯಪ್ ನಲ್ಲಿ ಗಂಡನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ ಸ್ಟೇಟಸ್ ಹಾಕಿದ್ದಳು. ಈ ಸ್ಟೇಟಸ್ ನೋಡಿದ ಸಂಬಂಧಿಕನೊಬ್ಬ ಚೌಡೇಶ್ ನ ಅ’ನೈ’ತಿಕ ಸಂಬಂಧದ ವಿಚಾರ ಮತ್ತೆ ನೆನಪಿಸಿದ್ದಾನೆ.
ತಾಳ್ಮೆ ಕಳೆದುಕೊಂಡು ಶ್ವೇತಾ ಕೊನೆಗೂ ಗಟ್ಟಿ ಮನಸ್ಸು ಮಾಡಿ ತನ್ನ ಗಂಡನ ಬಳಿ ಹೋಗಿ ಅ’ನೈ’ತಿಕ ಸಂಬಂಧದ ವಿಚಾರವನ್ನು ತೆಗೆದೇ ಬಿಟ್ಟಳು. ಇಬ್ಬರ ನಡುವೆ ಇದೇ ವಿಚಾರ ಕೆಲವು ಗಂಟೆಗಳ ಕಾಲ ರಂಪಾಟ ನಡೆದಿದೆ. ತನ್ನ ಬಂಡವಾಳ ಬಯಲಾಯ್ತು ಎಂಬ ಭಯದಲ್ಲಿ ಕೋಪಗೊಂಡ ಚೌಡೇಶ ಶ್ವೇತಾಳ ಕ’ತ್ತು’ ಹಿಸುಕಿ ತನ್ನ ಮಡದಿಯ ಜೀ’ವ’ ತೆಗೆದಿದ್ದಾನೆ. ತಾನು ಮಾಡಿದ ಘನಂದಾರಿ ಕೆಲಸ ಗೊತ್ತಾಗಬಾರದು ಎಂದು ಅನಾರೋಗ್ಯದ ಕಥೆ ಹೇಳಿ ಸತ್ಯವನ್ನು ಮುಚ್ಚಿಹಾಕಲು ಪ್ರಯತ್ನ ಪಟ್ಟ. ಚೌಡೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ನೆ ಲಮಂಗಲ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ರಾಜೀವ್ ಎ ಮತ್ತು ತಂಡ ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.