ದುರಂತಗಳು ಹೇಗೆ ಯಾವ ರೂಪದಲ್ಲಿ ನಮ್ಮ ಕಣ್ಮುಂದೆ ಬರುತ್ತೆ ಅಂತ ಹೇಳೋಕೆ ಸಾಧ್ಯವಿಲ್ಲ. ಅದರಲ್ಲೂ ಈ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಅವರ ಪೋಷಕರ ಪಾಲಿಗಂತೂ ದುಸ್ವಪ್ನವಾಗಿ ಕಾಡುತ್ತೆ. ಇಲ್ಲೊಬ್ಬ 14 ವರ್ಷದ ವಿದ್ಯಾರ್ಥಿ ಆತ್ಮಹ’ತ್ಯೆ ಮಾಡಿಕೊಂಡು ಆತನ ಪೋಷಕರಿಗೆ ಜೀವನಪರ್ಯಂತ ದುಃಖವನ್ನು ನೀಡಿ ಹೋಗಿದ್ದಾನೆ.
ಈ ಘಟನೆ ನಡೆದಿದ್ದು ಮಂಗಳೂರಿನಲ್ಲಿ. ಮಂಗಳೂರಿನ ತಲಪಾಡಿಯ ಕೆಸಿ ರೋಡ್ ಬಳಿ ಇರುವ ಶಾರದಾ ವಿದ್ಯಾನಿಕೇತನ ಶಾಲೆಯ ಹಾಸ್ಟೆಲ್ ನಲ್ಲಿ ಈ ಘಟನೆ ವರದಿಯಾಗಿದೆ. ಆತ್ಮಹ’ತ್ಯೆ ಮಾಡಿಕೊಂಡ ವಿದ್ಯಾರ್ಥಿ 9ನೇ ತರಗತಿಯಲ್ಲಿ ಓದುತ್ತಿದ್ದ ಪೂರ್ವಜ್. ಕೇವಲ ಹದಿನಾಲ್ಕು ವರ್ಷ ವಯಸ್ಸಿನ ಈ ಹುಡುಗ ಇಂತಹ ನಿರ್ಧಾರವನ್ನು ತೆಗೆದುಕೊಂಡಿದ್ದು ಯಾಕೆ ಗೊತ್ತಾ?
ಜೂನ್ 12ರಂದು ಆತನ ತಾಯಿಯ ಹುಟ್ಟುಹಬ್ಬವಿತ್ತು. ಹಾಗಾಗಿ 11ರ ರಾತ್ರಿ ತಾಯಿಗೆ ವಿಶ್ ಮಾಡಬೇಕು ಎಂದು ಹಾಸ್ಟೆಲ್ ವಾರ್ಡನ್ ಬಳಿ ಮೊಬೈಲ್ ಫೋನನ್ನು ಕೇಳಿದ್ದಾನೆ. ಆದರೆ ವಿದ್ಯಾರ್ಥಿಗಳಿಗೆ ಮನೆಗೆ ಕರೆಮಾಡಲು ಅವಕಾಶವಿಲ್ಲದ ಕಾರಣ, ವಾರ್ಡನ್ ಫೋನ್ ನೀಡುವುದಕ್ಕೆ ನಿರಾಕರಿಸಿದ್ದಾರೆ. ಆದರೆ ವಿದ್ಯಾರ್ಥಿ ಅಮ್ಮನ ಬರ್ತಡೆಗೆ ವಿಶ್ ಮಾಡಬೇಕು ಅಂತ ಬಹಳ ಅಂಗಲಾಚಿ ಕೇಳಿಕೊಂಡಿದ್ದ. ಜೊತೆಗೆ ಆತನ ಮನೆಯಿಂದಲೂ ಫೋನ್ ಬಂದಿದ್ದು ವಾರ್ಡನ್ ವಿದ್ಯಾರ್ಥಿಗೆ ಫೋನ್ ಕೊಡಲು ನಿರಾಕರಿಸಿದ್ದರು ಎನ್ನಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಪೂರ್ವಜ್ ಎನ್ನುವ ವಿದ್ಯಾರ್ಥಿ ಬೆಂಗಳೂರಿನ ಹೊಸಕೋಟೆ ಮೂಲದವನು. ತಂದೆ-ತಾಯಿಯ ಇಚ್ಛೆಯಂತೆ ಮಂಗಳೂರಿನ ಶಾರದ ವಿದ್ಯಾನಿಕೇತನ ಶಾಲೆಯಲ್ಲಿ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಓದುತ್ತಿದ್ದ. ಅಮ್ಮನಿಗೆ ವಿಶ್ ಮಾಡಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಜೂನ್ 11ರ ರಾತ್ರಿ ನೇ’ಣುಬಿಗಿದುಕೊಂಡು ಇಹ ಲೋಕ ತ್ಯಜಿಸಿದ್ದಾನೆ. ಮರುದಿನ ಇದನ್ನು ನೋಡಿದ ಆತನ ಸ್ನೇಹಿತರು ಸಂಬಂಧಪಟ್ಟವರಿಗೆ ವಿಷಯ ತಿಳಿಸಿದ್ದಾರೆ. ಈ ಘಟನೆ ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪೂರ್ವಜ ತಾನು ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಇದರಲ್ಲಿ ’ಹ್ಯಾಪಿ ಬರ್ತಡೆ ಅಮ್ಮ,ಮಿಸ್ ಯು.. ನಾನು ಸಾ’ಯುತ್ತಿದ್ದೇನೆ. ಈ ಶಾಲೆಯಿಂದ ನನ್ನ ಫೀಸ್ ನ್ನು ವಾಪಸ್ ಪಡೆಯಿರಿ’ ಎಂದು ಪತ್ರ ಬರೆದು ಪೂರ್ವಜ್ ಇಹ ಲೋಕ ತ್ಯಜಿಸಿದ್ದಾನೆ. ಮಕ್ಕಳ ಮನಸ್ಸು ಎಷ್ಟು ಸೂಕ್ಷ್ಮವಾಗಿರುತ್ತದೆ ಅನ್ನೋದನ್ನ ಅರಿಯದೆ ಇದ್ದರೆ ಇಂತಹ ಅವಘಡಗಳು ಸಂಭವಿಸುತ್ತದೆ ಎಂಬುದನ್ನು ಪ್ರತಿಯೊಬ್ಬ ಪಾಲಕರೂ, ಶಿಕ್ಷಕರೂ ಗಮನಿಸಲೇಬೇಕು.