ಗಂಡು-ಗಂಡು, ಗಂಡು ಹೆಣ್ಣು ಮತ್ತು ಹೆಣ್ಣು- ಹೆಣ್ಣು ಪ್ರೀತಿಸಿ ಮದುವೆಯಾಗಿರುವ ಘಟನೆಗಳನ್ನು ನಾವು ಕೇಳಿದ್ದೇವೆ ಆದರೆ ಮೊದಲ ಬಾರಿ ಒಂದು ಹೆಣ್ಣು ತನ್ನನ್ನು ತಾನೇ ಪ್ರೀತಿಸಿ ಸ್ವಯಂ ವಿವಾಹವಾಗಿ ಹನಿಮೂನ್ ಗೆ ತೆರಳುತ್ತಿರುವ ವಿಷಯ ಮೊದಲ ಬಾರಿಗೆ ಕೇಳಿ ಬರುತ್ತಿದೆ. ನಮ್ಮ ಭಾರತ ದೇಶದಲ್ಲಿ ಇಂಥ ಘಟನೆಗಳು ನಡೆಯುವುದು ತುಂಬಾ ವಿರಳ. ಆಧುನಿಕ ಯುಗದಲ್ಲಿ ಇನ್ನೂ ಏನೇನು ಹೊಸ ಹೊಸ ಪದ್ಧತಿಗಳು ಬರುತ್ತೋ ಆ ಪರಮಾತ್ಮನಿಗೇ ಗೊತ್ತು.
ಗುಜರಾತ್ ಮೂಲದ ಕ್ಷಮಾ ಬಿಂದು ಎಂಬ 24 ವರ್ಷದ ಯುವತಿಯ ರೋಚಕ ಕಥೆಯಿದು. ಶ್ರಮಬಿಂದು ಎಂಬ ಈ ಗುಜರಾತಿನ ಯುವತಿ ತನ್ನನ್ನು ತಾನು ಪ್ರೀತಿ ಮಾಡುವ ಮೂಲಕ ಸ್ವಯಂ ಪ್ರೀತಿಯಲ್ಲಿ ಮುಳುಗಿದ್ದಾಳೆ. ಈಕೆ ಸಮಾಜಶಾಸ್ತ್ರದಲ್ಲಿ ಪದವಿ ಪಡೆದು ಇದೀಗ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಪ್ರತಿಯೊಬ್ಬ ಮಹಿಳೆಯೂ ಮದುವೆಯಾಗಲು ಬಯಸುತ್ತಾಳೆ. ಆದರೆ ಹೆಂಡತಿ ಆಗಲು ಬಯಸುವುದಿಲ್ಲ ಎಂದು ಸಿನಿಮಾದಲ್ಲಿ ಹೇಳಿದ ಮಾತು ಈಕೆಯನ್ನು ತುಂಬಾ ದಿನದಿಂದ ಕಾಡುತ್ತಿತ್ತು.
ಈ ವಿಷಯದ ಬಗ್ಗೆ ಕ್ಷಮಾ ತುಂಬಾ ತಲೆಕೆಡಿಸಿಕೊಂಡಿದ್ದಳು. ಇಂಟರ್ನೆಟ್ ನಲ್ಲಿ ಈ ವಿಷಯದ ಕುರಿತಾಗಿ ಹುಡುಕಾಟ ನಡೆಸಿದರು ಭಾರತ ದೇಶದಲ್ಲಿ ಯಾವುದೇ ಹುಡುಗಿ ಸಹ ತನ್ನನ್ನು ತಾನು ಪ್ರೀತಿಸಿ ಮದುವೆಯಾದ ಉದಾಹರಣೆ ಈಕೆಗೆ ಎಲ್ಲಿಯೂ ಕೂಡ ಸಿಗಲಿಲ್ಲ. ಮದುವೆಯನ್ನು ಪವಿತ್ರವೆಂದು ನಂಬುವ ನಮ್ಮ ದೇಶದಲ್ಲಿ ಸ್ವಯಂ ಪ್ರೀತಿಯಿಂದ ತಮ್ಮನ್ನೇ ತಾವು ಸ್ವಯಂ ವಿವಾಹವಾಗಿರುವ ಒಂದು ಉದಾಹರಣೆ ಸಿಗದೇ ಇದ್ದಿದ್ದಕ್ಕೆ ಕ್ಷಮಾ ಗೆ ತುಂಬಾ ಬೇಸರವಾಗುತ್ತೆ. ಆಗ ತಾನೇ ಯಾಕೆ ಮೊದಲಿಗಳಾಗಬಾರದು ಅಂತ ಯೋಚನೆ ಮಾಡುತ್ತಾಳೆ. ಕ್ಷಮಾ ಈಗ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ.
