Isha Ambani: ಇಶಾ ಅಂಬಾನಿಯವರ ಅತ್ಯಂತ ದುಬಾರಿ ಬಟ್ಟೆಯ ಬೆಲೆ ಕೇಳಿದ್ರೆ ಖಂಡಿತವಾಗಿ ಇವಳು ನಿಜವಾಗಲೂ ಅಂಬಾನಿ ಮಗಳೇ ಅಂತೀರಾ.

Isha Ambani ಇಡೀ ದೇಶದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವಂತಹ ಮುಕೇಶ್ ಅಂಬಾನಿ(Mukesh Ambani) ಅವರು ತಮ್ಮ ರಿಲಯನ್ಸ್ ಸಾಮ್ರಾಜ್ಯದ ಮೂಲಕ ಇಡೀ ದೇಶದಲ್ಲೇ ಸಾವಿರಾರು ಜನರಿಗೆ ಉದ್ಯೋಗವನ್ನು ನೀಡುವ ಕೆಲಸ ಮಾಡಿದ್ದಾರೆ ಎಂಬುದು ನಿಮಗೆ ತಿಳಿದಿರುವ ವಿಚಾರವಾಗಿದೆ.

ರಿಲಯನ್ಸ್(Reliance Industries) ಸಾಮ್ರಾಜ್ಯದ ವಾರಿಸುದಾರರಾಗಿ ಈಗಾಗಲೇ ಮುಕೇಶ್ ಅಂಬಾನಿ ಅವರ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳು ಕಾಣಿಸಿಕೊಳ್ಳುತ್ತಾರೆ ಅದರಲ್ಲಿ ಇಂದು ವಿಶೇಷವಾಗಿ ನಾವು ಅವರ ಮಗಳಾಗಿರುವಂತಹ ಇಶ ಅಂಬಾನಿ ಅವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಇಶಾ ಅಂಬಾನಿ(Isha Ambani) ಅವರು ರಿಲಯನ್ಸ್ ಸಂಸ್ಥೆಯ ಸಾಕಷ್ಟು ಸಂಘ ಸಂಸ್ಥೆಗಳನ್ನು ತಾವೇ ನಿರ್ವಹಿಸುತ್ತಿದ್ದು ತಂದೆಗೆ ತಕ್ಕ ಮಗಳಾಗಿ ಪ್ರತಿಯೊಂದು ಜವಾಬ್ದಾರಿಗಳನ್ನು ಕೂಡ ಯಶಸ್ವಿಯಾಗಿ ನಿಭಾಯಿಸುವ ಮೂಲಕ ತಮಗೆ ಕೊಟ್ಟಿರುವ ಜವಾಬ್ದಾರಿಯ ಮಹತ್ವವನ್ನು ಸಾಬೀತುಪಡಿಸಿದ್ದಾರೆ. ಇನ್ನು ಅವರು ತೊಟ್ಟಿರುವಂತಹ ಒಂದು ಬಟ್ಟೆಯ ಬೆಲೆ ಈಗ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಹೌದು ಇಶಾ ಅಂಬಾನಿಯವರು ಧರಿಸಿರುವ ಅಂತಹ ಲೆಹೆಂಗಾದ ಬೆಲೆ 90 ಕೋಟಿ ರೂಪಾಯಿ ಎಂಬುದಾಗಿ ತಿಳಿದು ಬಂದಿದ್ದು ಇಷ್ಟೊಂದು ದುಬಾರಿ ಮೌಲ್ಯದ ಲೆಹಂಗವನ್ನು ಭಾರತದಲ್ಲಿ ಬೇರೆ ಯಾರು ಕೂಡ ಧರಿಸಲು ಸಾಧ್ಯವೇ ಇಲ್ಲ ಎಂಬುದಾಗಿ ನೆಟ್ಟಿಗರು ಮಾತನಾಡಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment