ವಧೂ-ವರರ ನಡುವಿನ ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂಬ ಮಾತಿದೆ. ಹೆಣ್ಣು ಹೊನ್ನು ಮಣ್ಣು ಇವೆಲ್ಲವನ್ನೂ ಪಡೆಯೋಕೆ ಹಣೆಯಲ್ಲಿ ಬರೆದಿರಬೇಕು. ನಾವು ಎಷ್ಟೇ ಪ್ರಯತ್ನ ಪಟ್ಟರು ಕೊನೆಗೆ ಆ ದೇವರು ಏನು ಬರೆದಿರುತ್ತಾನೋ ಅದೇ ಆಗೋದು. ಕೊನೆಯ ಸಮಯದಲ್ಲಿ ಇನ್ನೇನು ಮದುವೆ ಆಗುತ್ತೆ ಅನ್ನೋ ಹಂತದಲ್ಲಿ ಮದುವೆ ನಿಂತು ಹೋಗುವ ಸಂದರ್ಭಗಳನ್ನು ನಾವು ಸಿನಿಮಾಗಳಲ್ಲಿ ನೋಡಿದ್ದೇವೆ ಆದರೆ ಇದು ನಿಜ ಜೀವನದಲ್ಲೂ ನಡೆಯುತ್ತೆ ಎಂಬ ವಿಷಯ ನಿಮಗೆಲ್ಲಾ ತಿಳಿದಿರಲಿ.
ಮದುವೆ ವಿಚಾರಕ್ಕೆ ಸಂಬಂಧಪಟ್ಟಂತೆ ಮುಂಬೈನಲ್ಲಿ ನಡೆದ ಒಂದು ಘಟನೆ ನಿಜಕ್ಕೂ ಊಹೆಗೂ ಮೀರಿದ್ದು. ಏಪ್ರಿಲ್ 22 ರಂದು ಬುಲ್ಧಾನಾ ಜಿಲ್ಲೆಯ ಮಲ್ಕಾಪುರ್ ಪಂಗ್ರಾ ಗ್ರಾಮದಲ್ಲಿ ಒಂದು ಮದುವೆ ನಿಶ್ಚಯವಾಗಿತ್ತು. ಶಾಸ್ತ್ರದ ಪ್ರಕಾರ ಒಳ್ಳೆಯ ದಿನವನ್ನು ನಿಗದಿ ಮಾಡಿ ಏಪ್ರಿಲ್ ೨೨ ಕ್ಕೆ ನಿಗದಿ ಪಡಿಸಲಾಗಿತ್ತು. ಏಪ್ರಿಲ್ 22 ರ ಸಂಜೆ ನಾಲ್ಕು ಗಂಟೆಗೆ ಮದುವೆ ಸಮಾರಂಭ ಶುರುವಾಗಬೇಕಿತ್ತು. ಹೆಣ್ಣಿನ ಕಡೆಯವರು ಎರಡು ಗಂಟೆಗೂ ಮುಂಚೆಯೇ ಮದುವೆ ಮಂಟಪದಲ್ಲಿ ಹಾಜರಿದ್ದರು.
ಆಶ್ಚರ್ಯದ ವಿಷಯವೇನೆಂದರೆ ಸಂಜೆ ನಾಲ್ಕು ಗಂಟೆಯಾದರೂ ಸಹ ಮದುವೆ ಗಂಡಿನ ಸುಳಿವೇ ಇಲ್ಲ. ಹೆಣ್ಣಿನ ಕಡೆಯವರು ಮದುವೆ ಸುಮಾರು ಎಂಟು ಗಂಟೆಯ ತನಕ ಮದುವೆ ಗಂಡು ಬರುತ್ತಾನೆ ಅಂತ ಕಾದು ಕುಳಿತಿದ್ದರು. ರಾತ್ರಿ ಎಂಟು ಗಂಟೆಯಾದರೂ ವರನ ಸುಳಿವೇ ಇಲ್ಲ. ಮಗಳ ಮದುವೆ ಅರ್ಧಕ್ಕೆ ನಿಂತು ಹೋದರೆ ಇನ್ನೊಬ್ಬ ಹುಡುಗ ಸಿಗುವುದು ತುಂಬಾ ಕಷ್ಟ ಅಂತ ತಂದೆ ತಾಯಿಗೆ ಚಿಂತೆ ಶುರುವಾಯ್ತು. ಆಗ ಆ ಹೆಣ್ಣಿನ ತಂದೆ ಒಂದು ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗುತ್ತಾರೆ.
ಅದೇ ಮಂಟಪದಲ್ಲಿ ಬೇರೆ ಹುಡುಗನೊಂದಿಗೆ ತನ್ನ ಮಗಳಿಗೆ ಮದುವೆ ಮಾಡಲು ತಂದೆ ಮುಂದಾಗುತ್ತಾರೆ. ಅದೇ ಮದುವೆ ಮಂಟಪದಲ್ಲಿ ಹಾಜರಿದ್ದ ತನ್ನ ಸಂಬಂಧಿಕ ಹುಡುಗನೊಬ್ಬನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿ ಕೊಡುತ್ತಾನೆ. ಮದುವೆ ಹೆಣ್ಣು ಕೂಡ ತಂದೆಯ ಮಾತಿಗೆ ಒಪ್ಪಿ ಮದುವೆಯಾಗಿ ಬಿಡುತ್ತಾಳೆ. ಇವರು ರಾತ್ರಿ ಎಂಟು ಗಂಟೆಗೆ ಮದುವೆ ಆಗಿದ್ದಾರೆ. ಮದುವೆ ಆಗುತ್ತಿದ್ದ ಕೆಲವೇ ಸಮಯದಲ್ಲಿ ಮದುವೆಯಾಗಬೇಕಿದ್ದ ವರ ಮದುವೆ ಮಂಟಪಕ್ಕೆ ಬಂದು ಬಿಡುತ್ತಾನೆ.
ಆ ಮದುವೆ ಆಗಬೇಕಿದ್ದ ವರ ಕಂಠಪೂರ್ತಿ ಕುಡಿದು ಮದುವೆ ಮಂಟಪಕ್ಕೆ ಬಂದು ಪಾನಮತ್ತಿನಲ್ಲಿದ್ದ. ತಾನು ಮದುವೆಯಾಗಬೇಕಿದ್ದ ವಧುವನ್ನು ಇನ್ನೊಬ್ಬನಿಗೆ ಯಾಕೆ ಕೊಟ್ಟು ಮದುವೆ ಮಾಡಿಸಿದ್ದರು ಎಂದು ರಂಪಾಟ ಮಾಡಲು ಶುರುಮಾಡಿದ. ಮಗಳ ಮದುವೆಗೆ ಎಲ್ಲಾ ಸಿದ್ಧತೆ ನಡೆದಿದ್ದು ನೀನು ಲೇಟಾಗಿ ಬಂದಿದ್ದಕ್ಕೆ ನಾವು ಬೇರೆ ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ದೇವೆ ಎಂದು ವಧುವಿನ ತಂದೆ ತಾಯಿ ಜೋರು ಮಾಡಿದ್ದಾರೆ. ಮದುವೆಗೆ ಅವನು ಲೇಟಾಗಿ ಬಂದಿದ್ದು ಒಳ್ಳೇದಾಯ್ತು ಇಲ್ಲವೆಂದರೆ ಪಾಪ ಆ ಹೆಣ್ಣು ಮಗಳು ಈ ಎಣ್ಣೆ ಗಾಡಿಯನ್ನು ಕಟ್ಟಿಕೊಂಡು ಜೀವನ ಪೂರ್ತಿ ಕಣ್ಣೀರಲ್ಲಿ ಕೈ ತೊಳೆಯಬೇಕಿತ್ತು. ಇದಕ್ಕೇ ಹೇಳೋದು ಆಗೋದೆಲ್ಲ ಒಳ್ಳೆಯದಕ್ಕೆ ಅಂತ