ಸರ್ಕಾರ ಆಧಾರ್ ಕಾರ್ಡ್ ( Adhar card) ಉಚಿತ ನವೀಕರಣ ದಿನಾಂಕವನ್ನು ವಿಸ್ತರಣೆ ಮಾಡಲಾಗಿದ್ದು, ಈ ಮೂಲಕ ಯಾರೆಲ್ಲಾ ಇನ್ನೂ ತಮ್ಮ ಆಧಾರ್ ಕಾರ್ಡ್ ಸರಿಪಡಿಸಿಕೊಂಡಿಲ್ಲವೋ ( adhar card Cheng ) ಅವರಿಗೆ ಉತ್ತಮ ಅವಕಾಶ ಇದಾಗಿದೆ. ಇದರಿಂದಾಗಿ ಸರ್ಕಾರ ಗ್ಯಾರಂಟಿ ಯೋಜನೆ ಸೇರಿದಂತೆ ಇನ್ನೂ ಹಲವಾರು ಯೋಜನೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು.
ಆಧಾರ್ ಕಾರ್ಡ್ ಅನ್ನು ಹತ್ತು ವರ್ಷಗಳ ಹಿಂದೆ ನೀಡಲ್ಪಟ್ಟಿದ್ದು ಈವರೆಗೂ ಅಪ್‌ಡೇಟ್ ಮಾಡಿಸದಿದ್ರೆ, ಆಧಾರ್‌ನಲ್ಲಿ ಏನಾದರೂ ತಪ್ಪುಗಳು ಇದ್ದರೆ. ಅಂದರೆ ತಪ್ಪಾದ ಹೆಸರು, ತಪ್ಪಾದ ವಿಳಾಸ ಇದ್ದರೆ ನವೀಕರಿಸಿಕೊಳ್ಳಬಹುದು. ಮ್ಮ ಆಧಾರ್ ಕಾರ್ಡ್ ಅನ್ನು ನೀವು myAdhaar ಪೋರ್ಟಲ್‌ನಲ್ಲಿ ಉಚಿತವಾಗಿ ನವೀಕರಿಸಬಹುದು.
ಉಚಿತ ನವೀಕರಣವು ಜೂನ್ 14 ರೊಳಗೆ ಮಾತ್ರ ಇತ್ತು. ಆ ನಂತರದಲ್ಲಿ ನೀವು ಪಾವತಿ ಮಾಡಿ ಈ ಸೇವೆ ಪಡೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಲಾಗಿತ್ತು. ಆದರೆ, ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 14,2023 ಕ್ಕೆ ವಿಸ್ತರಿಸಿದೆ.