ಕನ್ನಡ ಚಿತ್ರರಂಗಕ್ಕೆ ಯಾವ ಕೆಟ್ಟ ದೃಷ್ಟಿ ಬಿದ್ದಿದೆಯೋ ಗೊತ್ತಿಲ್ಲ. ಕನ್ನಡ ಚಿತ್ರರಂಗಕ್ಕೆ ಕೆಡುಕು ಕಾಲ ಅಂಟಿದೆ. ಒಂದರ ಮೇಲೆ ಇನ್ನೊಂದು ಕಹಿ ಸುದ್ದಿ ಹಾಗೂ ಆ’ಘಾ’ತ ಸುದ್ದಿ ಕೇಳಿ ಬರುತ್ತಿದೆ. ಮೊದಲು ಚಿರು ಸರ್ಜಾ ಅದಾದ ಮೇಲೆ ಪುನೀತ್ ರಾಜ್ ಕುಮಾರ್ ನಂತರ ಸಂಚಾರಿ ವಿಜಯ್ ಹೀಗೆ ಒಬ್ಬರ ನಂತರ ಇನ್ನೊಬ್ಬ ಯುವ ನಟನನ್ನು ಕಳೆದುಕೊಂಡಿದ್ದೇವೆ. ಇನ್ನೂ ಕೂಡ ಇವರ ನೆನಪು ನಮ್ಮನ್ನು ಕಾಡುತ್ತಿವೆ ಅಷ್ಟರಲ್ಲೇ ಇದೀಗ ಇನ್ನೊಬ್ಬ ನಟ ಇಹಲೋಕ ತ್ಯಜಿಸಿದ್ದಾರೆ.
ಕನ್ನಡ ಚಿತ್ರರಂಗದ ಪ್ರಖ್ಯಾತ ಹಾಸ್ಯನಟ ಮೋಹನ್ ಅವರು ಇಂದು ಬೆಳಿಗ್ಗೆ (ಮೇ 7 2022 ) ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಸಿನಿಮಾಗಳಲ್ಲಿಯೇ ಆಗಲಿ ಸೀರಿಯಲ್ ಗಳಲ್ಲಿ ಆಗಲಿ ಯಾವ ಪಾತ್ರ ಕೊಟ್ಟರೂ ನಿರರ್ಗಳವಾಗಿ ಅಭಿನಯ ಮಾಡುತ್ತಿದ್ದ ಮೋಹನ್ ಅವರು ಅಭಿಮಾನಿಗಳ ಫೇವರಿಟ್ ಕಾಮಿಡಿ ಮತ್ತು ಪೊಷಕ ನಟನಾಗಿದ್ದರು. ಇವರು ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಇವರು ಸಿನಿಮಾಗಳಲ್ಲಿ ಕೇವಲ ನಿಮಿಷಗಳ ಕಾಲ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದರು ಸಹ ಇರುವಷ್ಟು ಸಮಯ ತಮ್ಮ ಅದ್ಭುತ ನಟನೆಯಿಂದ ಅಭಿಮಾನಿಗಳನ್ನು ಗೆಲ್ಲುತ್ತಿದ್ದರು.
ಮೋಹನ್ ಅವರು ಚೆಲ್ಲಾಟ ಚಿತ್ರದಲ್ಲಿ ನಟಿಸಿದ್ದ ಮಧು ಮಗನ ಪಾತ್ರದ ಅಭಿನಯದಿಂದ ಹಿಡಿದು ಮೊನ್ನೆ ಬಿಡುಗಡೆ ಯಾದ ಕೆಜಿಎಫ್ ಚಿತ್ರದ ವರೆಗೂ ಕೂಡ ಇವರ ನಟನೆ ಮರೆಯುವಂತಿಲ್ಲ. ಕೆಜಿಎಫ್ ಚಿತ್ರದಲ್ಲಿ ಅವರು ಹೇಳಿರುವ ಒಂದೇ ಡೈಲಾಗ್ “ಗ್ಯಾಂಗ್ ಕಟ್ಕೊಂಡು ಬರೋನು ಗ್ಯಾಂಗ್ಸ್ಟರ್. ಅವನು ಒಬ್ಬನೇ ಬರೋನು ಮಾನ್ಸ್ಟರ್” ತುಂಬಾ ಫೇಮಸ್ ಆಗಿತ್ತು. ಇಂತಹ ಜನಪ್ರಿಯ ಮತ್ತು ಟ್ಯಾಲೆಂಟೆಡ್ ನಟನನ್ನು ಕಳೆದುಕೊಂಡಿರುವುದು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.
50 ನೇ ವಯಸ್ಸಿಗೆ ತಮ್ಮ ತಾಯಿ, ಹೆಂಡತಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಬಿಟ್ಟು ಮೋಹನ್ ಇಹ ಲೋಕ ತ್ಯಜಿಸಿದ್ದಾರೆ. ಸಿನಿಮಾದಲ್ಲಿ ನಟಿಸಿಕೊಂಡು ಆರಾಮಾಗಿ ಇದ್ದ ಮೋಹನ್ ಗೆ ಇದ್ದಕ್ಕಿದ್ದಂತೆ ಆಗಿದ್ದೇನು.. ಲಾಕ್ ಡೌನ್ ಸಮಯದಲ್ಲಿ ಮೋಹನ್ ಅವರಿಗೆ ಜೀವನ ನಡೆಸೋಕೆ ತುಂಬಾ ಕಷ್ಟ ಆಗಿತ್ತು. ಆ ಸಮಯದಲ್ಲಿ ಉಪೇಂದ್ರ ಅವರು ಮೋಹನ್ ಗೆ ಹಣ ಸಹಾಯ ಮಾಡಿದ್ದರು. ಅಷ್ಟೇ ಅಲ್ಲ ಹಲವು ದಿನಗಳಿಂದ ಮೋಹನ್ ಅವರು ಲಿವರ್ ಸಮಸ್ಯೆ ಇಂದ ಕೂಡ ಬಳಲುತ್ತಿದ್ದರು.
ಆಗಾಗ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಎರಡು ಮೂರು ದಿನಗಳಿಂದ ಮೋಹನ್ ಅವರ ಆರೋಗ್ಯ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು.ಲಿವರ್ ಸಮಸ್ಯೆ ಗೆ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ(ಮೇ 7) ರಂದು ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ವಾಸಿಸುತ್ತಿದ್ದ ಮೋಹನ್ ಅವರ ಮೃ’ತ’ ದೇಹವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಕುಟುಂಬಸ್ಥರು, ಬಂಧುಗಳು, ಕಲಾವಿದರು ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ನಾವೆಲ್ಲ ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ..