KL Rahul ಸ್ನೇಹಿತರೆ, ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಐಪಿಎಲ್ ಹಾಗೂ ಇಂಡಿಯನ್ ಕ್ರಿಕೆಟ್ ಟೀಮ್ ನಲ್ಲಿ ಆರಂಭಿಕ ಆಟಗಾರನಾಗಿ ಸ್ಥಾನವನ್ನು ಪಡೆದು ಗುರುತಿಸಿಕೊಂಡಿರುವಂತಹ ಕನ್ನಡಿಗ ಕೆ ಎಲ್ ರಾಹುಲ್(KL Rahul) ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಆಥಿಯ ಶೆಟ್ಟಿ (Athiya Shetty) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮದುವೆಯಾದ ನಂತರ ಸಾಕಷ್ಟು ಗುಡಿ ಗೋಪುರ ದೇವಸ್ಥಾನಗಳನ್ನು ಸುತ್ತಿರುವಂತಹ ರಾಹುಲ್ ಅವರು ಕಳೆದ ಶನಿವಾರ ಬೆಂಗಳೂರಿನ ಗ್ರಾಮಾಂತರದಲ್ಲಿ ಇರುವಂತಹ ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಹೌದು ಸ್ನೇಹಿತರೆ ಸುಬ್ರಹ್ಮಣ್ಯ ಸ್ವಾಮಿಯ ಭಕ್ತನಾಗಿರುವಂತಹ ಕೆಎಲ್ ರಾಹುಲ್ ಆಗಾಗ ಧರ್ಮಸ್ಥಳ(Dharmasthala) ಮತ್ತು ಕುಕ್ಕೆ ಸುಬ್ರಮಣ್ಯ(Kukke Subramanya) ದೇವಸ್ಥಾನದಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ.
ಅದರಂತೆ ಬಿಡುವು ಮಾಡಿಕೊಂಡು ತಮ್ಮ ಪತ್ನಿಯೊಂದಿಗೆ ಶನಿವಾರ ಸುಮಾರು 12:45 ಸಮಯಕ್ಕೆ ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೆ(Gaati subramanya temple) ಬಂದು ದೇವರ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ಅತಿ ದೊಡ್ಡ ಸ್ಟಾರ್ ಸೆಲೆಬ್ರಿಟಿ ಆದರೂ ಸಹ ಇವರಿಬ್ಬರಲ್ಲಿ ಇರುವಂತಹ ದೈವ ಭಕ್ತಿ ಕಂಡು ಕನ್ನಡಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಇನ್ನು ಏಷ್ಯಾ ಕಪ್ ಟೂರ್ನಿಯಲ್ಲಿ (Asia Cup) ಆಡಬೇಕಿದ್ದಂತಹ ಕೆಎಲ್ ರಾಹುಲ್ ಆರಂಭದ ಎರಡು ಪಂದ್ಯಗಳಿಂದ ಹೊರಗಿದ್ದು ಭಾರತ ಮತ್ತು ಪಾಕಿಸ್ತಾನ ಹಾಗೂ ಭಾರತ ಮತ್ತು ನೇಪಾಳ ಎರಡೂ ಪಂದ್ಯಗಳಲ್ಲಿ ಕೆ ಎಲ್ ರಾಹುಲ್(KL Rahul) ಗೈರಾಗುವುದಾಗಿ ಮೊದಲೇ ತಿಳಿಸಿದರು. ಎಲ್ಲ ಒತ್ತಡಗಳ ನಡುವೆ ತಮ್ಮ ಪತ್ನಿ ಹಾಗೂ ಕುಟುಂಬಕ್ಕೆ ಸಮಯ ನಡೆದಿರುವಂತಹ ಕೆ ಎಲ್ ರಾಹುಲ್ ಪೂಜಾ ಅನುಷ್ಠಾನಗಳಲ್ಲಿ ಭಾಗಿಯಾಗುತ್ತಾ, ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ.