Free Electricity: ಸರ್ಕಾರದಿಂದ 200 ಯೂನಿಟ್ ಉಚಿತ ಪಡೆಯಲು ಅರ್ಜಿ ಎಲ್ಲಿ ಸಲ್ಲಿಸಬೇಕು? ಏನೆಲ್ಲಾ ದಾಖಲೆಗಳು ಬೇಕು ಇಲ್ಲಿದೆ ಮಾಹಿತಿ

Free Electricity Scheme: ಕಾಂಗ್ರೆಸ್ ಸರ್ಕಾರ ಆದೇಶ ನೀಡಿದಂತೆ ಉಚಿತ ವಿದ್ಯುತ್ (Free Electricity) ನೀಡುವ ಸಲುವಾಗಿ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಅದರಂತೆ ಜೂನ್ 7 ರಂದು ಕರ್ನಾಟಕ ಇಂಧನ ಸಚಿವ ಕೆಜೆ ಜಾರ್ಜ್ (K.J. George) ಅವರು ಗೃಹ ಜ್ಯೋತಿ ಯೋಜನೆ ಮತ್ತು ಅದರ ಪ್ರಯೋಜನಗಳನ್ನು ಜನರು ಹೇಗೆ ಪಡೆಯಬಹುದು ಎಂಬ ಮಾಹಿತಿ ನೀಡಿದ್ದಾರೆ. 200 ಯೂನಿಟ್ಗಿಂತ ಕಡಿಮೆ ಬಳಕೆ ಮಾಡುವ ಗ್ರಾಹಕರಿಗೆ ಮಾತ್ರ ಈ ಸೌಲಭ್ಯ ಲಭ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ದಿನಾಂಕ 2/06/2023 ರಂದು ನೆಡೆದ ಸಚಿವ ಸಂಪುಟದ ಸಭೆಯಲ್ಲಿ ಗೃಹಜ್ಯೋತಿ ಯೋಜನೆಯನ್ನು ಅನುಷ್ಠಾನಗೊಳಿಸಿವ ಬಗ್ಗೆ ವಿಷಯ ಮಂಡನೆ ಯಾಗಿತ್ತು. ಗೃಹಜ್ಯೋತಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿರುವ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ 10 10 %ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಅನುಮತಿಸಿ ಅದಕ್ಕೆ ಅನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ಒದಗಿಸಲು ಹಾಗೂ 200 ಯೂನಿಟ್ ಬಳಕೆಯನ್ನು ಮೀರಿದ ಗ್ರಾಹಕರು ಸಂಪೂರ್ಣ ವಿದ್ಯುತ್ ಬಿಲ್ಲನ್ನು ಪವತಿಸಲು ಸರ್ಕಾರ ತಿಳಿಸಲು ಇಚ್ಛೆಸಿದೆ.

ಈ ಯೋಜನೆಯನ್ನು ಜೂಲೈ ತಿಂಗಳ 2023 ರ ವಿದ್ಯುತ್ ಬಳಕೆಗೆ ಆಗಸ್ಟ್ ತಿಂಗಳಿನಿಂದ ನೀಡುವ ಬಿಲ್ಲಿಗೆ ಅನ್ವಯವಾಗುವಂತೆ ಷರತ್ತುಗಳನ್ನು ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ. ಪ್ರತಿ ತಿಂಗಳ ಮೀಟರ್ ರೀಡಿಂಗ್ ಮಾಡಿದಾಗ, ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ಲನ್ನು ನಮೂದಿಸುವುದು.ಗೃಹ ವಿದ್ಯುತ್ ಬಳಕೆದರಾರ ಅರ್ಹ ಮೊತ್ತವನ್ನು ಬಿಲ್ ನಲ್ಲಿ ಕಡಿತಗೊಳಿಸಿ ಉಳಿದ ಮೊತ್ತವನ್ನು ಗ್ರಾಹಕರಿಗೆ (net bill) ನೀಡುವುದು ಹಾಗೂ ಗ್ರಾಹಕರು net bill ಅನ್ನು ಪವತಿಸುವುದು.

ಈ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. 200 ಯೂನಿಟ್ಗಿಂತ ಒಳಗೆ ವಿದ್ಯುತ್ ಬಳಸಿದ್ದಲ್ಲಿ ಅವರಿಗೆ ಶೂನ್ಯ ಬಿಲ್ಲನ್ನು ನೀಡಲಾಗುವುದು (ಅಂದರೆ ಉಚಿತವಾಗಿ) ಬಾಡಿಗೆದಾರರು ಆಧಾರ್ ಕಾರ್ಡ್ ಅಥವಾ R,R ಕೊಡಬೇಕು ಅಥವಾ ಲೀಜ್ ಅಗ್ರಿಮೆಂಟ್, ಓಟರ್ ಐಡಿ ಅಥವಾ ಕರಾರು ಪತ್ರವನ್ನು ನೀಡಬೇಕು. ನಾವು ಬಾಡಿಗೆ ಮನೆಯಲ್ಲಿ ಇದ್ದೆವೇ ಎನ್ನುವುದರ ಬಗ್ಗೆ ದಾಖಲೆ ನೀಡಬೇಕು. ಜೂನ್ 15 ರಿಂದ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಲು ಜೂಲೈ 5 ರ ತನಕ ಕಾಲಾವಕಾಶವಿದೆ. ಇದನ್ನೂ ಓದಿ.. Gruha Jyothi: 200 ಯೂನಿಟ್ ಉಚಿತ ವಿದ್ಯುತ್ ಜನರಿಗೆ ಸಿಕ್ತು ಗುಡ್ ನ್ಯೂಸ್.

Leave a Comment