ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುತ್ತಿರುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

ಕೊರೋನಾ ವೈರಸ್ ನಿಂದ ಕೆಲಸ ಕಳೆದುಕೊಂಡು ಜೀವನ ನಡೆಸುವುದು ಕಷ್ಟವಾಗಿದೆ. ಹೀಗಿರುವಾಗ ಬಡಜನರಿಗೆ ಕೇಂದ್ರ ಸರ್ಕಾರದಿಂದ ಒಂದು ಸಿಹಿಸುದ್ದಿ ಇದೆ. ಯಾವುದೇ ಗ್ಯಾಸ್ ಸಿಲಿಂಡರ್ ಹೊಂದಿದವರಿಗೆ ಮೂರು ತಿಂಗಳು ಸಿಲಿಂಡರ್ ಗೆ ಆಗುವಷ್ಟು ಹಣವು ಅಕೌಂಟ್ ಗೆ ಬರಲಿದೆ. ಹಾಗಾದರೆ ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಕೇಂದ್ರ ಸರ್ಕಾರದಿಂದ ಒಳ್ಳೆಯ ಸುದ್ದಿ ಇದೆ. ಭಾರತ್ ಗ್ಯಾಸ್, ಇಂಡಿಯನ್ ಗ್ಯಾಸ್, ಎಚ್ಪಿ ಗ್ಯಾಸ್ ಹೀಗೆ ಯಾವುದಾದರೂ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಹೊಂದಿದವರಿಗೆ ಕೇಂದ್ರ ಸರ್ಕಾರ ಸಹಾಯ ಮಾಡಲಿದೆ. ಚೀನಾ ವೈರಸ್ ಕೊರೋನ ಮಾರಿಯಿಂದ ರಕ್ಷಿಸಲು ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲಾಕ್ ಡೌನ್ ಮಾಡಿದರು ಇದರಿಂದ ಬಡವರು ಕಷ್ಟಕ್ಕೆ ಸಿಲುಕಿಕೊಂಡರು. ಆಗ ಕೇಂದ್ರ ಸರ್ಕಾರ 3 ತಿಂಗಳುಗಳ ಕಾಲ ಅಡುಗೆ ಅನಿಲ ಸಿಲಿಂಡರ್ ಅನ್ನು ವಿತರಿಸುವುದಾಗಿ ಹೇಳಿದ್ದರು. 3 ತಿಂಗಳುಗಳ ಕಾಲ ಗ್ಯಾಸ್ ಸಿಲಿಂಡರ್ ಅನ್ನು ಉಚಿತವಾಗಿ ವಿತರಣೆ ಮಾಡುವುದಾಗಿ ಹೇಳಿದ್ದರು. 3 ತಿಂಗಳ ಹಣವನ್ನು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ರಾಹಕರಿಗೆ ಜಮಾವಣೆ ಮಾಡುವುದಾಗಿ ಹೇಳಿದ್ದರು. ಆದರೆ ಲಾಕ್ ಡೌನ್ ಸಮಯದಲ್ಲಿ ಕೆಲವರಿಗೆ ಯಾವುದೇ ಹಣ ಜಮಾವಣೆ ಆಗಿಲ್ಲ. ಕೆಲವು ಗ್ರಾಹಕರಿಗೆ ಮೊದಲ ಮತ್ತು ಎರಡನೇ ಕಂತು ಅಷ್ಟೇ ಜಮಾವಣೆ ಆಗಿದೆ. ಹಣ ಜಮಾವಣೆ ಆಗದೆ ಇರುವವರ ಸಲುವಾಗಿ ಕೇಂದ್ರ ಸರ್ಕಾರ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಸುಮಾರು 8 ಕೋಟಿ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ 9,079 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.

ಇದುವರೆಗೆ ಯಾರ ಆಕೌಂಟ್ ಗೆ ಹಣ ಜಮಾವಣೆ ಆಗಿಲ್ಲ ಅಂತಹವರನ್ನು ಪರಿಶೀಲಿಸಿ 3 ತಿಂಗಳಿನ ಉಚಿತ ಗ್ಯಾಸ್ ಸಿಲಿಂಡರ್ ಖರೀದಿ ಮಾಡುವಷ್ಟು ಹಣವನ್ನು ಅವರ ಖಾತೆಗೆ ಪಾವತಿ ಮಾಡಲಾಗುತ್ತದೆ ಎಂದು ಅಧಿಕೃತವಾಗಿ ಮಾಹಿತಿ ಬಂದಿದೆ. ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಫಲಾನುಭವಿಗಳ ಪಟ್ಟಿ ತಯಾರಿಸಿ ಅವರ ಅಕೌಂಟ್ ಗೆ ಹಣವನ್ನು ಜಮಾವಣೆ ಮಾಡಲಾಗುತ್ತದೆ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ ಕೇಂದ್ರ ಸರ್ಕಾರದ ಯೋಜನೆಯ ಲಾಭವನ್ನು ಪಡೆಯಿರಿ. ಕೊರೋನಾ ವೈರಸ್ ನಿಂದ ರಕ್ಷಣೆ ಮಾಡಲು ಲಾಕ್ ಡೌನ್ ಮಾಡಿರುವುದರಿಂದ ಬಡಜನರು ಕೆಲಸವನ್ನು ಕಳೆದುಕೊಂಡು ತಮ್ಮ ಊರುಗಳಿಗೆ ವಾಪಸ್ಸಾಗಿ ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳುತ್ತಿದ್ದಾರೆ ಕೇಂದ್ರ ಸರ್ಕಾರ ಈ ರೀತಿ ಯೋಚಿಸಿರುವುದು ಬಡ ಜನರಿಗೆ ಅನುಕೂಲವಾಗಲಿದೆ.

Leave a Comment