ಮೈಸೂರಿನ ಮದುವೆ ಮಂಟಪದಲ್ಲಿ ತಾಳಿ ಕಟ್ಟುವ ವೇಳೆ ಕುಸಿದು ಬಿದ್ದು ಹೈ ಡ್ರಾಮಾ ಮಾಡಿದ ವಧು. ಮುಂದೇನಾಯ್ತು ಇಲ್ಲಿದೆ ನೋಡಿ ವಧುವಿನ ಹೈ-ಡ್ರಾಮಾ ವಿಡಿಯೋ

ಭಾರತದಲ್ಲಿ ಮದುವೆಗೆ ಬಹಳ ಮಹತ್ವವಿದೆ. ಇಲ್ಲಿ ಗಂಡು ಹೆಣ್ಣು ಹಸೆಮಣೆ ಏರುವುದು ಎಂದರೆ ಹಬ್ಬವಿದ್ದಹಾಗೆ. ಒಂದು ಮದುವೆ ಎಂದರೆ ಅಲ್ಲಿ ಗಂಡಿನ ಕಡೆಯವರು ಹಾಗೂ ಹೆಣ್ಣಿನ ಕಡೆಯವರು ಸಂಭ್ರಮಿಸುತ್ತಾರೆ. ಪರಸ್ಪರ ಸ್ಪಂದಿಸುತ್ತಾರೆ. ಮದುವೆಯಾಗಿ ದಂಪತಿಗಳು ಉತ್ತಮ ಜೀವನ ನಡೆಸಲಿ ಎಂದು ಬಂದಿರುವ ನೂರಾರು ಜನರು ಹರಸುತ್ತಾರೆ. ಆದರೆ ಕೆಲವೊಮ್ಮೆ ವಿಧಿಯಾಟದ ಲೆಕ್ಕಾಚಾರವೇ ಬೇರೆಯಾಗಿರುತ್ತದೆ. ಮದುವೆ ಮನೆಯಲ್ಲಿಯೂ ಕೂಡ ಎಲ್ಲಾ ಸಂಭ್ರಮದ ನಡುವೆ ಮದುವೆ ನಡೆಯದೇ ಆ ಸಂಭ್ರಮಗಳೆಲ್ಲ ಮರೆಯಾಗಿ ನೋವಿನ ಚಾಯೆ ಮೂಡಬಹುದು. ಅಂತಹ ಒಂದು ಘಟನೆಗೆ ಸಾಕ್ಷಿಯಾಗಿದೆ ಮೈಸೂರು. ಬನ್ನಿ ಈ ಘಟನೆಯನ್ನು ಸವಿಸ್ತಾರವಾಗಿ ಹೇಳುತ್ತೇವೆ.

ಈ ಘಟನೆ ನಡೆದಿದ್ದು ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ. ಮೈಸೂರಿನ ಸುಣ್ಣದಕೇರಿ ಯುವತಿ ಹಾಗೂ ಹೆಚ್ ಡಿ ಕೋಟೆ ತಾಲೂಕಿನ ಯುವಕನ ಜೊತೆ ಅದ್ದೂರಿಯಾಗಿ ಮದುವೆ ನಿಶ್ಚಯವಾಗಿತ್ತು. ಅಂದುಕೊಂಡಂತೆ ವಧು-ವರರನ್ನು ಹರಸಲು ಎರಡು ಮನೆಯ ನೆಂಟರು, ಬಂಧುಬಳಗದವರು ಉಪಸ್ಥಿತರಿದ್ದರು. ಇನ್ನೇನು ಮದುವೆ ನಡೆದು ಹೋಗುತ್ತೆ, ಗಟ್ಟಿಮೇಳ ಭಾರಿಸಿಯೇ ಬಿಡುತ್ತಾರೆ ಅನ್ನುವಷ್ಟರಲ್ಲಿ ವಧುವಿನ ಒಂದು ನಿರ್ಣಯ ಮದುವೆಯನ್ನು ಅಲ್ಲೋಲ ಕಲ್ಲೋಲವಾಗಿದೆ.

