ಮಕ್ಕಳೊಂದಿಗೆ ಡ್ಯಾನ್ಸ್ ಮಾಡಿ ಕುಣಿದು ಕುಪ್ಪಳಿಸಿದ ಟೀಚರ್ ಗೆ ಮೋದಿ ಕೈಯಿಂದ ಸನ್ಮಾನ ಇಲ್ಲಿದೆ ನೋಡಿ ಟೀಚರಮ್ಮನ ಡ್ಯಾನ್ಸ್ ವೀಡಿಯೋ

ಗುರು ದೇವೋ ಭವ ಎಂಬ ಮಾತಿದೆ ಗುರುಗಳು ದೇವರ ಸಮಾನ ದಾರಿತಪ್ಪಿದ ಮಕ್ಕಳನ್ನು ಸರಿ ದಾರಿಗೆ ಕರೆದುಕೊಂಡು ಹೋಗುವವರೇ ಗುರುಗಳು. ಈಗಿನ ಕಾಲದ ಮಕ್ಕಳು ಗುರುಗಳಿಗೆ ಹಿರಿಯರಿಗೆ ಗೌರವ ಕೊಡುವುದನ್ನು ಮರೆತಿದ್ದಾರೆ ಶಾಲೆಗಳಲ್ಲಿ ಟೀಚರ್ ಗಳಿಗೆ ಸಿಗುವ ಗೌರವ ಸಿಗುತ್ತಿಲ್ಲ. ಇಂತಹ ಕಾಲದಲ್ಲಿ ಮಕ್ಕಳನ್ನು ಕೂಡ ದೇವರಂತೆ ಕಂಡು ತರಗತಿಯಲ್ಲಿ ಮಕ್ಕಳೊಂದಿಗೆ ಆನಂದವಾಗಿ ಡ್ಯಾನ್ಸ್ ಮಾಡುತ್ತಾ ಇರುವ ಟೀಚರ್ ವೀಡಿಯೋ ವೈರಲ್ ಆಗುತ್ತಿದೆ.

ಬೋಧನೆಯೆಂದರೆ ಶಿಕ್ಷಕರು ಮಕ್ಕಳಿಗೆ ಕೇವಲ ಪಾಠ ಹೇಳುವುದು ಅಷ್ಟೆ ಅಲ್ಲ. ಜೀವನದ ಮಾರ್ಗದರ್ಶನವನ್ನು ಕೂಡ ನೀಡಬೇಕು. ಹಾಗೆ ಮಕ್ಕಳಿಂದ ಕೂಡ ಶಿಕ್ಷಕರು ಪಾಠ ವನ್ನು ಕಲಿಯಬೇಕು ಎನ್ನುವುದು ಮನು ಗುಲಾಟಿ ಟೀಚರಮ್ಮನವರ ತತ್ವ. ಈ ಟೀಚರ್ ಸಾಮಾನ್ಯದವರಲ್ಲ ಇವರು ವಿಭಿನ್ನವಾಗಿ ಮಕ್ಕಳಿಗೆ ಕಲಿಸುವ ಪಾಠಗಳು ಮೋದಿ ಅವರನ್ನು ಕೂಡ ಮೆಚ್ಚಿಸಿದೆ. ಅವರಿಗೆ ಹಲವಾರು ಸ್ಟೇಟ್ ಮತ್ತು ನ್ಯಾಷನಲ್ ಅವಾರ್ಡ್ ಗಳು ಕೂಡ ಸಿಕ್ಕಿದೆ.

ಮನು ಗುಲಾಟಿ ಎಂಬ ಈ ಟೀಚರ್ ಹುಟ್ಟಿ ಬೆಳೆದದ್ದು ದಿಲ್ಲಿಯಲ್ಲಿ ಇವರು ದೆಹಲಿ ಯುನಿವರ್ಸಿಟಿಯಿಂದ ಎಂ ಇ ಡಿ ಪದವಿಯನ್ನು ಪಡೆದಿದ್ದಾರೆ ಹಾಗೆ ಜಮಿಯಾ ಮಲಿಯಾ ಎಂಬ ಯೂನಿವರ್ಸಿಟಿಯಿಂದ ಪಿ ಎಚ್ ಡಿ ಪದವಿಯನ್ನೂ ಕೂಡ ಕಂಪ್ಲೀಟ್ ಮಾಡಿದ್ದಾರೆ.2004 ರಲ್ಲಿ ಇವರು ಖಾಸಗಿ ಶಾಲೆಯಲ್ಲಿ ಟೀಚರ್ ಆಗಿ ವೃತ್ತಿ ಜೀವನವನ್ನು ಆರಂಭಿಸಿದ್ದರು ನಂತರ 2011 ರಲ್ಲಿ ದೆಹಲಿಯ ಸರ್ಕಾರಿ ಶಾಲೆಯೊಂದರಲ್ಲಿ ಇವರಿಗೆ ಕೆಲಸ ಸಿಕ್ಕಿತು. ಇವರು ಸದ್ಯಕ್ಕೆ ಇಂಗ್ಲಿಷ್ ಟೀಚರ್ ಆಗಿ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ಟೀಚರ್ ಕೇವಲ ಮಕ್ಕಳ ಜೊತೆ ಟೀಚರ್ ಆಗಿ ಇರಲ್ಲ. ಇವರು ಮಕ್ಕಳ ಜೊತೆ ಒಬ್ಬ ಫ್ರೆಂಡ್ ತರ ಇರ್ತಾರೆ. ಮಕ್ಕಳ ಜೊತೆ ಆಟ ಆಡ್ತಾರೆ ಹಾಗೆ ಬೋರ್ಡ್ ಮುಂದೆ ನಿಂತು ಡ್ಯಾನ್ಸ್ ಮಾಡುತ್ತಾರೆ ಹಾಗೂ ಹಾಡು ಕೂಡ ಹಾಡುತ್ತಾರೆ. ಈ ಟೀಚರಮ್ಮ ಎಲ್ಲಾ ಮಕ್ಕಳಿಗೂ ಅಚ್ಚುಮೆಚ್ಚು. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹೊಸ ಆವಿಷ್ಕಾರವನ್ನು ಕಂಡು ಹಿಡಿದು ಮಕ್ಕಳಿಗೆ ಪಾಠ ಮಾಡುವುದರಲ್ಲಿ ಇವರು ಎತ್ತಿದ ಕೈ. ಇವರ ವಿಭಿನ್ನ ಮತ್ತು ವಿಶಿಷ್ಟ ರೀತಿಯ ಅಧ್ಯಾಪನದ ಶೈಲಿ ಮಕ್ಕಳಿಗೆ ತುಂಬಾ ಇಷ್ಟವಾಗುತ್ತೆ. ಮನು ಗುಲಾಟಿ ಅವರ ಪ್ರಕಾರ ನಮ್ಮ ತರಗತಿಯು ಕೇವಲ ಶೈಕ್ಷಣಿಕ ಕಲಿಕೆಯ ಮೇಲೆ ಕೇಂದ್ರೀಕರಿಸುವ ಸ್ಥಳವಲ್ಲ. ಇದು ನಮ್ಮ ಭಯ, ಆತಂಕ ಮತ್ತು ಉದ್ವೇಗವನ್ನು ಹೊರಹಾಕುವ ಮತ್ತು ಆತ್ಮವಿಶ್ವಾಸ, ಧೈರ್ಯ ಮತ್ತು ಧೈರ್ಯವನ್ನು ಉಸಿರಾಡುವ ಸ್ಥಳ.

ಈ ಟೀಚರ್ ಅವರ ನವೀನ ರೀತಿಯ ಕಲಿಕೆಯನ್ನು ಗುರುತಿಸಿ ಹಲವಾರು ಜನ ಇವರಿಗೆ ಪ್ರಶಸ್ತಿ ಮತ್ತು ಬಹುಮಾನ ನೀಡಿದ್ದಾರೆ. 2015 ರಲ್ಲಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಶಾಲಾ ಶಿಕ್ಷಕರಿಗೆ ರಾಷ್ಟ್ರೀಯ ICT ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈ ಟೀಚರ್ ಗೆ 2018 ರಲ್ಲಿ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಸಿಕ್ಕಿದೆ.. ಹಾಗೆ ಈ ಟೀಚರ್ ಮಾಡಿರುವ ಡ್ಯಾನ್ಸ್ ವಿಡಿಯೋಗಳನ್ನು ಮತ್ತು ಕಲಿಸುವ ವಿಧಾನ ನೋಡಿ ಸ್ವತಃ ನರೇಂದ್ರ ಮೋದಿಯವರೇ ಮೆಚ್ಚುಗೆ ವ್ಯಕ್ತಪಡಿಸಿ ಈ ಟೀಚರ್ ಅನ್ನು ಕರೆಸಿ ಪ್ರಶಂಸೆ ನೀಡಿ ಸನ್ಮಾನ ಮಾಡಿದ್ದಾರೆ. ತದನಂತರ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಂದ ಕೂಡ ಮನು ಗುಲಾಟಿ ಅವರು ಸನ್ಮಾನ ಸ್ವೀಕರಿಸಿದರು.

Leave a Comment