ಇದೇ ಜೂನ್ ತಿಂಗಳಿನ 11 ನೇ ತಾರೀಕಿನಂದು ಕ್ಷಮಾ ತನ್ನನ್ನು ತಾನೇ ಮದುವೆಯಾಗಲಿದ್ದಾಳೆ ಮತ್ತು ಎರಡು ವಾರಗಳ ಕಾಲ ಗೋವಾಗೆ ಒಬ್ಬಳೇ ಹನಿಮೂನ್ ಗೆಂದು ಹೋಗುತ್ತಿದ್ದಾಳೆ. ಕ್ಷಮಾ ಬಿಂದುವಿನ ಮದುವೆ ಫೆರಾಸ್, ಸಿಂಧೂರ್ ಸೇರಿದಂತೆ ಸಾಂಪ್ರದಾಯಿಕ ಶೈಲಿಯಲ್ಲಿ ನಡೆಯಲಿದೆ. ಆದರೆ ಆಶ್ಚರ್ಯಕರ ವಿಷಯವೆಂದರೆ ಈ ಮದುವೆಯಲ್ಲಿ ಮದುವೆಗೆಂದು ಇರುವುದಿಲ್ಲ. “ನನ್ನ ಹದಿಹರೆಯದಿಂದಲೂ, ನಾನು ಎಂದಿಗೂ ಮದುವೆಯಾಗಲು ಬಯಸಲಿಲ್ಲ. ಆದರೆ ನಾನು ವಧು ಆಗಲು ಬಯಸಿದ್ದೆ. ಹಾಗಾಗಿ ನಾನೇ ಮದುವೆಯಾಗಲು ನಿರ್ಧರಿಸಿದ್ದೇನೆ. ಇದನ್ನು ಸೊಲೊಗಮಿ ಎಂದು ಕರೆಯಲಾಗುತ್ತದೆ,” ಎಂದು ಸ್ವತಃ ಕ್ಷಮಾ ಹೇಳಿಕೊಂಡಿದ್ದಾಳೆ.
ಹೆಣ್ಣು ಗಂಡನ್ನೇ ಮದುವೆಯಾಗಬೇಕು ಎಂಬ ಸಂಪ್ರದಾಯವನ್ನು ಮುರಿದು ಹಾಕಿ, ಸ್ವಯಂ ಪ್ರೀತಿಯ ಜೊತೆ ಮದುವೆ ಎಂಬ ಹೊಸ ಸಂಪ್ರದಾಯವನ್ನು ಈಕೆ ಪರಿಚಯಿಸಿದ್ದಾಳೆ. ಕ್ಷಮಾಳ ಈ ಹೊಸ ನಿರ್ಧಾರವನ್ನು ಅವಳ ತಂದೆ ತಾಯಿ ಒಪ್ಪಿಕೊಂಡಿದ್ದು ಕ್ಷಮಾ ಗೆ ತುಂಬಾ ಖುಷಿ ನೀಡಿದೆ. ಹಲವಾರು ಜನ ಶಮಾಳ ಈ ಒಂದು ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ.ಆದರೆ ಕ್ಷಮಾ ಇದಕ್ಕೆಲ್ಲಾ ನಾನು ತಲೆಕೆಡಿಸಿಕೊಳ್ಳುವುದಿಲ್ಲ ನನಗೆ ನನ್ನ ಖುಷಿಯೇ ನನಗೆ ಜೀವನ ಎಂದು ಹೇಳಿಕೊಂಡಿದ್ದಾಳೆ.
ಈಕೆಯ ಸ್ವಯಂ ವಿವಾಹ ಪತ್ರಿಕೆಯನ್ನು ಕೇವಲ ಹದಿನೈದು ಜನ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಕಳುಹಿಸಲಾಗಿದೆ. ಜೂನ್ 9 ನೇ ತಾರೀಕಿನಿಂದ ಈಕೆಯ ಮೆಹೆಂದಿ ಕಾರ್ಯಕ್ರಮ ಮತ್ತು ಮದುವೆ ಸಮಾರಂಭ ಶುರುವಾಗಲಿದೆ. ಇನ್ನೊಂದು ಸರ್ ಪ್ರೈಸಿಂಗ್ ವಿಷಯವೇನೆಂದರೆ ಮದುವೆಯಾದ ನಂತರ ಈಕೆ ಒಬ್ಬಳೇ ಹನಿಮೂನಿಗೆಂದು ಗೋವಾಗೆ ಹೋಗಿ ಎಂಜಾಯ್ ಮಾಡಲಿದ್ದಾಳೆ. ಒಟ್ಟಿನಲ್ಲಿ ಸ್ವಯಂ ವಿವಾಹ ಎಂಬ ಹೊಸ ಪದ್ದತಿಯನ್ನು ಇದೀಗ ಭಾರತದಲ್ಲಿ ಪರಿಚಯಿಸಿರುವ ಮೊದಲ ಮಹಿಳೆ ಎಂಬ ಕ್ರೆಡಿಟ್ಸ್ ಕ್ಷಮಾ ಗೆ ಸಲ್ಲುತ್ತದೆ.