ಹಸೆಮಣೆಯೇರಿದ ವಧು-ವರರು ಮದುವೆಯಾಗಬೇಕು ಇನ್ನೇನು ಮದುಮಗ ಮದುಮಗಳಿಗೆ ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಯುವತಿ ಸೀನ್ ಕ್ರಿಯೇಟ್ ಮಾಡಿದ್ದಾಳೆ. ಹುಡುಗ ತಾಳಿ ಕಟ್ಟಲು ಮುಂದಾದಾಗ ಹುಡುಗಿಯು ತಲೆಸುತ್ತು ಬಿದ್ದಂತೆ ನಟಿಸಿದ್ದಾಳೆ. ಅಯ್ಯೋ ಮದುಮಗಳಿಗೆ ಇದೇನಾಗಿ ಹೋಯಿತು ಎಂದು ಎಲ್ಲರೂ ಬಂದು ನೋಡುವಷ್ಟರಲ್ಲಿ ಎಚ್ಚರಾದ ಹುಡುಗಿ ನನಗೆ ಈತನ ಜೊತೆ ಮದುವೆ ಬೇಡ ತಾನು ಬೇರೆಯವನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿ ರಾದ್ಧಾಂತ ಮಾಡಿದ್ದಾಳೆ.

ವಧುವಿನ ಈ ಮಾತನ್ನು ಕೇಳಿ ವರನ ಮನೆಯವರು ಅಷ್ಟೇ ಅಲ್ಲ ಹುಡುಗಿಯ ಮನೆಯವರು ಶಾಕ್ ಆಗಿದ್ದಾರೆ. ಆದರೆ ಹುಡುಗಿ ಮಾತ್ರ ನಾನು ಇವನನ್ನು ಮದುವೆಯಾಗುವುದಿಲ್ಲ ನಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವುದು ಎಂದು ಪಟ್ಟುಹಿಡಿದು ಕುಳಿತಿದ್ದಳು. ಆಕೆ ತನ್ನ ಪಕ್ಕದ ಮನೆಯ ಹುಡುಗನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ಮೊದಲೇ ಆ ಹುಡುಗನಿಗೆ ಮದುವೆಯಾಗದಂತೆ ಈಕೆಯ ಪ್ರೇಯಸಿಯಿಂದ ಮೆಸೇಜ್ ಕೂಡ ಬಂದಿತ್ತಂತೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಹುಡುಗಿಯ ಬಳಿ ವಿಚಾರಣೆ ನಡೆಸಿದಾಗ ತನಗೂ ಈ ಮೆಸೇಜ್ ಗೆ ಯಾವ ಸಂಬಂಧವೂ ಇಲ್ಲ ಎಂದು ಕಾಗೆ ಹಾರಿಸಿದ್ದಳು. ಹುಡುಗಿ ಮಾತು ನಿಜ ಇರಬೇಕು ಎಂದು ಎರಡು ಮನೆಯವರು ಮದುವೆಗೆ ಮುಂದುವರೆದಿದ್ದಾರೆ ಹುಡುಗನ ಮನೆಯವರು ಬರೋಬ್ಬರಿ ಐದು ಲಕ್ಷ ಹಣವನ್ನು ಖರ್ಚು ಮಾಡಿ ಅದ್ದೂರಿಯಾಗಿ ಮದುವೆಯನ್ನು ನೆರವೇರಿಸಲು ಮುಂದಾಗಿದ್ದರು. ಅಷ್ಟರಲ್ಲಿ ಹುಡುಗಿ ತನ್ನ ಚಾಲಾಕಿ ಬುದ್ಧಿಯನ್ನ ತೋರಿಸಿದ್ದಾಳೆ.

