ಅಗ್ನಿವೀರಳಾಗ ಬೇಕೆಂದು ಆಸೆ ಇಟ್ಟುಕೊಂಡ ಹುಡುಗಿ ದೈಹಿಕ ಅಭ್ಯಾಸ ಮಾಡುವಾಗ ಹೀಗಾಗತ್ತೆ ಅಂತ ಯಾರೂ ಊಹಿಸಿರಲಿಲ್ಲ!

ಬದುಕನ್ನ ನಾವು ಊಹಿಸಬಹುದು. ಬದುಕು ನಮಗೆ ಬೇಕಾದ ಹಾಗೆ ಕಟ್ಟಿಕೊಳ್ಳಬಹುದು. ಆದರೆ ಸಾವು ..ಅದನ್ನ ಮಾತ್ರ ಯಾರು ಊಹಿಸಲು ಸಾಧ್ಯವೇ ಇಲ್ಲ. ಯಾರಿಗೆ ಯಾವ ಸಮಯದಲ್ಲಿ ಸಾ’ವು ಸಂಭವಿಸಬಹುದು ಅಂತ ಊಹಿಸಿಕೊಳ್ಳೋಕು ಸಾಧ್ಯವಿಲ್ಲ ಅಲ್ವಾ!

ಆಕೆ ಉತ್ತರ ಪ್ರದೇಶದ ಮೈನಪುರಿಯ ಹುಡುಗಿ. ಬಹಳ ಆಸೆ ಕನಸುಗಳನ್ನು ಇಟ್ಟುಕೊಂಡಿದ್ದವಳು. ಅವಳ ಕನಸು ಕೂಡ ಅಂತಿಂಥದ್ದಲ್ಲ. ದೇಶ ಸೇವೆಯನ್ನು ಮಾಡುವುದಕ್ಕಾಗಿ ಹೊರಟು ನಿಂತಿದ್ದವಳು. ಆಕೆಯ ಹೆಸರು ಶ್ವೇತಾ ಚೌಹಾಣ್. ಅಲಾಲ ಪುರ ಗ್ರಾಮದ ನಿವಾಸಿ ಸುರೇಶ್ ಚೌಹಾಣ್ ಅವರ ಮಗಳು. ಆಕೆಯ ವಯಸ್ಸು 18. ಅಗ್ನಿವಿರ್ ನೇಮಕಾತಿಗಾಗಿ ಆಕೆ ಪ್ರಯತ್ನಿಸುತ್ತಿದ್ದಳು.

ಅಗ್ನಿವೀರ್ ನೇಮಕಾತಿಗೋಸ್ಕರ ಹಲವಾರು ವಿದ್ಯಾರ್ಥಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಶ್ವೇತಾ ಚೌಹಾಣ್ ಕೂಡ ಒಬ್ಬರು. ಇದಕ್ಕಾಗಿ ಶತಾಯಗತಾಯ ಪ್ರಯತ್ನಿಸುತ್ತಿದ್ದಳು. ದೈಹಿಕ ಪರೀಕ್ಷೆಯ ತಯಾರಿಗೋಸ್ಕರ ಸಾಕಷ್ಟು ಶ್ರಮವಹಿಸುತ್ತಿದದ್ರು ಶ್ವೇತಾ. ಭಾನುವಾರವೂ ಕೂಡ ಬೆಳಿಗ್ಗೆ ದೈಹಿಕ ಪರೀಕ್ಷೆಯ ತಯಾರಿ ಮಾಡಲು ಓಡಲು ಹೋಗಿದ್ದಳು. ಹೀಗೆ ಓಡುತ್ತಿರುವ ಸಂದರ್ಭದಲ್ಲಿ ಪ್ರಜ್ಞೆತಪ್ಪಿ ಶ್ವೇತಾ ರೋಡಿನಲ್ಲಿ ಬಿದ್ದಿದ್ದಾಳೆ. ವಿಷಯ ತಿಳಿದ ಕೂಡಲೇ ಆಕೆಯ ಪಾಲಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರು ಆಕೆಯನ್ನು ಪರೀಕ್ಷಿಸಿ ಈಗಾಗಲೇ ಮೃ’ತಪಟ್ಟಿರುವುದಾಗಿ ತಿಳಿಸಿದ್ದಾರೆ.

ಇನ್ನು ಈ ಸಂಬಂಧ ಮಗಳ ಮರಣೋತ್ತರ ಪರೀಕ್ಷೆಯನ್ನಾಗಲಿ, ಕಾನೂನಿನ ಕ್ರಮಗಳನ್ನಾಗಲಿ ಆಕೆಯ ಪಾಲಕರು ಕೈಗೊಂಡಿಲ್ಲ. ನೇರವಾಗಿ ಶ್ವೇತಾ ಅವರ ಮೃತ ದೇಹವನ್ನು ಸುಟ್ಟು ಅಂತ್ಯ ಸಂಸ್ಕಾರ ಮಾಡಿದ್ದಾರೆ. ಶ್ವೇತಾ ಮನೆಯಲ್ಲಿ ಹಿರಿಯ ಪುತ್ರಿಯಾಗಿದ್ದರು. ಇವರಿಗೆ ಒಬ್ಬಳು ಸಹೋದರಿ ಹಾಗೂ ಸಹೋದರ ಇದ್ದಾರೆ. ಇದೀಗ ಇವರನ್ನೆಲ್ಲಾ ಅಗಲಿದ್ಡಾರೆ ಶ್ವೇತಾ ಚೌಹಾಣ್. ಇವರ ಸಾ’ವನ್ನು ಮನೆಯವರಿಗೆ ಅರಗಿಸಿಕೊಳ್ಳುವುದಕ್ಕೂ ಆಗುತ್ತಿಲ್ಲ!


ಇನ್ನು ಶ್ವೇತಾ ದೇಶ ಸೇವೆ ಸಲ್ಲಿಸುವುದಕ್ಕಾಗಿ ದೈಹಿಕ ಪರೀಕ್ಷೆ ತಯಾರಿಗಾಗಿ ನಿರಂತರವಾಗಿ ಓಡುವ ಅಭ್ಯಾಸ ಮಾಡುತ್ತಿದ್ದರು. ಇದಕ್ಕಾಗಿ ದಿನವೂ ಹೆಚ್ಚಾಗಿ ಪ್ರಾಕ್ಟಿಸ್ ಮಾಡುತ್ತಿದ್ದರು. ಮನೆಯ ಬಳಿಯಿರುವ ಘಿರೋರ್ ಬೈಪಾಸ್ ರಸ್ತೆಗೆ ಓಡಲು ಹೋಗುತ್ತಿದ್ದರು ಶ್ವೇತಾ ಚೌಹಾಣ್. ಈ ಭಾನುವಾರವೂ ಓಡುವ ಅಭ್ಯಾಸಕ್ಕೆ ಹೋಗಿದ್ದಳು.

ಆದರೆ, ಓಡುತ್ತಿರುವಾಗ ಏಕಾಏಕಿ ಬಿದ್ದು ಪ್ರಜ್ಞೆ ತಪ್ಪಿದ್ದಾಳೆ. ಅಲ್ಲಿಯೇ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿದೆ. ಶ್ವೇತಾಳನ್ನು ನೋಡಿ ಅವರ ಸುತ್ತ ಮುತ್ತಲಿನ ಮಕ್ಕಳು ಕೂಡ ಕಲಿಯುತ್ತಿದ್ದರು. ಆದರೆ ಸಾಧನೆಯನ್ನು ಮಾಡುವುದಕ್ಕೂ ಮೊದಲೇ ಶ್ವೇತಾ ಇಹ ಲೋಕ ತ್ಯಜಿಸಿದ್ದಾಳೆ. ಮಗಳ ಅಕಾಲಿಕ ಮರಣದಿಂದ ಶ್ವೇತಾ ಮನೆಯವರ ದುಃಖ ಮುಗಿಲುಮುಟ್ಟಿದೆ.

Leave a Comment