ಕೊರೊನ ವೈರಸ್ ಅನ್ನೋದು ಚೀನಾದಿಂದ ಸೃಷ್ಟಿಯಾಗಿದ್ದು ಇದೀಗ ವಿವಿಧ ದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದೆ, ಇದು ಮಾರಕ ವೈರಸ್ ಆಗಿದ್ದು ಇದಕ್ಕೆ ಚಿಕಿತ್ಸೆಯ ಕಾರ್ಯ ಇನ್ನು ನಡೆಯುತ್ತಲೇ ಇದೆ. ಭಾರತದಲ್ಲಿ ಕೂಡ ಈ ವೈರಸ್ ಕೆಲವರಲ್ಲಿ ಪತ್ತೆ ಆಗಿದೆ ಎಂಬುದಾಗಿ ಈಗಾಗಲೇ ಸುದ್ದಿ ಮಾಧ್ಯಮಗಳು ಸೂಚಿಸಿವೆ, ಇದರ ಸಲುವಾಗಿ ಕೊರೊನ ಭಾರತದಲ್ಲಿ ಹರಡದಂತೆ ಪ್ರಧಾನಿ ನರೇದ್ರ ಮೋದಿಯವರು ಕೂಡ ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಂಡಿದ್ದಾರೆ.
ಅದೇ ನಿಟ್ಟಿನಲ್ಲಿ ಇದೀಗ ಇಸ್ರೇಲ್ ದೇಶದ ಪ್ರಧಾನಿಯವರು ಕೊರೊನ ವೈರಸ್ ವಿಚಾರಕ್ಕೆ ಭಾರತೀಯ ನಮಸ್ತೆಯನ್ನು ಬಳಸುವಂತೆ ತಮ್ಮ ದೇಶವಾಸಿಗಳಿಗೆ ಕರೆ ನೀಡಿದ್ದಾರೆ, ಹೌದು ಕೊರೊನ ವೈರಸ್ ಅನ್ನೋದು ಒಬ್ಬರಿಂದ ಒಬ್ಬರಿಗೆ ಹರಡುವಂತ ಸೋಂಕು ಆಗಿದೆ ಆದ್ದರಿಂದ ಶೇಕ್ ಹ್ಯಾಂಡ್ ಮಾಡುವ ಬದಲು ಭಾರತೀಯ ನಮಸ್ತೆ ಹೇಳುವುದು ಉತ್ತಮ ಅನ್ನೋದು ಅವರ ಅಭಿಪ್ರಾಯವಾಗಿದೆ.
ಅಷ್ಟೇ ಅಲ್ಲದೆ ಸ್ವತಃ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತೀಯ ನಸ್ಟ ಹೀಗಿರುತ್ತೆ ಅನ್ನೋದನ್ನ ತಮ್ಮ ದೇಶವಾಸಿಗಳಿಗೆ ತೋರಿಸಿಕೊಟ್ಟಿದ್ದಾರೆ.