ಮದುಮಗಳ ಈ ಪ್ರೇಮ ಪ್ರಕರಣ ಗೊತ್ತಾಗಿದ್ದೇ ತಡ ಹುಡುಗನ ಮನೆಯವರು ಹುಡುಗಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ತನಗೆ ಈ ಮದುವೆ ಇಷ್ಟವಿಲ್ಲ ಎಂಬುದಾಗಿದ್ದರೆ ಮೊದಲೇ ಹೇಳಬಹುದಿತ್ತು ಹೀಗೆ ಹಸೆಮಣೆಯೇರಿ ಇಷ್ಟು ಖರ್ಚುವೆಚ್ಚಗಳನ್ನು ಮಾಡಿದ ನಂತರ ಹೇಳಿದ್ದು ಸರಿಯಲ್ಲ ಎಂದು ವಧುವಿನ ಮನೆಯವರನ್ನು, ವರನ ಕಡೆಯವರು ನಿಂದಿಸಿದ್ದಾರೆ. ಅಲ್ಲದೇ ವರನ ಮನೆಯವರು ಮಧುವಿಗೆ ಚಿನ್ನ ರೇಷ್ಮೆ ಸೀರೆ ಮೊದಲಾದವುಗಳನ್ನು ನೀಡಿ ಲಕ್ಷ ಲಕ್ಷ ಖರ್ಚು ಮಾಡಿ ಮದುವೆಯನ್ನು ನೆರವೇರಿಸುತ್ತಿದ್ದರು. ಈ ಪ್ರಕರಣ ಪೊಲೀಸ್ ರವರೆಗೂ ಹೋಗಿದೆ.

ಪ್ರಕರಣವನ್ನು ಪರಾಮರ್ಶಿಸಿದ ಪೊಲೀಸರು ವರನ ಮನೆ ಅವರ ಪರವಾಗಿ ನಿಂತಿದ್ದು, ಮದುವೆ ಸ್ಥಳದಲ್ಲಿಯೇ ವರನ ಮನೆಯವರು ಕೊಟ್ಟ ಚಿನ್ನಾಭರಣಗಳನ್ನು ವಾಪಸ್ ಮಾಡುವಂತೆ ಹೇಳಿದ್ದಾರೆ. ಪೊಲೀಸ್ ಅವರ ಮುಂದೆ ವರನ ಕುಟುಂಬದವರು ವಧುವನ್ನಾ ತರಾಟೆಗೆ ತೆಗೆದುಕೊಂಡಿದ್ದಾರೆ. ನೀನು ಮದುವೆಗೂ ಮುಂಚೆ ಬೇರೆಯವರ ಜೊತೆ ಲವ್ ಮಾಡ್ತಿದ್ದೀನಿ ಅಂತ ಹೇಳಿದ್ರೆ ಮದುವೆಗೆ ಲಕ್ಷಾಂತರ ರೂಪಾಯಿಗಳನ್ನಾ ಖರ್ಚು ಮಾಡೋದು ಉಳಿತಿತ್ತು. ಈಗ ಮದುವೆಗೆ ಖರ್ಚು ಮಾಡಿದ ಲಕ್ಷಾಂತರ ರೂಪಾಯಿಗಳನ್ನು ನಿನ್ನ ಅಪ್ಪ ಅಮ್ಮನ ಹತ್ರ ಕೊಡೋಕೆ ಹೇಳು ಅಂತ ವರನ ಕುಟುಂಬದವರು ಗದರಿದ್ದಾರೆ. ವರನ ಮನೆಯವರು ತಾವು ಕೊಟ್ಟ ಚಿನ್ನಾಭರಣಗಳನ್ನು ಹಿಂಪಡೆದು ತಾವು ಮದುವೆಗೆ ಖರ್ಚು ಮಾಡಿದಷ್ಟು ಹಣವನ್ನು ನೀಡಬೇಕೆಂದು ಹೇಳಿ ಸ್ಥಳದಿಂದ ನಿರ್ಗಮಿಸಿದ್ದಾರೆ. ಒಟ್ಟಿನಲ್ಲಿ ಹಸೆಮಣೆ ಏರಿದ ಹುಡುಗಿಯ ಹುಚ್ಚಾಟಕ್ಕೆ ಎರಡು ಮನೆಯವರೂ ತಲೆತಗ್ಗಿಸುವಂತಾಗಿದೆ!

Leave a Comment