Gruja Lakshmi Scheme: ಮಹಿಳೆಯರು ಕಾತುರದಿಂದ ಕಾಯುತ್ತಿರುವ ಯೋಜನೆ ಎಂದರೆ ಅದು ಗೃಹಲಕ್ಷ್ಮಿ (Gruha lakshmi) ಯೋಜನೆ. ಗೃಹಲಕ್ಷ್ಮಿ ಯೋಜನೆಗೆ ಜೂನ್ 16ರಿಂದ ಅರ್ಜಿ ಪ್ರಾರಂಭಗೊಳ್ಳುತ್ತಿದೆ. ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಸಿ ಕೊಡುತ್ತೇವೆ.
ಜೂನ್ 16ರಿಂದ ಅರ್ಜಿ ಸಲ್ಲಿಕೆ ಪ್ರಾರಂಭಗೊಂಡು ಜುಲೈ 16ಕ್ಕೆ ಕೊನೆಯಾಗುತ್ತದೆ ನಂತರ ಒಂದು ತಿಂಗಳ ಕಾಲ ದಾಖಲಾತಿ ಪರಿಶೀಲನೆ ನಡೆಸಿ ಅಗಸ್ಟ್ 16ರಂದು ಈ ಯೋಜನೆ ಜಾರಿಗೆ ತರಬೇಕು ಎಂದು ಸಿದ್ದರಾಮಯ್ಯ ಅವರು ಅಂದುಕೊಂಡಿದ್ದಾರೆ. ಈ ಕಾರ್ಯವನ್ನು ಎರಡು ತಿಂಗಳಲ್ಲಿ ಮುಗಿಸಬೇಕಾದ ಕಾರಣ ಕೃಷಿ ಇಲಾಖೆ ಹಾಗೂ ಇನ್ನಿತರ ಇಲಾಖೆಗಳು ಸರ್ಕಾರದ ಜೊತೆ ಕೈ ಜೋಡಿಸಿದೆ ಹಾಗೂ ಯೋಜನೆಗೆ ಅರ್ಜಿ ಸಲ್ಲಿಸಲು ಸಿಬ್ಬಂದಿಗಳಿಗೆ ತರಬೇತಿ ನೀಡಬೇಕು ಎಂಬುದಾಗಿ ನಿರ್ಧರಿಸಿದೆ.
ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ ಏನೆಂದರೆ ಅರ್ಜಿ ಸಲ್ಲಿಸಲು ಕಚೇರಿಗೆ ಅಲೆಯಬೇಕಂತಿಲ್ಲ ಮನೆ ಮನೆಗೆ ಬಂದು ಅರ್ಜಿಯನ್ನು ಸ್ವೀಕಾರ ಮಾಡುತ್ತಾರೆ. ಸೇವಾ ಸಿಂಧು ಕೇಂದ್ರಗಳು, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಇವುಗಳಲ್ಲಿ ಕೂಡ ಅರ್ಜಿಯನ್ನು ಸಲ್ಲಿಸಬಹುದು.
ಮತ್ತೊಂದು ವಿಷಯವೇನೆಂದರೆ ಕಂದಾಯ ಇಲಾಖೆಯಲ್ಲಿ ಪಿಂಚಣಿ ಪಡೆಯುತ್ತಿರುವ ಮಹಿಳೆಯರಿಗೆ ಗ್ರಹಲಕ್ಷ್ಮಿ ಯೋಜನೆ ಸಿಗುವುದಿಲ್ಲ ಎಂದು ಕೆಲವು ಕಡೆ ಮಾತನಾಡುತ್ತಿದ್ದಾರೆ ಇದು ಬರೀ ಅಪಪ್ರಚಾರ ಎಂದು ಹೇಳುತ್ತಿದ್ದಾರೆ. ವಿಧವೆ ವೇತನ, ಅಂಗವಿಕಲ ವೇತನ, ವೃದ್ದಾಪ್ಯ ವೇತನ ಪಡೆಯುತ್ತಿರುವ ಮಹಿಳೆಯರಿಗೂ ಈ ಯೋಜನೆ ದೊರೆಯುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ Chiken Price: ಚಿಕನ್ ಪ್ರಿಯರಿಗೆ ಬಿಗ್ ಶಾಕ್, ಗಗನಕ್ಕೇರಿದ ಚಿಕನ್ ಬೆಲೆ, ಇಂದಿನ ರೆಟ್ ಹೀಗಿದೆ