Kannada News: ಉಚಿತ ವಿದ್ಯುತ್ ಬೆನ್ನಲ್ಲೇ ಬೆಲೆ ಏರಿಕೆ ಶಾ’ ಕ್! ಏನೆಲ್ಲ ಬೆಲೆ ಏರಿಕೆ ಆಗುತ್ತೆ ಗೊತ್ತಾ?

Kannada News ಈಗಾಗಲೇ ಕಾಂಗ್ರೆಸ್ ಸರ್ಕಾರ(Congress Govt) ಅಧಿಕಾರಕ್ಕೆ ಬಂದಿದ್ದು ಪ್ರತಿಯೊಬ್ಬ ಕೂಡ ಕಾಂಗ್ರೆಸ್ ಸರ್ಕಾರದ ಉಚಿತ ವಿದ್ಯುತ್ ಯೋಜನೆ ಆಗಿರುವಂತಹ ಗ್ರಹ ಜಾತಿ ಯೋಜನೆಯ ಲಾಭವನ್ನು ಪಡೆಯಲು ಕಾತರರಾಗಿ ನಿಂತಿದ್ದಾರೆ. ಬೆಲೆ ಏರಿಕೆಯ ಸಂದರ್ಭದಲ್ಲಿ ಉಚಿತ ವಿದ್ಯುತ್ ಸಿಗುತ್ತದೆ ಎನ್ನುವ ಖುಷಿ ಕೂಡ ಅವರಲ್ಲಿದೆ.

200 ಯೂನಿಟ್ ಉಚಿತ ವಿದ್ಯುತ್ ಯೋಜನೆಯ ಬಗ್ಗೆ ಈಗಾಗಲೇ ಜನರಿಗೆ ಸರಿಯಾದ ರೂಪುರೇಷೆಗಳನ್ನು ಕೂಡ ನೀಡಲಾಗಿದ್ದು ಆ ರೀತಿಯಲ್ಲಿ ಅರ್ಹ ಜನರಿಗೆ ಮಾತ್ರ ಯೋಜನೆಯನ್ನು ನೀಡಲಾಗುವುದು ಎಂಬುದಾಗಿ ಸರ್ಕಾರ ತಿಳಿಸಿದೆ. ಈ ಕಡೆ ವಿದ್ಯುತ್ ಉಚಿತವಾಗಿ ಸಿಗುತ್ತಿದ್ದರೆ ಆ ಕಡೆ ಉಳಿಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದು ಕಂಡುಬರುತ್ತದೆ.

ಹೌದು ಈಗಾಗಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಅವರೇ ಪರೋಕ್ಷವಾಗಿ ಸೂಚಿಸಿರುವಂತೆ ಬೆಂಗಳೂರು ಜಲ ನಿಯಂತ್ರಣ ಮಂಡಳಿ ಸಾಕಷ್ಟು ವರ್ಷಗಳಿಂದ ಕುಡಿಯುವ ನೀರಿನ ದರವನ್ನು ಪರಿಷ್ಕರಣೆ ಮಾಡಿಲ್ಲ ಹೀಗಾಗಿ ಅದರ ಕುರಿತಂತೆ ಕೂಡ ಸಮಾಲೋಚನೆ ನಡೆಸಿ ಸರಿಯಾದ ದರವನ್ನು ಪರಿಷ್ಕರಣೆ ಮಾಡಿ ಏರಿಕೆ ಮಾಡಬೇಕು ಎಂಬುದಾಗಿ ಹೇಳಿದ್ದಾರೆ.

ಮತ್ತೊಂದು ಕಡೆ ಹಾಲಿನ ಬೆಲೆ ಕೂಡ ಈಗಾಗಲೇ ಏರಿಕೆಯಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಪ್ರತಿಯೊಬ್ಬರು ಕೂಡ ಕರೆಂಟ್ ಉಚಿತ ನೀಡುತ್ತಿದ್ದೀರಿ ಎಂಬ ಕಾರಣಕ್ಕಾಗಿ ಉಳಿದ ಬೆಲೆಗಳನ್ನು ಏರಿಕೆ ಮಾಡುತ್ತಿದ್ದೀರಾ ಎಂಬುದಾಗಿ ಪ್ರಶ್ನಿಸಲು ಪ್ರಾರಂಭಿಸಿದ್ದಾರೆ. ಈ ಬೆಲೆ ಏರಿಕೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment